ಆ್ಯಪ್ನಗರ

ಜಡೇಜಾ ಮನೆ ಒಡೆದ ರಾಜಕೀಯ!

ಅನಿರುದ್ಧ ಸಿನ್ಹಾ ಮತ್ತು ನೈನಬಾ ಅವರು ಭಾನುವಾರ ಜಾಮ್‌ ನಗರ ಜಿಲ್ಲೆಯ ಕಾಲಾವಾಡ್‌ ನಗರದಲ್ಲಿ ನಡೆದ ರಾರ‍ಯಲಿಯಲ್ಲಿ ಕಾಂಗ್ರೆಸ್‌ ಸೇರಿದರು. ಪಾಟೀದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಮುಳು ಕಂಡೋರಿಯಾ ಉಪಸ್ಥಿತರಿದ್ದರು.

Vijaya Karnataka 15 Apr 2019, 5:00 am
ಗುಜರಾತ್‌: ಖ್ಯಾತ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಬಿಜೆಪಿ ಸೇರಿದ ಒಂದೇ ತಿಂಗಳ ಒಳಗೆ, ಜಡೇಜಾ ಅವರ ತಂದೆ ಅನಿರುದ್ಧ ಸಿನ್ಹಾ ಮತ್ತು ಸೋದರಿ ನೈನಾಬಾ ಅವರು ಭಾನುವಾರ ಕಾಂಗ್ರೆಸ್‌ ಸೇರಿದ್ದಾರೆ. ಈ ಮೂಲಕ ರಾಜಕಾರಣ ಅವರ ಮನೆಯನ್ನು ಒಡೆದಂತಾಗಿದೆ.
Vijaya Karnataka Web ravindra jadeja


ಅನಿರುದ್ಧ ಸಿನ್ಹಾ ಮತ್ತು ನೈನಬಾ ಅವರು ಭಾನುವಾರ ಜಾಮ್‌ ನಗರ ಜಿಲ್ಲೆಯ ಕಾಲಾವಾಡ್‌ ನಗರದಲ್ಲಿ ನಡೆದ ರಾರ‍ಯಲಿಯಲ್ಲಿ ಕಾಂಗ್ರೆಸ್‌ ಸೇರಿದರು. ಪಾಟೀದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಮುಳು ಕಂಡೋರಿಯಾ ಉಪಸ್ಥಿತರಿದ್ದರು. ''ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರು ಯುವಕರು, ಮಹಿಳೆಯರು, ರೈತರ ಪರವಾಗಿಲ್ಲ ಎನ್ನುವುದು ಕಾಂಗ್ರೆಸ್‌ ಸೇರಲು ಕಾರಣ,'' ಎಂದು ಅವರು ಹೇಳಿಕೊಂಡರು.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಲ್‌ರೌಂಡರ್‌ ರವೀಂದ್ರ ಜಡೇಜಾ ಮತ್ತು ಪತ್ನಿ ರಿವಾಬಾ ಹಿಂದಿನಿಂದಲೂ ಬಿಜೆಪಿ ಕಡೆ ಒಲವು ಹೊಂದಿದ್ದರು. ಜಡೇಜಾ ಅವರು ಆಗಾಗ ಬಿಜೆಪಿ ಪರ ಬ್ಯಾಟ್‌ ಬೀಸುತ್ತಿದ್ದಾರೆ. ರಿವಾಬಾ ಅವರನ್ನು ಗುಜರಾತ್‌ನ ಕರ್ಣಿ ಸೇನೆಯ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿ ನೇಮಿಸಲಾಗಿತ್ತು. ಅಲ್ಲದೆ ಕಳೆದ ವರ್ಷ ಅವರಿಬ್ಬರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌