ಆ್ಯಪ್ನಗರ

ಚುನಾವಣೆ 'ಲೋಕ'ದಲ್ಲಿ ರುಚಿ ಹೆಚ್ಚಿಸುತ್ತಿರುವ ಪಕ್ಷದ ಚಿಹ್ನೆಗಳ ಸಿಹಿ ತಿನಿಸು

ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಾಗೂ ವಿರೋಧ ಪಕ್ಷ ಬಿಜೆಪಿಯ ಕಮಲದ ಚಿಹ್ನೆಗಳನ್ನು ಸಿಹಿ ತಿಂಡಿಗಳ ಮೇಲೆ ಅಲಂಕರಿಸಲಾಗಿದೆ.

Ei Samay 15 Mar 2019, 9:01 pm
[This story originally published in Ei Samay on March 15, 2019]
Vijaya Karnataka Web Bengal Sweets 4


ಕೋಲ್ಕೊತಾ:
ಹೈ ವೋಲ್ಟೇಜ್ ಎಂದೇ ಬಿಂಬಿತವಾಗಿರುವ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ, ಕೋಲ್ಕತಾದ ಕೆಲವು ಸ್ವೀಟ್ ಮಾರ್ಟ್‌ಗಳು ಮತದಾರರು ಹಾಗೂ ಗ್ರಾಹಕರನ್ನು ಸೆಳೆಯಲು ಕಸರತ್ತು ನಡೆಸಿವೆ.

ಹೌದು, ಇಲ್ಲಿಯ ಕೆಲವು ಸ್ವೀಟ್ ಮಾರ್ಟ್‌ಗಳು ರ್ಬಾಚೊನಿ ಮಿಷ್ಟೀ ಅಥವಾ ಚುನಾವಣಾ ಸಿಹಿತಿಂಡಿಗಳನ್ನು ಸಿದ್ಧಪಡಿಸಿದ್ದು, ಅವುಗಳ ಮೇಲೆ ವಿವಿಧ ರಾಜಕೀಯ ಪಕ್ಷಗಳ ಚಿಹ್ನೆ ಮುದ್ರಿಸುವ ಮೂಲಕ ಗಮನ ಸೆಳೆಯುತ್ತಿವೆ.


ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಾಗೂ ವಿರೋಧ ಪಕ್ಷ ಬಿಜೆಪಿಯ ಕಮಲದ ಚಿಹ್ನೆಗಳನ್ನು ಸಿಹಿ ತಿಂಡಿಗಳ ಮೇಲೆ ಅಲಂಕರಿಸಲಾಗಿದೆ. ವಿಶೇಷವೆಂದರೆ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಮೈತ್ರಿ ಘೋಷಿಸದಿದ್ದರೂ, ಘಟಬಂಧನ್ ಬಿಂಬಿಸುವ ಸಿಹಿತಿಂಡಿಗಳು ಸಹ ಗ್ರಾಹಕರನ್ನು ಸೆಳೆಯುತ್ತಿವೆ. ಅದರಂತೆ ಸಿಪಿಐ(ಎಂ) ಪಕ್ಷವನ್ನು ಪ್ರತಿನಿಧಿಸುವ ಕೆಂಪು ಸುತ್ತಿಗೆ ಹಾಗೂ ಕುಡಗೋಲಿನ ಚಿತ್ರಗಳು ಸ್ವೀಟ್‌ಗಳ ಮೇಲೆ ರಾರಾಜಿಸುತ್ತಿವೆ.


ಲೋಕಸಭೆ ಚುನಾವಣೆಗಾಗಿ ವಿಶೇಷ ತಿಂಡಿಗಳನ್ನು ಸಿದ್ಧಪಡಿಸಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಬದಲಿಗೆ ನಾನೊಬ್ಬ ವ್ಯಾಪಾರಿಯಾಗಿದ್ದು, ಗ್ರಾಹಕರನ್ನು ಸೆಳೆಯುವುದು ಮುಖ್ಯ ಉದ್ದೇಶವಾಗಿದೆ ಎಂದು ಹೌರಾದ ಸಿಹಿ ತಿನಿಸುಗಳ ಮಾರಾಟಗಾರರಾದ ಕೆಶ್ಟೋ ಹಾಲ್ದರ್ ಹೇಳಿಕೊಂಡಿದ್ದಾರೆ.


ನಾನೊಬ್ಬ ಬಿಜೆಪಿ ಬೆಂಬಲಿಗ. ಆದರೆ, ಕೇಸರಿ ಬಣ್ಣದ ರಸಗುಲ್ಲ ಕೊಳ್ಳಲು ಇಚ್ಛಿಸುವುದಿಲ್ಲ ಎಂದು ಗ್ರಾಹಕರೊಬ್ಬರು ಹೇಳಿಕೊಂಡಿದ್ದಾರೆ. ಅದರಂತೆ, ಟಿಎಂಸಿ ಬೆಂಬಲಿಗರೊಬ್ಬರು ಸಹ ಇದೇ ಮಾತನ್ನು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌