ಆ್ಯಪ್ನಗರ

48 ಗಂಟೆ ಬಹಿರಂಗ ಪ್ರಚಾರ ನಿರ್ಬಂಧ ಜಾಲತಾಣಗಳಿಗೂ ವಿಸ್ತರಣೆ

ಸ್ವಯಂ ಪ್ರೇರಣೆಯ ನೀತಿ ಸಂಹಿತೆ ಅಳವಡಿಸಿಕೊಂಡಿರುವ ಫೇಸ್‌ಬುಕ್‌, ಟ್ವಿಟರ್‌ ಮತ್ತು ವಾಟ್ಸ್‌ಆ್ಯಪ್‌ಗಳು ಚುನಾವಣಾ ಆಯೋಗವು ಉಲ್ಲಂಘನೆ ಪ್ರಕರಣಗಳನ್ನು ಗಮನಕ್ಕೆ ತಂದ ಮೂರು ಗಂಟೆಯೊಳಗೆ ಅಂತಹ ಪ್ರಚಾರ ಸಾಹಿತ್ಯ/ವಿಡಿಯೊವನ್ನು ತೆಗೆದುಹಾಕುವುದಾಗಿ ಹೇಳಿವೆ.

Vijaya Karnataka 22 Mar 2019, 5:00 am
ಹೊಸದಿಲ್ಲಿ: ಮತದಾರರ ಮೇಲೆ ಕೊನೆಯ ಕ್ಷ ಣದಲ್ಲಿ ಪ್ರಭಾವ ಬೀರುವುದನ್ನು ತಪ್ಪಿಸಲು ಚುನಾವಣಾ ವ್ಯವಸ್ಥೆಯಲ್ಲಿ ನಿಗದಿಯಾಗಿರುವ ಕೊನೆಯ 48 ಗಂಟೆಗಳ ಬಹಿರಂಗ ಪ್ರಚಾರ ನಿರ್ಬಂಧವನ್ನು ಸಾಮಾಜಿಕ ಮಾಧ್ಯಮಗಳಿಗೂ ವಿಸ್ತರಿಸಲಾಗಿದೆ.
Vijaya Karnataka Web social


ಸೋಷಿಯಲ್‌ ಮಿಡಿಯಾಗಳಲ್ಲಿ ಈ 'ಮೌನದ ಅವಧಿ'ಯಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಸರಕು ಕಾಣಿಸಿಕೊಳ್ಳುವಂತಿಲ್ಲ. ಈ ನಿಟ್ಟಿನಲ್ಲಿ ಸ್ವಯಂ ಪ್ರೇರಣೆಯ ನೀತಿ ಸಂಹಿತೆ ಅಳವಡಿಸಿಕೊಂಡಿರುವ ಫೇಸ್‌ಬುಕ್‌, ಟ್ವಿಟರ್‌ ಮತ್ತು ವಾಟ್ಸ್‌ಆ್ಯಪ್‌ಗಳು ಚುನಾವಣಾ ಆಯೋಗವು ಉಲ್ಲಂಘನೆ ಪ್ರಕರಣಗಳನ್ನು ಗಮನಕ್ಕೆ ತಂದ ಮೂರು ಗಂಟೆಯೊಳಗೆ ಅಂತಹ ಪ್ರಚಾರ ಸಾಹಿತ್ಯ/ವಿಡಿಯೊವನ್ನು ತೆಗೆದುಹಾಕುವುದಾಗಿ ಹೇಳಿವೆ.

ಭಾರತೀಯ ಅಂತರ್ಜಾಲ ಮತ್ತು ಮೊಬೈಲ್‌ ಒಕ್ಕೂಟ (ಐಎಎಂಎಐ) ಹಾಗೂ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಗೂಗಲ್‌, ಶೇರ್‌ಚಾಟ್‌ ಸಂಸ್ಥೆಯ ಪ್ರತಿನಿಧಿಗಳ ಜತೆ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

1951ರ ಜನ ಪ್ರತಿನಿಧಿ ಕಾಯಿದೆಯ 126ನೇ ವಿಧಿಯು 'ಮೌನದ ಅವಧಿ'ಯನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದು, ಮತದಾನಕ್ಕೂ ಮುನ್ನ 48 ಗಂಟೆಗಳ ಅವಧಿಯಲ್ಲಿ ಬಹಿರಂಗ ಪ್ರಚಾರವನ್ನು ನಿಷೇಧಿಸುತ್ತದೆ. ಈ ಕಾಯಿದೆಯಡಿ 48 ಗಂಟೆಗಳ ತರುವಾಯವೂ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷಗಳ ಪ್ರಚಾರ ಸಾಹಿತ್ಯ ಸರಕು/ವಿಡಿಯೊಗಳಿದ್ದು ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಅಂತಹವುಗಳನ್ನು ಮೂರು ಗಂಟೆಯೊಳಗೆ ತೆಗೆದುಹಾಕಲಾಗುವುದು ಎಂದು ಪ್ರಮುಖ ಸೋಷಿಯಲ್‌ ಮಿಡಿಯಾಗಳು ತಿಳಿಸಿವೆ. ಸಿನ್ಹಾ ಸಮಿತಿಯ ಶಿಫಾರಸಿನಂತೆ ಅವು ಈ ನಿಯಮ ಪಾಲನೆಗೆ ಒಪ್ಪಿವೆ ಎಂದು ಚುನಾವಣಾ ಆಯೋಗ ಹೇಳಿದೆ. ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗದ ಮಧ್ಯೆ ಐಎಎಂಎಐ ಕಾರ್ಯ ನಿರ್ವಹಿಸಲಿದೆ. ಈಗಾಗಲೇ ಆಯೋಗವು ಪಾರದರ್ಶಕತೆ ತರಲು ಪೇಯ್ಡ್‌ ರಾಜಕೀಯ ಜಾಹೀರಾತುಗಳ ಮೇಲೂ ಕಣ್ಣಿಟ್ಟಿದೆ.

ಟ್ವಿಟರ್‌ ಪ್ರವೇಶಿಸಿದ ಚುನಾವಣಾ ಆಯೋಗ

ಕಳೆದ ಲೋಕಸಭೆ ಚುನಾವಣೆಯಂತೆ ಈ ಬಾರಿಯೂ ಚುನಾವಣೆಯಲ್ಲೂ ಸಾಮಾಜಿಕ ಜಾಲತಾಣಗಳು ಪ್ರಭಾವ ಬೀರಲಿದ್ದು, ಪಕ್ಷಗಳು ಇವುಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿವೆ. ಟ್ವಿಟರ್‌ನಲ್ಲಿ ಎಲೆಕ್ಷನ್‌ ಹವಾ ಜೋರಾಗುತ್ತಿದ್ದಂತೆಯೇ ಚುನಾವಣಾ ಆಯೋಗವು ಈ ಜಾಲತಾಣ ವೇದಿಕೆ ಪ್ರವೇಶಿಸಿದ್ದು ಘ್ಕಿಃಉಇಐಖ್ಖಉಉP ಟ್ವಿಟರ್‌ ಅಕೌಂಟ್‌ ತೆರೆದಿದೆ. ಜನಸಾಮಾನ್ಯರು ಚುನಾವಣೆ ಮಾಹಿತಿ ಕೋರಿ ಹಾಗೂ ಮತದಾರ ಪಟ್ಟಿಯ ಬಗೆಗಿನ ಗೊಂದಲಗಳಿದ್ದರೆ ಟ್ವಿಟರ್‌ನಲ್ಲಿಯೇ ಪ್ರಶ್ನೆ ಕೇಳಿ ಪರಿಹರಿಸಿಕೊಳ್ಳಬಹುದು. 'ದೇಶ್‌ ಕಾ ಮಹಾ ತೊಯ್ಯರ್‌' ಎಂಬ ಹ್ಯಾಶ್‌ಟಾಗ್‌ನೊಂದಿಗೆ ಮತದಾನ ಕುರಿತು ಜಾಗೃತಿ ಅಭಿಯಾನ ಕೈಗೊಂಡಿದೆ. ಖಾತೆ ತೆರೆದ ಒಂದು ಗಂಟೆಯೊಳಗೆ ಒಂದು ಸಾವಿರ ಫಾಲೋವರ್‌ಗಳನ್ನು ಹೊಂದಿದೆ. ಮತದಾನ ಕುರಿತು ಜಾಗೃತಿ ಮೂಡಿಸುವ ಹಾಗೂ ಮೇಘಾಲಯದ ಮುಖ್ಯ ಚುನಾವಣಾ ಆಯುಕ್ತರ ಕುರಿತ ಎರಡು ವಿಡಿಯೊಗಳನ್ನು ಈ ಟ್ವಿಟರ್‌ ಅಕೌಂಟ್‌ ಮೂಲಕ ಆಯೋಗ ಅಪ್‌ಲೋಡ್‌ ಮಾಡಿದೆ. ಆಯೋಗ ಈಗಾಗಲೇ 1950 ಸಹಾಯವಾಣಿಯನ್ನು ತೆರೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌