ಆ್ಯಪ್ನಗರ

ಕಳವಾದ ರಫೇಲ್‌ ಫೈಲ್‌ಗಳ ಬಗ್ಗೆ ಚಿಂತೆಯಿಲ್ಲದ ಚೌಕಿದಾರ ನಮಗೆ ಬೇಕೆ?, ಮಾಯಾವತಿ

ನಿರುದ್ಯೋಗ, ರೈತರ ಸಮಸ್ಯೆಗಳ ಮಾಹಿತಿ ಹೊರಬೀಳದಂತೆ ಕಾಯುತ್ತಿರುವ ಚೌಕಿದಾರ ನಮಗೆ ಬೇಕೆ? ಎಂದು ಸರಣಿ ಟ್ವೀಟ್‌ ಮೂಲಕ ಮಾಯಾವತಿ ಪ್ರಶ್ನಿಸಿದ್ದಾರೆ.

TOI.in 22 Mar 2019, 3:28 pm
ಲಖನೌ: ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಶುಕ್ರವಾರ ಬಿಜೆಪಿಯ ಚೌಕಿದಾರ್‌ ಅಭಿಯಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web Mayawati


ಚೌಕಿದಾರರು ಎಂದು ಹೇಳಿಕೊಳ್ಳುತ್ತಿರುವ ಪಕ್ಷದ ಮುಖಂಡರು ರಫೇಲ್‌ ಫೈಲ್‌ಗಳ ಬಗ್ಗೆ ಚಿಂತಿಸುತ್ತಿಲ್ಲ. ನಿರುದ್ಯೋಗ ಮತ್ತು ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ನಿರ್ಣಾಯಕ ಮಾಹಿತಿಗಳು ಹೊರ ಬೀಳದಂತೆ ಕಾವಲು ಕುಳಿತಿದ್ದಾರೆ. ಇಂತಹ ಚೌಕಿದಾರರು ನಮಗೆ ಬೇಕೆ? ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಮಾಯಾವತಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಹ ಮಂತ್ರಿಗಳು ತಮ್ಮನ್ನು ತಾವು ಕಾವಲುಗಾರರು ಎಂದು ಕರೆದುಕೊಳ್ಳುತ್ತಿದ್ದಾರೆ. ಆದರೆ ರಫೇಲ್‌ ಪತ್ರಗಳ ಕಳವಿನ ಬಗ್ಗೆ ಚಿಂತೆಯಿಲ್ಲ. ಆದರೆ ಉದ್ಯೋಗ ಪ್ರಮಾಣ ಕುಸಿಯುತ್ತಿರುವ, ಬಡತನ ಹೆಚ್ಚುತ್ತಿರುವ ಮತ್ತು ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮಾಹಿತಿಗಳು ಬಹಿರಂಗಗೊಳ್ಳದಂತೆ ಕಾವಲು ಕಾಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮತಕ್ಕಾಗಿ ನಿರ್ಣಾಯಕ ಮಾಹಿತಿಗಳನ್ನು ಬಹಿರಂಗ ಪಡಿಸದೆ ಅಡಗಿಸಿಕೊಂಡಿರುವ ಚೌಕಿದಾರರು ನಮಗೆ ಬೇಕೆ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ತಮಗೆ ಚೌಕಿದಾರ್ ಎಂದು ಜರಿದಿದ್ದುದನ್ನೇ ತಿರುಗು ಬಾಣವಾಗಿ ಉಪಯೋಗಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಮೈ ಭೀ ಚೌಕಿದಾರ್ ಅಭಿಯಾನವನ್ನು ಆರಂಭಿಸಿದ್ದರು. ಇದಾದ ನಂತರ ತಮ್ಮ ಟ್ವಿಟರ್ ಖಾತೆ ಹೆಸರನ್ನು 'ಚೌಕಿದಾರ್ ನರೇಂದ್ರ ಮೋದಿ' ಎಂದು ಬದಲಾಯಿಸಿಕೊಂಡಿದ್ದಾರೆ. ಪ್ರಧಾನಿ ಹಾದಿಯನ್ನೇ ಅನುಸರಿಸಿದ ಪಕ್ಷದ ಇತರ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಹೆಸರಿನ ಮುಂದೆ ಚೌಕಿದಾರ ಎಂದು ಸೇರಿಸಿಕೊಂಡು ಪ್ರಧಾನಿ ಮೋದಿ ಅವರನ್ನು ಬೆಂಬಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ