ಆ್ಯಪ್ನಗರ

ನಾಥೂರಾಂ ಗೋಡ್ಸೆ ಯಾವತ್ತೂ ದೇಶಭಕ್ತನೇ: ಮತ್ತೆ ಸಾಧ್ವಿ ಪ್ರಜ್ಞಾ ಸಿಂಗ್ ವಿವಾದ

'ನಾಥೂರಾಂ ಗೋಡ್ಸೆ ದೇಶ್‌ಭಕ್ತ್‌ ಥೇ, ಹೈ, ಔರ್ ರಹೇಂಗೆ... ಉನ್‌ಕೋ ಆತಂಕ್‌ವಾದಿ ಕೆಹ್ನೇವಾಳೆ ಲೋಗ್ ಸ್ವಯಂ ಕೇ ಗಿರೇಬಾನ್ ಮೇ ಝಾಂಕ್‌ ಕೇ ದೇಖೆ. ಅಬ್‌ ಕೀ ಚುನಾವ್ ಮೇ ಏಸೇ ಲೋಗೋಂ ಕೋ ಜವಾಬ್ ದೇ ದಿಯೇ ಜಾಯೇಗಾ' (ನಾಥೂರಾಮ್ ಗೋಡ್ಸೆ ದೇಶಭಕ್ತ, ಆಗಿದ್ದ, ಮುಂದೆಯೂ ಆಗಿರುತ್ತಾನೆ. ಆತನನ್ನು ಭಯೋತ್ಪಾದಕ ಎಂದು ಕರೆಯುವವರು ಆತ್ಮಾವಲೋಕನ ಮಾಡಿಕೊಳ್ಳಲಿ. ಈ ಚುನಾವಣೆಯಲ್ಲಿ ಅಂಥವರಿಗೆ ಜನತೆ ಸರಿಯಾದ ಪಾಠ ಕಲಿಸುತ್ತಾರೆ) ಎಂದು ಪ್ರಜ್ಞಾ ಸಿಂಗ್ ಹೇಳಿದ್ದಾರೆ.

Times Now 16 May 2019, 5:33 pm
ಭೋಪಾಲ್: ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ದೇಶಭಕ್ತ ಹೌದು, ಆಗಿದ್ದ ಮತ್ತು ಮುಂದೆಯೂ ದೇಶಭಕ್ತನೇ ಆಗಿರುತ್ತಾನೆ ಎಂದು ಹೇಳಿಕೆ ನೀಡುವ ಮೂಲಕ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್ ಭಾರೀ ವಿವಾದ ಸೃಷ್ಟಿಸಿದ್ದಾರೆ.
Vijaya Karnataka Web Pragya Singh

'ಗೋಡ್ಸೆಯನ್ನು ಭಯೋತ್ಪಾದಕ ಎಂದು ಕರೆಯುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. ಜನತೆ ಈ ಚುನಾವಣೆಯಲ್ಲಿ ಅವರಿಗೆ ತಕ್ಕ ಉತ್ತರ ಕೊಡುತ್ತಾರೆ' ಎಂದೂ ಪ್ರಜ್ಞಾ ಸಿಂಗ್ ಹೇಳಿದ್ದಾರೆ.

'ನಾಥೂರಾಂ ಗೋಡ್ಸೆ ದೇಶ್‌ಭಕ್ತ್‌ ಥೇ, ಹೈ, ಔರ್ ರಹೇಂಗೆ... ಉನ್‌ಕೋ ಆತಂಕ್‌ವಾದಿ ಕೆಹ್ನೇವಾಳೆ ಲೋಗ್ ಸ್ವಯಂ ಕೇ ಗಿರೇಬಾನ್ ಮೇ ಝಾಂಕ್‌ ಕೇ ದೇಖೆ. ಅಬ್‌ ಕೀ ಚುನಾವ್ ಮೇ ಏಸೇ ಲೋಗೋಂ ಕೋ ಜವಾಬ್ ದೇ ದಿಯೇ ಜಾಯೇಗಾ' (ನಾಥೂರಾಮ್ ಗೋಡ್ಸೆ ದೇಶಭಕ್ತ, ಆಗಿದ್ದ, ಮುಂದೆಯೂ ಆಗಿರುತ್ತಾನೆ. ಆತನನ್ನು ಭಯೋತ್ಪಾದಕ ಎಂದು ಕರೆಯುವವರು ಆತ್ಮಾವಲೋಕನ ಮಾಡಿಕೊಳ್ಳಲಿ. ಈ ಚುನಾವಣೆಯಲ್ಲಿ ಅಂಥವರಿಗೆ ಜನತೆ ಸರಿಯಾದ ಪಾಠ ಕಲಿಸುತ್ತಾರೆ) ಎಂದು ಪ್ರಜ್ಞಾ ಸಿಂಗ್ ಹೇಳಿದ್ದಾರೆ.

ನಟ, ರಾಜಕಾರಣಿ ಕಮಲ್ ಹಾಸನ್ ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ ಗೋಡ್ಸೆ ಎಂದು ಹೇಳುವ ಮೂಲಕ ವಿವಾದಕ್ಕೆ ಕೈ ಹಾಕಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಸಾಧ್ವಿ ಪ್ರಜ್ಞಾ ಸಿಂಗ್‌ ಗುರುವಾರ ಈ ಹೇಳಿಕೆ ನೀಡಿದ್ದಾರೆ. ಆದರೆ ಕಮಲ್ ಹೇಳಿಕೆ ಖಂಡಿಸುವ ನೆಪದಲ್ಲಿ ತಾವೇ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಬಳಿಕ ತಮ್ಮ ಹೇಳಿಕೆ ಸ್ಪಷ್ಟನೆ ನೀಡಿದ್ದ ಕಮಲ್ ಹಾಸನ್‌, ಗೋಡ್ಸೆ ಬಗ್ಗೆ ಮಾತನಾಡುತ್ತ 'ಭಯೋತ್ಪಾದಕ' ಪದ ಬಳಸಿರಲಿಲ್ಲ ಎಂದು ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌