ಆ್ಯಪ್ನಗರ

ಸಚಿವ ಗಿರಿರಾಜ್‌ ಸಿಂಗ್‌ಗೆ ಕನ್ಹಯ್ಯ ಟಾಂಗ್‌

ಬಿಹಾರದ ಬೆಗುಸರಾಯ್‌ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಗಿರಿರಾಜ್‌ ಸಿಂಗ್‌ ಹಿಂಜರಿಯುತ್ತಿರುವುದನ್ನು ನೋಡಿದರೆ, ಹೋಮ್‌ ವರ್ಕ್‌ ಮಾಡಿಲ್ಲವೆಂದು ಶಾಲೆಗೆ ಹೋಗಲೊಲ್ಲೆನೆಂದು ಹಠ ಮಾಡುವ ಹುಡುಗನ ನೆನಪಾಗುತ್ತದೆ ಎಂದು ಕನ್ಹಯ್ಯ ಲೇವಡಿ ಮಾಡಿದ್ದಾರೆ.

Vijaya Karnataka 27 Mar 2019, 5:00 am
ಪಟನಾ: ಪ್ರಧಾನಿ ಮೋದಿ ಅವರ ವಿರುದ್ಧ ಮಾತನಾಡುವವರನ್ನು ಹಾಗೂ ಅವರ ರಾರ‍ಯಲಿಗೆ ಹಾಜರಾಗದವನ್ನು ದೇಶದ್ರೋಹಿಗಳಿಗೆ ಹೋಲಿಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ಗೆ ಸಿಪಿಐ(ಎಂ) ಅಭ್ಯರ್ಥಿ ಕನ್ಹಯ್ಯ ಕುಮಾರ್‌ ಟಾಂಗ್‌ ನೀಡಿದ್ದಾರೆ.
Vijaya Karnataka Web Kanhaiya


''ಬಿಹಾರದ ಬೆಗುಸರಾಯ್‌ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಗಿರಿರಾಜ್‌ ಸಿಂಗ್‌ ಹಿಂಜರಿಯುತ್ತಿರುವುದನ್ನು ನೋಡಿದರೆ, ಹೋಮ್‌ ವರ್ಕ್‌ ಮಾಡಿಲ್ಲವೆಂದು ಶಾಲೆಗೆ ಹೋಗಲೊಲ್ಲೆನೆಂದು ಹಠ ಮಾಡುವ ಹುಡುಗನ ನೆನಪಾಗುತ್ತದೆ,'' ಎಂದು ಕನ್ಹಯ್ಯ ಟ್ವೀಟ್‌ ಮೂಲಕ ಲೇವಡಿ ಮಾಡಿದ್ದಾರೆ. 2014ರ ಚುನಾವಣೆ ವೇಳೆ ಮೋದಿ ಪರ ಬ್ಯಾಟಿಂಗ್‌ ಮಾಡಿದ್ದ ಗಿರಿರಾಜ್‌, ಮೋದಿ ವಿರೋಧಿಗಳನ್ನು ಪಾಕಿಸ್ತಾನಕ್ಕೆ ಅಟ್ಟಬೇಕೆಂದು ಗುಡುಗಿದ್ದರು. ಇದೇ ಹೇಳಿಕೆಯನ್ನು ಬಳಸಿಕೊಂಡಿರುವ ಕನ್ಹಯ್ಯ, ''ನನ್ನ ಸೋದರ ಸಂಬಂಧಿಯ ಮಗನೊಬ್ಬ ಹೋಮ್‌ವರ್ಕ್‌ ಬರೆದಿಲ್ಲವೆಂದು ಶಾಲೆಗೆ ಹೋಗಲು ಒಲ್ಲೆನೆನ್ನುತ್ತಾನೆ. ಆದರೂ ಆತ ತನ್ನ ಶಿಕ್ಷರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕೆಂದೂ ಎಂದೂ ಯೋಚಿಸುವುದಿಲ್ಲ,''ಎಂದಿದ್ದಾರೆ.

ಪ್ರಸ್ತುತ ತಾವು ಪ್ರತಿನಿಧಿಸುತ್ತಿರುವ ನವಾಡಾ ಕ್ಷೇತ್ರವನ್ನು ಈ ಬಾರಿ ಬಿಜೆಪಿಯು ಮೈತ್ರಿ ಪಕ್ಷ ಎಲ್‌ಜೆಪಿಗೆ ಬಿಟ್ಟುಕೊಟ್ಟಿರುವ ಬಗ್ಗೆ ಗಿರಿರಾಜ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ''ನಾನು 2009 ಹಾಗೂ 2014ರಲ್ಲಿ ಬೆಗುಸರಾಯ್‌ನಿಂದ ಸ್ಪರ್ಧಿಸಲು ಬಯಸಿದ್ದೆ. ಆಗ ಟಿಕೆಟ್‌ ನೀಡಲಿಲ್ಲ. ಅನಿವಾರ್ಯವಾಗಿ ಒಲಿದ ನವಡಾ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೆ. ಈಗ ನನಗೆ ಸಣ್ಣದೊಂದು ಸೂಚನೆಯನ್ನೂ ನೀಡದೇ ಏಕಾಏಕಿ ಕ್ಷೇತ್ರ ಬದಲಿಸಲಾಗಿದೆ,'' ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಸಿಂಗ್‌ಗೆ ಕನ್ಹಯ್ಯ ಟಾಂಗ್‌ ನೀಡಿದ್ದಾರೆ.

ಚುನಾವಣೆಗಾಗಿ ಕ್ರೌಡ್‌ ಫಂಡಿಂಗ್‌: ಬೆಗುಸರಾಯ್‌ ಲೋಕಸಭಾ ಕ್ಷೇತ್ರದ ಸಿಪಿಐ (ಎಂ) ಅಭ್ಯರ್ಥಿ ಕನ್ಹಯ್ಯ ಕುಮಾರ್‌, ಚುನಾವಣಾ ಖರ್ಚಿಗಾಗಿ ಜನರಿಂದ ಹಣ ಸಂಗ್ರಹ ಅಭಿಯಾನ (ಕ್ರೌಡ್‌ ಫಂಡಿಂಗ್‌) ಆರಂಭಿಸಿದ್ದು, ಮಂಗಳವಾರ ಕೆಲವೇ ಗಂಟೆಗಳಲ್ಲಿ 5 ಲಕ್ಷ ರೂ. ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರೌಡ್‌ ಫಂಡಿಂಗ್‌ ಮೂಲಕ 70 ಲಕ್ಷ ರೂ. ಸಂಗ್ರಹಿಸುವ ಗುರಿಯನ್ನು ಕನ್ಹಯ್ಯ ಹೊಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ