ಆ್ಯಪ್ನಗರ

ಇವಿಎಂ ಮತಗಳ ಜತೆ 50% ವಿವಿಪ್ಯಾಟ್‌ ಚೀಟಿಗಳ ತುಲನೆಗೆ ಪ್ರತಿಪಕ್ಷ ಆಗ್ರಹ, ಸುಪ್ರೀಂಗೆ ಮೊರೆ

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಭಾನುವಾರ ಮುಖ್ಯ ಚುನಾವಣೆ ಆಯುಕ್ತ ಸುನಿಲ್ ಅರೋರಾ ಅವರನ್ನು ಭೇಟಿ ಮಾಡಿ ಇವಿಎಂ ದೋಷಗಳ ಕುರಿತು ಚರ್ಚಿಸಿದರು. ಬಳಿಕ 21 ಪಕ್ಷಗಳು ಒಟ್ಟಾಗಿ ಇವಿಎಂಗಳ ಮತ ಎಣಿಕೆ ವೇಳೆ ಶೇ 50ರಷ್ಟು ವಿವಿಪ್ಯಾಟ್‌ ಚೀಟಿಗಳನ್ನೂ ಎಣಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾಗಿ ತಿಳಿಸಿದರು.

Vijaya Karnataka Web 14 Apr 2019, 6:05 pm
ಹೊಸದಿಲ್ಲಿ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ದೋಷಗಳ ಕುರಿತು ಪ್ರತಿಪಕ್ಷಗಳು ಮಹತ್ವದ ಸಭೆ ನಡೆಸಿದ್ದು, ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಣೆಗೆ ಮುನ್ನ ಕನಿಷ್ಠ ಶೇ 50ರಷ್ಟು ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಬೇಕು ಎಂದು ಆಗ್ರಹಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿವೆ.
Vijaya Karnataka Web Chandrababu Naidu


ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಭಾನುವಾರ ಮುಖ್ಯ ಚುನಾವಣೆ ಆಯುಕ್ತ ಸುನಿಲ್ ಅರೋರಾ ಅವರನ್ನು ಭೇಟಿ ಮಾಡಿ ಇವಿಎಂ ದೋಷಗಳ ಕುರಿತು ಚರ್ಚಿಸಿದರು. ಬಳಿಕ 21 ಪಕ್ಷಗಳು ಒಟ್ಟಾಗಿ ಇವಿಎಂಗಳ ಮತ ಎಣಿಕೆ ವೇಳೆ ಶೇ 50ರಷ್ಟು ವಿವಿಪ್ಯಾಟ್‌ ಚೀಟಿಗಳನ್ನೂ ಎಣಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾಗಿ ತಿಳಿಸಿದರು.

ಪ್ರತಿ ವಿಧಾನಸಭೆ ಕ್ಷೇತ್ರದ ಇವಿಎಂಗಳಿಗೆ ಜೋಡಿಸಿದ ಶೇ 50ರಷ್ಟು ವಿವಿಪ್ಯಾಟ್‌ ಯಂತ್ರಗಳ ಚೀಟಿಗಳನ್ನು ಎಣಿಕೆ ಮಾಡುವಂತೆ ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಹೇಳಿದರು.


ಇವಿಎಂ ದೋಷಪೂರಿತ ಕಾರ್ಯನಿರ್ವಹಣೆ ಬಗ್ಗೆ ಪ್ರತಿಪಕ್ಷಗಳು ದೇಶವ್ಯಾಪಿ ಆಂದೋಲನ ನಡೆಸಲಿವೆ ಎಂದು ಅವರು ತಿಳಿಸಿದರು.

'ಇವಿಎಂ ದೋಷಗಳ ನಿವಾರಣೆಗೆ ಚುನಾವಣೆ ಆಯೋಗ ಸಾಕಷ್ಟು ಕ್ರಮ ಕೈಗೊಳ್ಳುತ್ತಿಲ್ಲವೆಂದೇ ನಮ್ಮ ಭಾವನೆ' ಎಂದು ಸಿಂಘ್ವಿ ಆರೋಪಿಸಿದರು.

ಪ್ರತಿ ಅಸೆಂಬ್ಲಿ ಕ್ಷೇತ್ರದ ತಲಾ ಐದು ಬೂತ್‌ಗಳ ವಿವಿಪ್ಯಾಟ್ ಚೀಟಿಗಳನ್ನು ಇವಿಎಂ ಮತಗಳ ಎಣಿಕೆ ಜತೆ ತುಲನೆ ಮಾಡುವಂತೆ ಸುಪ್ರೀಂ ಕೋರ್ಟ್ ಕಳೆದ ಸೋಮವಾರ ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಇದರಿಂದ ಚುನಾವಣೆ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗಿರುತ್ತದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌