ಆ್ಯಪ್ನಗರ

ಕಂದಯ ಕಾರ್ಯದರ್ಶಿ, ಸಿಬಿಡಿಟಿ ಅಧ್ಯಕ್ಷರಿಗೆ ಆಯೋಗದ ಬುಲಾವ್‌

ದಾಳಿ ಹಿಂದೆ ರಾಜಕೀಯ ಹಿತಸಾಧನೆಯ ಯಾವುದೇ ಉದ್ದೇಶ ಇಲ್ಲ. ಅಕ್ರಮ ಹಣ ಪರಭಾರೆಯ ಬಲವಾದ ಸುಳಿವು ಲಭಿಸಿದ ಬಳಿಕವೇ ದಾಳಿಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Vijaya Karnataka 10 Apr 2019, 5:00 am
ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವಾಲಯದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳು ಚುನಾವಣೆ ಸಂದರ್ಭದಲ್ಲಿ ತಟಸ್ಥವಾಗಿರಬೇಕು ಎಂದು ಭಾನುವರವಷ್ಟೇ ಗಂಭೀರ ಸಲಹೆ ನೀಡಿದ್ದ ಚುನಾವಣಾ ಆಯೋಗವು ಮಂಗಳವಾರ ಕಂದಾಯ ಕಾರ್ಯದರ್ಶಿ ಹಾಗೂ ಕೇಂದ್ರ ನೇರ ತೆರಿಗೆಗಳ ಮಂಡಳಿ ಅಧ್ಯಕ್ಷರನ್ನು ಕರೆಸಿಕೊಂಡು ಚರ್ಚೆ ನಡೆಸಿದೆ.
Vijaya Karnataka Web it raids ec calls cbdt chairman revenue secy
ಕಂದಯ ಕಾರ್ಯದರ್ಶಿ, ಸಿಬಿಡಿಟಿ ಅಧ್ಯಕ್ಷರಿಗೆ ಆಯೋಗದ ಬುಲಾವ್‌


''ಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷಗಳನ್ನು ಗುರಿಯಾಗಿಟ್ಟುಕೊಂಡು ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮೌಖಿಕ ವಿವರ ನೀಡಿ,'' ಎಂದು ಕಂದಾಯ ಕಾರ್ಯದರ್ಶಿ ಎ.ಬಿ.ಪಾಂಡ್ಯೆ ಮತ್ತು ಸಿಬಿಡಿಟಿ ಅಧ್ಯಕ್ಷ ಪಿ.ಸಿ ಮೋದಿ ಅವರಿಗೆ ಚುನಾವಣಾ ಆಯೋಗ ಆದೇಶಿಸಿತು. ಅಲ್ಲದೇ ಈಗ ನಡೆದಿರುವ ದಾಳಿಗೆ ಸಂಬಂಧಿಸಿ ಮುಂದಿನ ಕ್ರಮಗಳ ಕುರಿತಾಗಿಯೂ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ದಾಳಿ ಬಗೆಗಿನ ಸಂಶಯಗಳಿಗೆ ಖುದ್ದು ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. ''ದಾಳಿ ಹಿಂದೆ ರಾಜಕೀಯ ಹಿತಸಾಧನೆಯ ಯಾವುದೇ ಉದ್ದೇಶ ಇಲ್ಲ. ಅಕ್ರಮ ಹಣ ಪರಭಾರೆಯ ಬಲವಾದ ಸುಳಿವು ಲಭಿಸಿದ ಬಳಿಕವೇ ದಾಳಿಗಳನ್ನು ನಡೆಸಲಾಗಿದೆ,'' ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಸಮಾಧಾನಗೊಳ್ಳದ ಪ್ರತಿಪಕ್ಷಗಳು ಇದರ ಹಿಂದೆ ಸೇಡಿನ ರಾಜಕಾರಣದ ಹುಳುಕನ್ನು ಹುಡುಕಿದ್ದು, ದಾಳಿಗಳ ಮೇಲೆ ನಿಯಂತ್ರಣ ಹೇರುವಂತೆ ಚುನಾವಣಾ ಆಯೋಗಕ್ಕೆ ಮೊರೆ ಇಟ್ಟಿವೆ.

ಮಧ್ಯಪ್ರದೇಶ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರಣಿಯೋಪಾದಿ ನಡೆದ ಐಟಿ ದಾಳಿಯ ಬಗ್ಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ಎತ್ತಿವೆ. ರಾಜಕೀಯ ಪಿತೂರಿಯ ಆರೋಪ ಮಾಡಿವೆ. ಇದನ್ನು ಗಮನದಲ್ಲಿಟ್ಟುಕೊಂಡೇ ಆಯೋಗವು ತಟಸ್ಥ ನಿಲುವು ತಾಳುವಂತೆ ಸಲಹೆ ಮಾಡಿದೆ. ಒಂದೊಮ್ಮೆ ಚುನಾವಣೆಯಲ್ಲಿ ಬಳಸಲು ಅಕ್ರಮ ಹಣ ಸಾಗಣೆ ಕುರಿತು ಸುಳಿವು ಸಿಕ್ಕಲ್ಲಿ, ಆಯಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗೆ ಮಾಹಿತಿ ನೀಡಿ ದಾಳಿ ನಡೆಸಬೇಕು ಎಂದೂ ನಿರ್ದೇಶನ ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌