ಆ್ಯಪ್ನಗರ

ಕಾಂಗ್ರೆಸ್‌ಗೆ ಮತ ಹಾಕಿದ್ದಕ್ಕೆ ಸಹೋದರನ ಮೇಲೆ ಗುಂಡಿನ ದಾಳಿ

ಮೇ 12ರಂದು ಇಜ್ಜರ್‌ನಲ್ಲಿ ಚುನಾವಣೆ ನಡೆದಿತ್ತು. ಸಹೋದರ ಸಂಬಂಧಿಗಳಾದ ಧರ್ಮೇಂದ್ರ ಮತ್ತು ರಾಜಾ ನಡುವೆ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದಂತೆ ಭಿನ್ನತೆ ಇತ್ತು. ಧರ್ಮೇಂದ್ರ ಬಿಜೆಪಿ ಬೆಂಬಲಿಗನಾಗಿದ್ದು ರಾಜಾ ಕಾಂಗ್ರೆಸ್‌ನ್ನು ಬೆಂಬಲಿಸುತ್ತಿದ್ದ.

Times Now 15 May 2019, 12:20 pm
ಇಜ್ಜರ್: ಕಾಂಗ್ರೆಸ್‌ಗೆ ಮತ ಹಾಕಿದನೆಂಬ ಕೋಪಕ್ಕೆ ಬಿಜೆಪಿ ಬೆಂಬಲಿಗನೊಬ್ಬ ತನ್ನ ಸಹೋದರ ಸಂಬಂಧಿಯೊಬ್ಬನ ಮೇಲೆ ಗುಂಡು ಹಾರಿಸಿದ ಘಟನೆ ಹರಿಯಾಣಾದಲ್ಲಿ ನಡೆದಿದೆ.
Vijaya Karnataka Web Shoot


ಮೇ 12ರಂದು ಇಜ್ಜರ್‌ನಲ್ಲಿ ಚುನಾವಣೆ ನಡೆದಿತ್ತು. ಸಹೋದರ ಸಂಬಂಧಿಗಳಾದ ಧರ್ಮೇಂದ್ರ ಮತ್ತು ರಾಜಾ ನಡುವೆ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದಂತೆ ಭಿನ್ನತೆ ಇತ್ತು. ಧರ್ಮೇಂದ್ರ ಬಿಜೆಪಿ ಬೆಂಬಲಿಗನಾಗಿದ್ದು ರಾಜಾ ಕಾಂಗ್ರೆಸ್‌ನ್ನು ಬೆಂಬಲಿಸುತ್ತಿದ್ದ. ಮತದಾನದ ಬಳಿಕ ರಾಜಾ ಕಾಂಗ್ರೆಸ್‌ಗೆ ಮತ ಹಾಕಿದೆ ಎಂದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಧರ್ಮೇಂದ್ರ ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಮಧ್ಯೆ ಬಂದ ರಾಜಾನ ತಾಯಿಗೂ ಗಂಭೀರ ಗಾಯಗಳಾಗಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಇಜ್ಜಾರ್ ಪೊಲೀಸ್ ಠಾಣಾಧಿಕಾರಿ ರಮೇಶ್ ಕುಮಾರ್, ಸೌಲಾನಾ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದೆ ಎಂಬ ಸುದ್ದಿ ಸೋಮವಾರ ನಮ್ಮ ಗಮನಕ್ಕೆ ಬಂತು. ಪೀಡಿತನ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.

ಪೀಡಿತನ ತಾಯಿ ಹೇಳುವ ಪ್ರಕಾರ ಇಬ್ಬರು ಸಹೋದರರ ನಡುವೆ ಮತ ಹಾಕುವ ವಿಷಯದಲ್ಲಿ ಜಗಳವಾಗಿತ್ತು. ಬಿಜೆಪಿಗೆ ಮತ ಹಾಕು ಎಂದು ಧರ್ಮೇಂದ್ರ ಹೇಳಿದ್ದನ್ನು ರಾಜಾ ಕೇಳಲಿಲ್ಲ. ಹೀಗಾಗಿ ಸಿಟ್ಟಿಗೆದ್ದ ಧರ್ಮೇಂದ್ರ ಗುಂಡಿನ ದಾಳಿ ನಡೆಸಿದ್ದಾನೆ.

ಗಾಯಾಳು ಈಗ ಚೇತರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌