ಆ್ಯಪ್ನಗರ

ಎರಡು ದಿನಗಳ ಬಳಿಕ ಪ್ರಚಾರಕ್ಕಿಳಿದ ಬಿಎಸ್‌ವೈ

ಬೆಂಗಳೂರು ದಕ್ಷಿಣ ಲೋಕಸಭೆ ...

Vijaya Karnataka 1 Apr 2019, 5:00 am
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್‌ ಕೈತಪ್ಪಿದ್ದರಿಂದ ಅಧಿಕೃತ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಪ್ರಚಾರದಲ್ಲಿ ಪಾಲ್ಗೊಳ್ಳಲು ಬಿಜೆಪಿ ನಾಯಕರು ಇನ್ನೂ ತಿಣುಕಾಡುತ್ತಿದ್ದಾರೆ. ಸ್ವತಃ ಟಿಕೆಟ್‌ ಫೈಟ್‌ನಿಂದ ಕಂಗೆಟ್ಟಿರುವ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಒಲ್ಲದ ಮನಸ್ಸಿನಿಂದ ಪ್ರಚಾರದಲ್ಲಿ ಕಾಣಿಸಿಕೊಂಡರು.
Vijaya Karnataka Web 3103-2-2-KSG_38


ಎರಡು ದಿನಗಳಿಂದ ರಾಜ್ಯದ ಯಾವುದೇ ಭಾಗದಲ್ಲೂ ಪ್ರಚಾರದಲ್ಲಿ ಕಾಣಸಿಗದ ಯಡಿಯೂರಪ್ಪ ಭಾನುವಾರ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪ್ರತ್ಯಕ್ಷರಾದರು. ಆದರೆ, ಎಂದಿನ ಲವಲವಿಕೆ ಕಾಣಲಿಲ್ಲ. ಅಭ್ಯರ್ಥಿ ಪರ ಸಮರ್ಥ ಬ್ಯಾಟಿಂಗ್‌ ಮಾಡಲಿಲ್ಲ. ಪ್ರತಿಪಕ್ಷಗಳ ವಿರುದ್ಧ ಹರಿಹಾಯುವ ಎದೆಗಾರಿಕೆಯನ್ನು ಪ್ರದರ್ಶಿಸದಿರುವುದು ಸ್ಥಳೀಯ ಮುಖಂಡರಲ್ಲಿ ಕಳವಳ ಮೂಡಿಸಿದೆ.

ತೇಜಸ್ವಿನಿ ಅನಂತ್‌ಕುಮಾರ್‌ ಟಿಕೆಟ್‌ ಕೈತಪ್ಪಲು ಸಂಘ ಪರಿವಾರದ ಹಿರಿಯ ನಾಯಕರೊಬ್ಬರು ಕಾರಣ ಎಂಬುದು ರಾಜ್ಯ ಬಿಜೆಪಿ ಟೀಂನಲ್ಲಿ ಚರ್ಚೆಯಾಗುತ್ತಿದೆ. ಜತೆಗೆ ಚಿಕ್ಕೋಡಿಯಲ್ಲಿ ತಾವು ಸೂಚಿಸಿದ್ದ ಕತ್ತಿ ಕುಟುಂಬದ ವ್ಯಕ್ತಿಗೆ ಟಿಕೆಟ್‌ ಕೈತಪ್ಪಿದ್ದರಿಂದ ಯಡಿಯೂರಪ್ಪ ಬೇಸರಗೊಂಡಿದ್ದಾರೆ. ಕೊಪ್ಪಳ ಕ್ಷೇತ್ರದಲ್ಲಿ ತಡವಾಗಿ ಕರಡಿ ಸಂಗಣ್ಣ ಹೆಸರನ್ನು ಅಂತಿಮ ಮಾಡಿರುವುದು ರಾಜ್ಯಾಧ್ಯಕ್ಷರ ಬೇಸರಕ್ಕೆ ಕಾರಣ ಎನ್ನಲಾಗಿದೆ. ಇದೇ ಉದ್ದೇಶದಿಂದ ಅವರು ಸಕ್ರಿಯವಾಗಿ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ ಎಂಬ ಮಾತು ಕೇಳಿಬಂದಿದೆ.

ಇನ್ನೊಂದೆಡೆ ಬೆಂಗಳೂರಿನ ಸ್ಥಳೀಯ ಮುಖಂಡರೆಲ್ಲರೂ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲ. ಹಿಂದಿನ ಚುನಾವಣೆಯಂತೆ ಬೂತ್‌ ಮಟ್ಟದ ಕಾರ್ಯಕರ್ತರಿಂದ ಹಿಡಿದು ವಿಧಾನಸಭೆ ಕ್ಷೇತ್ರದ ಅಧ್ಯಕ್ಷ/ಶಾಸಕರ ನೇತೃತ್ವದಲ್ಲಿ ನಡೆಯುತ್ತಿದ್ದ ಒಗ್ಗಟ್ಟಿನ ಪ್ರಚಾರ ಮಾಯವಾಗಿದೆ. ಇದನ್ನು ಮನಗಂಡಿರುವ ಅಭ್ಯರ್ಥಿ ತೇಜಸ್ವಿ ಸೂರ್ಯ ಮತ್ತೆ ಸಂಘದ ಹಿರಿಯರನ್ನು ಸಂಪರ್ಕಿಸಿ ಬೆಂಬಲ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌