ಆ್ಯಪ್ನಗರ

ಪಾಕಿಸ್ತಾನ ಸೃಷ್ಟಿಸಿದ್ದೇ ಕಾಂಗ್ರೆಸ್; ಪ್ರಣಾಳಿಕೆಯೂ ಪಾಕ್‌ನದ್ದೇ ಭಾಷೆ ಮಾತಾಡ್ತಿದೆ: ಪ್ರಧಾನಿ ಮೋದಿ

'ಪಾಕಿಸ್ತಾನದ ರಚನೆಗೆ ಕಾಂಗ್ರೆಸ್ ಹೊಣೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ನಾಯಕರು ಬುದ್ಧಿವಂತಿಕೆಯಿಂದ ವರ್ತಿಸುತ್ತಿದ್ದರೆ 'ಈ ಪಾಕಿಸ್ತಾನ' ಸೃಷ್ಟಿಯಾಗುತ್ತಲೇ ಇರಲಿಲ್ಲ' ಎಂದು ಮೋದಿ ಬೃಹತ್ ಜನಸಮೂಹದ ಮುಂದೆ ನುಡಿದರು. 'ಕಾಶ್ಮೀರ ಕುರಿತ ವಿಚಾರಗಳಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಮತ್ತು ಪಾಕಿಸ್ತಾನ ಒಂದೇ ಧ್ವನಿಯಿಂದ ಮಾತಾಡುತ್ತಿವೆ' ಎಂದು ಪ್ರಧಾನಿ ಆರೋಪಿಸಿದರು.

Vijaya Karnataka Web 9 Apr 2019, 3:31 pm
ಲಾತೂರ್ (ಮಹಾರಾಷ್ಟ್ರ): ಪಾಕಿಸ್ತಾನವನ್ನು ಸೃಷ್ಟಿಸಿದ್ದೇ ಕಾಂಗ್ರೆಸ್; ಈಗ ಈ ಕಾಂಗ್ರೆಸ್ ಪಾಕಿಸ್ತಾನದ ಭಾಷೆಯಲ್ಲೇ ಮಾತಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.
Vijaya Karnataka Web Narendra Modi


'ಪಾಕಿಸ್ತಾನದ ರಚನೆಗೆ ಕಾಂಗ್ರೆಸ್ ಹೊಣೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ನಾಯಕರು ಬುದ್ಧಿವಂತಿಕೆಯಿಂದ ವರ್ತಿಸುತ್ತಿದ್ದರೆ 'ಈ ಪಾಕಿಸ್ತಾನ' ಸೃಷ್ಟಿಯಾಗುತ್ತಲೇ ಇರಲಿಲ್ಲ' ಎಂದು ಮೋದಿ ಬೃಹತ್ ಜನಸಮೂಹದ ಮುಂದೆ ನುಡಿದರು.

'ಕಾಶ್ಮೀರ ಕುರಿತ ವಿಚಾರಗಳಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಮತ್ತು ಪಾಕಿಸ್ತಾನ ಒಂದೇ ಧ್ವನಿಯಿಂದ ಮಾತಾಡುತ್ತಿವೆ' ಎಂದು ಪ್ರಧಾನಿ ಆರೋಪಿಸಿದರು. ಪಾಕಿಸ್ತಾನದ ವಿಮಾನವನ್ನು ನಮ್ಮ ವಾಯುಪಡೆ ಹೊಡೆದುರುಳಿಸಿರುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಇನ್ನೂ ಏನೇನು ಸಾಕ್ಷಿಗಳು ಬೇಕು?' ಎಂದು ಪ್ರಧಾನಿ ಪ್ರಶ್ನಿಸಿದರು.

ಬಿಜೆಪಿ ಆಡಳಿತದಲ್ಲಿ 'ನವ ಭಾರತ'ದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಭಯೋತ್ಪಾದಕರನ್ನು ಅವರ ಗುಹೆಗಳಿಗೇ ನುಗ್ಗಿ ಭಾರತ ನಾಶಪಡಿಸುತ್ತದೆ. ಇದು ನವ ಭಾರತದ ನೀತಿ. ಭಯೋತ್ಪಾದನೆಯ ಸಮೂಲ ನಾಶವೇ ನಮ್ಮ ಸಂಕಲ್ಪ' ಎಂದು ಘೋಷಿಸಿದರು.

ಮೊದಲ ಬಾರಿ ಹಕ್ಕು ಚಲಾಯಿಸುವ ಮತದಾರರು ತಮ್ಮ ಮತಗಳನ್ನು ಪಾಕಿಸ್ತಾನದ ಬಾಲಾಕೋಟ್ ಮೇಲೆ ದಾಳಿ ಮಾಡಿದ ಯೋಧರಿಗೆ ಸಮರ್ಪಿಸಬೇಕು ಎಂದು ಕರೆ ನೀಡಿದರು.

ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು ಎಂಬ ಬೇಡಿಕೆಯನ್ನು ಬೆಂಬಲಿಸಿದ ಕಾಂಗ್ರೆಸ್‌ನ ಮಿತ್ರ ಪಕ್ಷ ಎನ್‌ಸಿಪಿ ವಿರುದ್ಧವೂ ಪ್ರಧಾನಿ ಮೋದಿ ಹರಿ ಹಾಯ್ದರು.

'ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನ ಮಂತ್ರಿ ಬೇಕು ಎಂದು ಕೇಳುವ ಮಾನಸಿಕತೆಯನ್ನು ದಶಕಗಳ ಕಾಲ ಆಳಿದ ಪಕ್ಷ ಪೋಷಿಸಿಕೊಂಡು ಬಂದಿದೆ. ಅವರ ಹೃದಯದಲ್ಲಿದ್ದಿದ್ದು ಈಗ ಬಹಿರಂಗವಾಗಿದೆ' ಎಂದು ಮೋದಿ ಟೀಕಿಸಿದರು.

'ಪ್ರತ್ಯೇಕ ಪ್ರಧಾನಿ ಬೇಕು ಎನ್ನುವವರ ಬೆಂಬಲಕ್ಕೆ ಕಾಂಗ್ರೆಸ್ ಮತ್ತು ಎನ್‌ಸಿಪಿ ನಿಂತಿವೆ. ಕಾಂಗ್ರೆಸ್ ಅಂತೂ ದೇಶವಿರೋಧಿ ಪಕ್ಷ ಎಂಬುದು ಸಾಬೀತಾಗಿದೆ. ಅದರ ಜತೆಗೆ ಶರದ್ ಸಾಬ್ ಕೂಡ ನಿಂತಿದ್ದಾರಲ್ಲ...? ಇದು ನಿಮಗೆ ಶೋಭೆಯೆ ಶರದ್ ಸಾಬ್?' ಎಂದು ಮೋದಿ ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌