ಆ್ಯಪ್ನಗರ

ಫೈಸಲ್‌ ಪಾರ್ಟಿ ಸೇರಿದ ಮಾಜಿ ಜೆಎನ್‌ಯು ನಾಯಕಿ ಶೆಹ್ಲಾ

Vijaya Karnataka Web 18 Mar 2019, 10:37 am
ಶ್ರೀನಗರ: ಜೆಎನ್‌ಯು ಕಾಲೇಜಿನ ವಿದ್ಯಾರ್ಥಿ ಒಕ್ಕೂಟದ ಮಾಜಿ ನಾಯಕಿ ಶೆಹ್ಲಾ ರಶಿದ್‌ ರಾಜಕೀಯಕ್ಕೆ ಅಧಿಕೃತ ಎಂಟ್ರಿ ಕೊಟ್ಟಿದ್ದಾರೆ.
Vijaya Karnataka Web Shehla Rashid


ಹೋರಾಟ ಚಟುವಟಿಕೆಯಿಂದ ಗುರುತಿಸಿಕೊಂಡಿರುವ ಶೆಹ್ಲಾ ರಶಿದ್‌ ಅವರು ಮಾಜಿ ಐಎಎಸ್‌ ಅಧಿಕಾರಿ ಶಾ ಫೈಸಲ್‌ ಭಾನುವಾರು ಸ್ಫಾಪಿಸಿದ 'ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್‌ ಮೂವ್‌ಮೆಂಟ್‌' ಸೇರ್ಪಡೆಗೊಂಡಿದ್ದಾರೆ.

ಶೆಹ್ಲಾ ಜೆಎನ್‌ಯು ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕಿಯಾಗಿ ಆರಿಸಿ ಬಂದ ಮೊದಲ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿನಿಯಾಗಿದ್ದಾರೆ. ಇಂಜಿನಿಯರಿಂಗ್‌ ಪದವೀದರೆಯಾದ ಶೆಹ್ಲಾ ಪ್ರಸ್ತುತ ಜೆಎನ್‌ಯು ಕಾಲೇಜಿನಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಕಳೆದ ಐದು ವರ್ಷಗಳಿಂದ ವಿದ್ಯಾರ್ಥಿ ಹೋರಾಟಗಾರ್ತಿಯಾಗಿ ಎಲ್ಲ ರಾಜಕೀಯ ಪಕ್ಷಗಳ ಜತೆ ಮಾತನಾಡಿದ್ದೇನೆ. ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್‌ ಮೂವ್‌ಮೆಂಟ್‌ ಸೇರುವುದು ಪ್ರಜ್ಞಾಪೂರ್ವಕ ನಿರ್ಧಾರ. ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಿಂತ ಪಕ್ಷವನ್ನು ಪ್ರಾಥಮಿಕ ಹಂತದಲ್ಲಿ ಬಲಪಡಿಸುವ ಗುರಿಯಿದೆ ಎಂದು ಪಿಟಿಐಗೆ ಶೆಹ್ಲಾ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು. ಇದು ಪಕ್ಷವಲ್ಲ. ಶಾಂತಿ, ಅಭಿವೃದ್ಧಿಗಾಗಿ ಹೋರಾಟದ ಅಭಿಯಾನ ಎಂದು ಜೆಕೆಪಿಎಂ ಬಗ್ಗೆ ಶೆಹ್ಲಾ ವಿವರಣೆ ನೀಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಖ್ಯಾತಿ ಗಳಿಸಿರುವ ಶೆಹ್ಲಾಗೆ ಟ್ವೀಟರ್‌ನಲ್ಲಿ 4.65 ಲಕ್ಷ ಹಿಂಬಾಲಕರಿದ್ದಾರೆ. ಹಲವು ನೆಟ್ಟಿಗರು ಶೆಹ್ಲಾ ರಾಜಕೀಯ ಎಂಟ್ರಿಯನ್ನು ಸ್ವಾಗತಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌