ಆ್ಯಪ್ನಗರ

ಸಚಿವರಾಗಿ ಅಧಿಕಾರ ಅನುಭವಿಸಿದಾಗ ಬೇಗ್‌ಗೆ ಕಾಂಗ್ರೆಸ್ ಚೆನ್ನಾಗಿತ್ತು, ಈಗ ಚೆನ್ನಾಗಿಲ್ಲ: ಜಮೀರ್‌

ಮತಗಟ್ಟೆ ಸಮೀಕ್ಷೆ ಎನ್‌ಡಿಎ ಪರವಾಗಿದ್ದರೂ ನಮ್ಮ ಪಕ್ಷದ ಮುಸ್ಲಿಮ್‌ ನಾಯಕರು ಬಿಜೆಪಿ ಕಡೆ ತಲೆ ಹಾಕುವುದಿಲ್ಲ. ರೋಷನ್‌ ಬೇಗ್‌ ಬಹುಶಃ ಪಕ್ಷ ಬದಲಿಸುವ ಮಾತನಾಡಿರಹುದು. ಅವರು ಎಲ್ಲಿಗೆ ಬೇಕಾದರೂ ಹೋಗಲಿ ಎಂದು ತಿರುಗೇಟು ನೀಡಿದರು.

Vijaya Karnataka Web 21 May 2019, 4:03 pm
ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಮುಸ್ಲಿಮ್‌ ನಾಯಕರು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ. ಅಧಿಕಾರ ಸಿಕ್ಕಿಲ್ಲ ಎಂದು ರೋಷನ್‌ ಬೇಗ್‌ ಟೀಕೆ ಮಾಡುವುದು ಸರಿಯಲ್ಲ ಎಂದು ಸಚಿವ ಜಮೀರ್‌ ಅಹಮದ್ ಖಾನ್‌ ತಿಳಿಸಿದ್ದಾರೆ.
Vijaya Karnataka Web ಜಮೀರ್‌ ಅಹಮದ್‌
ಜಮೀರ್‌ ಅಹಮದ್‌


ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಮೀರ್‌ ಮಾತನಾಡಿದರು.

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ರೋಷನ್‌ ಬೇಗ್‌ ಸಚಿವರಾಗಿ ಮಜಾ ಉಡಾಯಿಸಿದರು. ಆಗ ಅವರಿಗೆ ಕಾಂಗ್ರೆಸ್‌ ಚೆನ್ನಾಗಿತ್ತು. ಈಗ ಅವರಿಗೆ ಪಕ್ಷ ಸರಿ ಇಲ್ಲವೇ ಎಂದು ಪ್ರಶ್ನಿಸಿದರು.

ರೋಷನ್‌ ಬೇಗ್‌ ಹೇಳಿದ ತಕ್ಷಣ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್‌ ಅವರನ್ನು ಬದಲಾವಣೆ ಮಾಡಲು ಸಾಧ್ಯವೇ. ಈ ರೀತಿ ಆಗುವುದಿಲ್ಲ. ರೋಷನ್‌ ಬೇಗ್‌ ಅಧಿಕಾರ ಇಲ್ಲದೇ ಈ ರೀತಿ ಹೇಳಿರಬಹುದೇನೋ ಗೊತ್ತಿಲ್ಲ ಎಂದು ಜಮೀರ್‌ ತಿಳಿಸಿದರು.

ಮತಗಟ್ಟೆ ಸಮೀಕ್ಷೆ ಎನ್‌ಡಿಎ ಪರವಾಗಿದ್ದರೂ ನಮ್ಮ ಪಕ್ಷದ ಮುಸ್ಲಿಮ್‌ ನಾಯಕರು ಬಿಜೆಪಿ ಕಡೆ ತಲೆ ಹಾಕುವುದಿಲ್ಲ. ರೋಷನ್‌ ಬೇಗ್‌ ಬಹುಶಃ ಪಕ್ಷ ಬದಲಿಸುವ ಮಾತನಾಡಿರಹುದು. ಅವರು ಎಲ್ಲಿಗೆ ಬೇಕಾದರೂ ಹೋಗಲಿ ಎಂದು ತಿರುಗೇಟು ನೀಡಿದರು.

ನನ್ನನ್ನು ಮಂತ್ರಿ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಯಾರಿಗೂ ಕೂಡ ಸುಮ್ಮನೆ ಅಧಿಕಾರ ಸಿಗಲ್ಲ. ಹೈಕಮಾಂಡ್‌ ಸೂಕ್ತವಾಗಿ ಅಳೆದು ತೂಗಿ ನಿರ್ಧಾರ ಕೈಗೊಳ್ಳುತ್ತದೆ ಎಂದರು.

ರೋಷನ್‌ ಬೇಗ್‌ ಯಾವ ಕಾರಣಕ್ಕೆ ಕಾಂಗ್ರೆಸ್‌ ಸರಿ ಇಲ್ಲ ಎನ್ನುತ್ತಿದ್ದಾರೆ ಗೊತ್ತಿಲ್ಲ. ಮತಗಟ್ಟೆ ಸಮೀಕ್ಷೆ ಬರುವವರೆಗೂ ಕಾಂಗ್ರೆಸ್‌ ಸರಿ ಇತ್ತು. ಈಗ ಸರಿ ಇಲ್ಲ. ಬೇಗ್‌ ಮಂತ್ರಿಯಾದಾಗ ಸಿದ್ದರಾಮಯ್ಯ ಚೆನ್ನಾಗಿದ್ದರು. ಈಗ ಚೆನ್ನಾಗಿಲ್ಲ ಎಂದು ನಂಬುವುದು ಹೇಗೆ ಎಂದು ಜಮೀರ್‌ ಅಹಮದ್ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ