ಆ್ಯಪ್ನಗರ

ಮತ್ತೆ ವಿವಾದದಲ್ಲಿ ಸ್ಮೃತಿ ವಿದ್ಯಾರ್ಹತೆ

ಅಮೇಠಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಲೋಕಸಭಾ ಸಮರಕ್ಕಿಳಿದಿರುವ ಸ್ಮೃತಿ ಇರಾನಿ ಅವರು ಗುರುವಾರ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಾವು ದಿಲ್ಲಿ ವಿವಿಯಲ್ಲಿ ಪದವಿ ಪೂರೈಸಿಲ್ಲ ಎಂದು ಮಾಹಿತಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್‌ ಈ ಸಂಬಂಧ ವಾಗ್ದಾಳಿ ನಡೆಸಿದೆ.

Vijaya Karnataka 13 Apr 2019, 5:00 am
ಹೊಸದಿಲ್ಲಿ: ಸಚಿವೆ ಸ್ಮೃತಿ ಇರಾನಿ ಅವರ ವಿದ್ಯಾರ್ಹತೆ ವಿಚಾರ ಈ ಬಾರಿ ಲೋಕಸಭೆ ಚುನಾವಣೆಯಲ್ಲೂ ವಿವಾದಕ್ಕೆ ದಾರಿ ಮಾಡಿದ್ದು, ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
Vijaya Karnataka Web smriti

ಅಮೇಠಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಲೋಕಸಭಾ ಸಮರಕ್ಕಿಳಿದಿರುವ ಸ್ಮೃತಿ ಇರಾನಿ ಅವರು ಗುರುವಾರ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಾವು ದಿಲ್ಲಿ ವಿವಿಯಲ್ಲಿ ಪದವಿ ಪೂರೈಸಿಲ್ಲ ಎಂದು ಮಾಹಿತಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್‌ ಈ ಸಂಬಂಧ ವಾಗ್ದಾಳಿ ನಡೆಸಿದೆ.

2004, 2011, 2014ರಲ್ಲಿ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಇರಾನಿ ಅವರು ತಮ್ಮ ವಿದ್ಯಾರ್ಹತೆ ಬಗ್ಗೆ ಪರಸ್ಪರ ತದ್ವಿರುದ್ಧ ಮಾಹಿತಿ ನೀಡಿದ್ದಾರೆ. ಆ ಮೂಲಕ ಆಯೋಗ ಮತ್ತು ಕೋರ್ಟ್‌ಗಳಿಗೆ ಸುಳ್ಳು ಹೇಳಿದ್ದಾರೆ. ಸ್ಮೃತಿ ಅವರ ಉಮೇದುವಾರಿಕೆ ರದ್ದುಪಡಿಸಬೇಕೆಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮನವಿಯಲ್ಲಿ ಕಾಂಗ್ರೆಸ್‌ ಆಗ್ರಹಿಸಿದೆ. ಸ್ಮೃತಿ ಅವರನ್ನು 'ಸರಣಿ ಸುಳ್ಳುಗಾತಿ' ಎಂದು ಕಾಂಗ್ರೆಸ್‌ ಟೀಕಿಸಿದೆ.

ಇರಾನಿ ತಿರುಗೇಟು:
ಕಾಂಗ್ರೆಸ್‌ ಆರೋಪಕ್ಕೆ ತಿರುಗೇಟು ನೀಡಿರುವ ಇರಾನಿ, ''ಕಾಂಗ್ರೆಸ್‌ನವರು ನನಗೆ ಹೆಚ್ಚು ಕಿರುಕುಳ ಕೊಟ್ಟಷ್ಟೂ ನಾನು ಅಮೇಠಿಗಾಗಿ ಹೆಚ್ಚು ಕೆಲಸ ಮಾಡುತ್ತೇನೆ,'' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌