ಆ್ಯಪ್ನಗರ

ಪೂರ್ಣಗೊಳ್ಳದ ಅಂಬರೀಷ್‌ ಬಿಟ್ಟು ಹೋದ ಕೆಲಸ ಯಾವುದು?: ಸುಮಲತಾಗೆ ಎಚ್‌ಡಿಡಿ ಪ್ರಶ್ನೆ

ನನ್ನ 60 ವರ್ಷದ ರಾಜಕೀಯ ಜೀವನದಲ್ಲಿ ನಿಖಿಲ್‌ ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧಿಸಿದ ನಂತರ ಕೇಳಿ ಬರುತ್ತಿರುವ ಟೀಕೆಗಳಿಂದ ಹೆಚ್ಚು ನೋವಾಗಿದೆ ಎಂದು ಎಚ್‌ ಡಿ ದೇವೇಗೌಡರು ಬೇಸರ ವ್ಯಕ್ತ ಪಡಿಸಿದರು.

Vijaya Karnataka Web 14 Apr 2019, 10:10 am
ಮಂಡ್ಯ: ಅಂಬರೀಷ್‌ ನಿಧನರಾದಾಗ ಡಾ.ರಾಜ್‌ಕುಮಾರ್‌ ಅವರಿಗಿಂತಲೂ ಹೆಚ್ಚು ಗೌರವ ನೀಡಲಾಯಿತು. ಆದರೆ ಅದನ್ನು ಅವರ ಕುಟುಂಬ ಮರೆತಿದೆ ಎಂದು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಬೇಸರ ವ್ಯಕ್ತ ಪಡಿಸಿದ್ದಾರೆ.
Vijaya Karnataka Web H D Devegowda


ಮಂಡ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ ಎಚ್‌ ಡಿ ದೇವೇಗೌಡರು, ಅಂಬರೀಷ್‌ ಬಿಟ್ಟು ಹೋಗಿರುವ ಅಪೂರ್ಣ ಕೆಲಸ ಪೂರ್ಣ ಮಾಡಲು ಚುನಾವಣೆಗೆ ನಿಂತಿರುವುದಾಗಿ ಹೇಳುತ್ತಿರುವವರು ಯಾವುದು ಅಪೂರ್ಣವೆಂದು ಈವೆರೆಗೂ ಸ್ಪಷ್ಟಪಡಿಸಿಲ್ಲ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸುಮಲತಾ ಅಂಬರೀಶ್‌ ವಿರುದ್ಧ ಹರಿಹಾಯ್ದರು.

ಇದೇ ಮೊದಲ ಬಾರಿಗೆ ಸುಮಲತಾ ವಿರುದ್ಧ ಮಾತನಾಡಿದ ದೇವೇಗೌಡರು, ನನ್ನ 60 ವರ್ಷದ ರಾಜಕೀಯ ಜೀವನದಲ್ಲಿ ನಿಖಿಲ್‌ ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧಿಸಿದ ನಂತರ ಕೇಳಿ ಬರುತ್ತಿರುವ ಟೀಕೆಗಳಿಂದ ಹೆಚ್ಚು ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಎಚ್‌ಡಿ ದೇವೇಗೌಡರು ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯಾಗಿ ತುಮಕೂರು ಲೋಕಸಭೆ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಒಟ್ಟಾರೆ ಕಣಕ್ಕೆ ಇಳಿದಿರುವ 7 ಜೆಡಿಎಸ್‌ ಅಭ್ಯರ್ಥಿಗಳ ಪೈಕಿ ಮೂವರು ದೇವೇಗೌಡ ಕುಟುಂಬ ಸದಸ್ಯರು ಎಂಬುದು ಗಮನಾರ್ಹ. ಕಾಂಗ್ರೆಸ್‌-ಜೆಡಿಎಸ್‌ 22-8 ಸೂತ್ರದಡಿ ಸೀಟು ಹಂಚಿಕೆ ಮಾಡಿಕೊಂಡಿದ್ದವು. ಕೊನೆಗೆ ಜೆಡಿಎಸ್‌ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಮೂಲಕ 23-8 ಸೂತ್ರದಡಿ ಚುನಾವಣೆ ಎದುರಿಸುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌