ಆ್ಯಪ್ನಗರ

ಈ ಹಿಂದೆ ಈದ್‌ಗೆ ವಿದ್ಯುತ್ ಸಿಗುತ್ತಿತ್ತು, ದೀಪಾವಳಿ ಕತ್ತಲ್ಲಲ್ಲೇ ಆಚರಿಸಬೇಕಿತ್ತು: ಯೋಗಿ

ಪ್ರಧಾನಿ ನರೇಂದ್ರ ಮೋದಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ತತ್ವವನ್ನು ನಂಬಿದ್ದಾರೆ. ಈ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ, ಇಂದಿನ ಸ್ಥಿತಿ ತುಂಬಾ ಬದಲಾಗಿದೆ ಎಂದು ಹೇಳಿದರು.

TIMESOFINDIA.COM 7 May 2019, 12:18 pm
ಲಖನೌ: ಈ ಹಿಂದಿನ ಸರಕಾರಗಳು ಮೊಹರಂ ಮತ್ತು ಈದ್ ಹಬ್ಬದ ದಿನ ಮಾತ್ರ ರಾಜ್ಯದ ಜನತೆಗೆ ವಿದ್ಯುತ್ ನೀಡುತ್ತಿದ್ದವು. ಆದರೆ, ಹೋಳಿ ಮತ್ತು ದೀಪಾವಳಿಯನ್ನು ಕತ್ತಲಲ್ಲೇ ಆಚರಿಸಬೇಕಿತ್ತು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗಂಭೀರವಾಗಿ ಆರೋಪಿಸಿದ್ದಾರೆ.
Vijaya Karnataka Web yogi


ಸಿದ್ದರಾರ್ಥ ನಗರ ಜಿಲ್ಲೆಯ ದೊಮರಿಗಂಜ್ ಲೋಕಸಭಾ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ತತ್ವವನ್ನು ನಂಬಿದ್ದಾರೆ. ಈ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ, ಇಂದಿನ ಸ್ಥಿತಿ ತುಂಬಾ ಬದಲಾಗಿದೆ ಎಂದು ಹೇಳಿದರು.

ಈ ಹಿಂದೆ ಜಾತಿ-ಧರ್ಮದ ಆಧಾರದ ಮೇಲೆ ವಿದ್ಯುತ್ ನೀಡಲಾಗುತ್ತಿತ್ತು. ಮೊಹರಂ ಮತ್ತು ಈದ್ ದಿನಗಳಲ್ಲಿ ಮಾತ್ರ ವಿದ್ಯುತ್ ನೀಡುತ್ತಿದ್ದರು. ಆದರೆ, ಹೋಳಿ ಮತ್ತು ದೀಪಾವಳಿಯನ್ನು ಕತ್ತಲಲ್ಲಿ ಆಚರಿಸುವ ಸ್ಥಿತಿ ಇತ್ತು ಎಂದು ಹಿಂದಿನ ಸರಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌