ಆ್ಯಪ್ನಗರ

ಮುಸ್ಲಿಮರ ಮತ ನೀಡದಿದ್ದರೂ ನನ್ನ ಗೆಲುವು ನಿಶ್ಚಿತ: ಮೇನಕಾ ಗುಟುರು

ಕೆಲವು ದಿನಗಳ ಹಿಂದೆ ಬಿಎಸ್ಪಿ ವರಿಷ್ಠೆ ಮಾಯಾವತಿ ಅವರನ್ನು 'ಟಿಕೆಟ್‌ ವ್ಯಾಪಾರಿ' ಎಂದು ಟೀಕಿಸುವ ಮೂಲಕ ಮೇನಕಾ ಗಾಂಧಿ ವಿವಾದ ಸೃಷ್ಟಿಸಿದ್ದರು. ಮಾಜಿ ಮುಖ್ಯಮಂತ್ರಿ ಮಾಯಾವತಿ ಯಾರಿಗೂ ನಿಷ್ಠರಾಗಿರುವುದಿಲ್ಲ. ನೋಟುಗಳನ್ನು ನೀಡದೇ ಅವರಿಂದ ಟಿಕೆಟ್‌ ಪಡೆಯುವುದು ಸಾಧ್ಯವೇ ಇಲ್ಲಎಂದು ಹೇಳಿದ್ದರು.

Vijaya Karnataka 13 Apr 2019, 5:00 am
ಲಖನೌ: ಮುಸ್ಲಿಮರು ತಮಗೆ ಮತ ಹಾಕದಿದ್ದರೆ ಅವರ ಕೆಲಸ ಮಾಡಿಕೊಡುವ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ ಎನ್ನುವ ಮೂಲಕ ಕೇಂದ್ರ ಸಚಿವೆ ಹಾಗೂ ಉತ್ತರ ಪ್ರದೇಶದ ಸುಲ್ತಾನ್‌ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೇನಕಾ ಗಾಂಧಿ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ.
Vijaya Karnataka Web Maneka


ಮುಸ್ಲಿಂ ಸಮುದಾಯದ ನಾಯಕರನ್ನು ಉದ್ದೇಶಿಸಿ ಮಾತನಾಡುವ ವೇಳೆ ಮೇನಕಾ ಹೇಳಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ''ನೆನಪಿಟ್ಟುಕೊಳ್ಳಿ, ಸುಲ್ತಾನ್‌ಪುರದಲ್ಲಿ ಮುಸ್ಲಿಮರು ನನಗೆ ಮತ ಹಾಕಲಿ, ಹಾಕದೇ ಇರಲಿ, ನಾನು ಗೆಲ್ಲುವುದಂತೂ ಖಚಿತ. ನನಗೆ ಮತ ಹಾಕದೇ, ನಾನು ಗೆದ್ದ ನಂತರ ಯಾವುದಾದರೂ ಕೆಲಸಕ್ಕೆ ಮುಸ್ಲಿಮರು ನನ್ನ ಬಳಿ ಬಂದರೆ ನಾನು ಯೋಚನೆ ಮಾಡಲೇಬೇಕಾಗುತ್ತದೆ. ಎಲ್ಲ ಅನುಕೂಲ ಮಾಡಿಕೊಟ್ಟೂ ಚುನಾವಣೆಯಲ್ಲಿ ಸೋಲಲು ನಾವೇನೂ ಮಹಾತ್ಮ ಗಾಂಧಿಯವರ ಮಕ್ಕಳಲ್ಲ. ನೀವು ಮತ ಹಾಕದಿದ್ದರೂ ನನ್ನ ಗೆಲುವು ಖಚಿತ,'' ಎಂದು ಮೇನಕಾ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಬಿಎಸ್ಪಿ ವರಿಷ್ಠೆ ಮಾಯಾವತಿ ಅವರನ್ನು 'ಟಿಕೆಟ್‌ ವ್ಯಾಪಾರಿ' ಎಂದು ಟೀಕಿಸುವ ಮೂಲಕ ಮೇನಕಾ ಗಾಂಧಿ ವಿವಾದ ಸೃಷ್ಟಿಸಿದ್ದರು. ಮಾಜಿ ಮುಖ್ಯಮಂತ್ರಿ ಮಾಯಾವತಿ ಯಾರಿಗೂ ನಿಷ್ಠರಾಗಿರುವುದಿಲ್ಲ. ನೋಟುಗಳನ್ನು ನೀಡದೇ ಅವರಿಂದ ಟಿಕೆಟ್‌ ಪಡೆಯುವುದು ಸಾಧ್ಯವೇ ಇಲ್ಲ,'' ಎಂದು ಹೇಳಿದ್ದರು.

1989ರಿಂದ 2009, 2014ರಿಂದ 2019ರ ಅವಧಿಯಲ್ಲಿ ಫಿಲಿಬಿತ್‌ ಕ್ಷೇತ್ರದ ಸಂಸದೆಯಾಗಿದ್ದ ಮೇನಕಾ ಅವರನ್ನು ಈ ಸಲ ಸುಲ್ತಾನ್‌ಪುರದಿಂದ ಕಣಕ್ಕೆ ಇಳಿಸಲಾಗಿದೆ. ಈ ಕ್ಷೇತ್ರದ ಸಂಸದರಾಗಿದ್ದ ಅವರ ಪುತ್ರ ವರುಣ್‌ ಗಾಂಧಿ ಅವರಿಗೆ ಫಿಲಿಬಿತ್‌ನಿಂದ ಟಿಕೆಟ್‌ ನೀಡಲಾಗಿದೆ.

ಮತ ನೀಡದಿದ್ದರೆ ಶಾಪ:
ಉತ್ತರ ಪ್ರದೇಶದ ಉನಾವೊ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಸಾಕ್ಷಿ ಮಹಾರಾಜ್‌ ಅವರು ತಮಗೆ ಮತ ಹಾಕದಿದ್ದರೆ ಶಾಪ ಹಾಕುವುದಾಗಿ ಮತದಾರರಿಗೆ ಬೆದರಿಕೆ ಹಾಕಿದ್ದಾರೆ! ''ನಾನು ಸನ್ಯಾಸಿ. ಜನರ ಬಳಿ ಸನ್ಯಾಸಿ ಏನಾದರೂ ಕೇಳಿದಾಗ ಜನ ನೀಡದಿದ್ದರೆ ಸನ್ಯಾಸಿಯು ಶಾಪ ನೀಡಬಹುದು ಎಂದು ಶಾಸ್ತ್ರಗಳಲ್ಲೇ ಇದೆ. ನಾನು ನಿಮ್ಮ ಬಳಿ ಮತ ಕೇಳುತ್ತೇನೆ. ನೀವು ಮತ ನೀಡದಿದ್ದರೆ ಶಾಪ ಹಾಕುತ್ತೇನೆ,'' ಎಂದು ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌