ಆ್ಯಪ್ನಗರ

ಉಗ್ರರನ್ನು ಅವರ ಮನೆಗೇ ನುಗ್ಗಿ ಕೊಲ್ಲುವ ಸಾಮರ್ಥ್ಯ ಭಾರತಕ್ಕಿದೆ: ಪ್ರಧಾನಿ ಮೋದಿ

'ಭಯೋತ್ಪಾದನೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಈಗ ಭಾರತಕ್ಕೆ ತಿಳಿದಿದೆ. ನಾವು ಅವರ ಮನೆಗಳಿಗೇ ನುಗ್ಗಿ ಭಯೋತ್ಪಾದಕರನ್ನು ಕೊಂದು ಹಾಕಬಲ್ಲೆವು' ಎಂದು ಪಾಕಿಸ್ತಾನದ ಹೆಸರು ಹೇಳದೆ ಪ್ರಧಾನಿ ಘೋಷಿಸಿದರು. ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ಬೃಹತ್ ಚುನಾವಣೆ ರ‍್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.

Vijaya Karnataka Web 3 Apr 2019, 10:44 am
ಹೈದರಾಬಾದ್: ಭಾರತ ಇನ್ನು ಯಾವುದೇ ಭಯೋತ್ಪಾದಕರ ದಾಳಿಯನ್ನೂ ಸಹಿಸಿಕೊಳ್ಳುವುದಿಲ್ಲ. ಶತ್ರುಗಳನ್ನು ಅವರ ಮನೆಗಳಿಗೇ ನುಗ್ಗಿ ಕೊಲ್ಲುವ ಸಾಮರ್ಥ್ಯ ಭಾರತಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.
Vijaya Karnataka Web Narendra Modi


'ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಈಗ ಭಾರತಕ್ಕೆ ತಿಳಿದಿದೆ. ನಾವು ಅವರ ಮನೆಗಳಿಗೇ ನುಗ್ಗಿ ಭಯೋತ್ಪಾದಕರನ್ನು ಕೊಂದು ಹಾಕಬಲ್ಲೆವು' ಎಂದು ಪಾಕಿಸ್ತಾನದ ಹೆಸರು ಹೇಳದೆ ಪ್ರಧಾನಿ ಘೋಷಿಸಿದರು. ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ಬೃಹತ್ ಚುನಾವಣೆ ರ‍್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.

'40 ವರ್ಷಗಳಿಂದ ಅವರು ಪ್ರತಿದಿನ ನಮ್ಮವರನ್ನು ಕೊಲ್ಲುತ್ತಿದ್ದರು. ಆದರೂ ನಾವು ಸುಮ್ಮನೆ ಕುಳಿತಿದ್ದೆವು. ಏನಾದರೂ ಮಾಡಿಬಿಟ್ಟರೆ ನಮ್ಮ ವೋಟ್ ಬ್ಯಾಂಕ್‌ ನಷ್ಟವಾದೀತು ಎಂಬ ಭೀತಿ ಹಿಂದಿನ ಆಡಳಿತಗಾರರಿಗಿತ್ತು. ಇನ್ನು ಸಾಕೋ ಸಾಕು... ಇದನ್ನು ಸಹಿಸಿಕೊಳ್ಳಲು ಮೋದಿ ಇನ್ನು ಸಿದ್ಧವಿಲ್ಲ' ಎಂದು ಪ್ರಧಾನಿ ನುಡಿದರು. ಇದಕ್ಕೆ ಸಭಿಕರಿಂದ ಭಾರೀ ಕರತಾಡನ ಹಾಗೂ ಜೈಕಾರದ ಬೆಂಬಲ ವ್ಯಕ್ತವಾಯಿತು.

ತೆಲಂಗಾಣದ 17 ಕ್ಷೇತ್ರಗಳಿಗೆ ಏಪ್ರಿಲ್ 11ರಂದು ನಡೆಯುವ ಚುನಾವಣೆಗೆ ಬಿಜೆಪಿ ರ‍್ಯಾಲಿ ಉದ್ದೇಶಿಸಿ ಪ್ರಧಾನಿ ಮಾತನಾಡಿದರು. 2014ರ ಚುನಾವಣೆಯಲ್ಲಿ ಬಿಜೆಪಿ ತೆಲಂಗಾಣದ ರಾಜಧಾನಿ ಸಿಕಂದರಾಬಾದ್‌ ಕ್ಷೇತ್ರವನ್ನು ಗೆದ್ದಿತ್ತು.

ಏಪ್ರಿಲ್ 11ರಂದು ನಡೆಯುವ ಮತದಾನ ಕೇವಲ ಒಂದು ಪಕ್ಷದ ಗೆಲುವು ಅಥವಾ ಸೋಲನ್ನು ನಿರ್ಧರಿಸುವುದಲ್ಲ; ಬದಲಾಗಿ ಭಯೋತ್ಪಾದಕರಿಗೆ ತಕ್ಕ ಪ್ರತ್ಯುತ್ತರ ನೀಡಬೇಕೆ ಅಥವಾ ಸುಮ್ಮನಿರಬೇಕೆ ಎಂಬ ನೀತಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ನಿರ್ಧರಿಸುವಂಥದ್ದಾಗಿರುತ್ತದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

ಈ ಚುನಾವಣೆ ಭಾರತದ ವೀರರನ್ನು ಗೌರವಿಸಬೇಕೆ ಅಥವಾ ಪಾಕ್‌ ಪರ ಶಕ್ತಿಗಳನ್ನು ಗೌರವಿಸಬೇಕೆ ಎಂಬುದನ್ನು ನಿರ್ಧರಿಸಲಿದೆ. ಪ್ರತಿದಿನ ಭಾರತದಲ್ಲಿ ಬಾಂಬ್‌ಗಳು ಸ್ಫೋಟಿಸಬೇಕೆ ಅಥವಾ ಕಳೆದ 5 ವರ್ಷಗಳಲ್ಲಿ ಇದ್ದಂತೆ ಶಾಂತಿಯುತ ಭಾರತ ಬೇಕೆ ಎಂಬುದನ್ನೂ ಈ ಚುನಾವಣೆ ನಿರ್ಧರಿಸಲಿದೆ ಎಂದು ಮೋದಿ ನುಡಿದರು. ಬಲಿಷ್ಠ ಸರಕಾರ ಹಾಗೂ ಬಲಿಷ್ಠ ದೇಶಕ್ಕಾಗಿ ಈ 'ಚೌಕಿದಾರ'ನನ್ನು ಬೆಂಬಲಿಸಿ ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ