ಆ್ಯಪ್ನಗರ

ಮತದಾರರ ಪಟ್ಟಿಯಲ್ಲಿದ್ದರು ಬಾಹುಬಲಿ, ಇಡ್ಲಿ, ಸನ್‌ ಆಫ್‌ ಮೋದಿ!

ಮೋದಿ, ಸನ್‌ ಆಫ್‌ ಮೋದಿ, ನಿಟ್‌ ಸೆಕ್ಸ್‌ ಎಂಬಿತ್ಯಾದಿ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರಿವೆ. ​​ಅಸಲಿಗೆ ಇವರು ಮತದಾರರೇ ಅಲ್ಲ. ಇನ್ನು ಕೆಲವರ ಹೆಸರುಗಳು ತಪ್ಪಾಗಿ ನಮೂದಾಗಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

TOI.in 13 Mar 2019, 2:24 pm
ಹೈದರಾಬಾದ್‌: ಬಾಹುಬಲಿ, ಇಡ್ಲಿ, ಆ್ಯಪಲ್‌, ಹೈದರಾಬಾದ್‌ ಎಂಬೆಲ್ಲ ಹೆಸರಿನ ಮತದಾರರು ತೆಲಂಗಾಣದ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಾಲದ್ದಕ್ಕೆ ಕೆಲವರ ಹೆಸರಿನ ಮುಂದೆ ಸೆಕ್ಸ್‌, ಫ.. ಎಂಬಿತ್ಯಾದಿ ಅಸಂವಿಧಾನಿಕ ಪದಗಳಿರುವ ಹೆಸರುಗಳು ಕಾಣಿಸಿಕೊಂಡಿವೆ.
Vijaya Karnataka Web Voter list


ಅಸಲಿಗೆ ಇವರು ಮತದಾರರೇ ಅಲ್ಲ. ಇನ್ನು ಕೆಲವರ ಹೆಸರುಗಳು ತಪ್ಪಾಗಿ ನಮೂದಾಗಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮೋದಿ, ಸನ್‌ ಆಫ್‌ ಮೋದಿ, ನಿಟ್‌ ಸೆಕ್ಸ್‌ ಎಂಬಿತ್ಯಾದಿ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರಿವೆ. ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುತ್ತಿದ್ದೇವೆ. ಈಗಾಗಲೇ ಸುಮಾರು 18 ಅಸಂಬದ್ಧ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿದ್ದೇವೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಅನುಮಾನಸ್ಪದವಾಗಿ ಕಂಡು ಬಂದ ಸುಮಾರು 37 ಹೆಸರುಗಳನ್ನು ಮರು ಪರಿಶೀಲನೆಗೆ ಕಳುಹಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಖ್ಯಾತ ನಾಮರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇವೆಯೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ಬ್ಯಾಡ್ಮಿಂಟನ್‌ ತಾರೆ ಜ್ವಾಲಾ ಗುಟ್ಟಾ ಮತ್ತು ಐಪಿಎಸ್‌ ಅಧಿಕಾರಿ ಕೃಷ್ಣಪ್ರಸಾದ್‌ ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇಲ್ಲದಿರುವ ಬಗ್ಗೆ ವಿವಾದ ಸೃಷ್ಟಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌