ಆ್ಯಪ್ನಗರ

Party History: ಆದಿವಾಸಿ ಅಸ್ಮಿತೆಯ ಜೆಎಂಎಫ್‌

ಪ್ರಸಕ್ತ ಲೋಕಸಭೆಯಲ್ಲಿ ಎರಡು ಸ್ಥಾನ ಹೊಂದಿರುವ ಜಾರ್ಖಂಡ್‌ ಮುಕ್ತಿ ಮೋರ್ಚ ಇದೀಗ ಜಾರ್ಖಂಡ್‌, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸಲಿದೆ. ಕಾಂಗ್ರೆಸ್‌ ಜತೆ ದೋಸ್ತಿ ಮಾಡಿಕೊಂಡಿರುವ ಜೆಎಂಎಂ, ಜಾರ್ಖಂಡ್‌ ವಿಧಾನಸಭೆಯಲ್ಲಿ 19 ಸ್ಥಾನಗಳನ್ನು ಹೊಂದಿದೆ.

Vijaya Karnataka 25 Mar 2019, 5:00 am
ಪ್ರಸಕ್ತ ಲೋಕಸಭೆಯಲ್ಲಿ ಎರಡು ಸ್ಥಾನ ಹೊಂದಿರುವ ಜಾರ್ಖಂಡ್‌ ಮುಕ್ತಿ ಮೋರ್ಚ ಇದೀಗ ಜಾರ್ಖಂಡ್‌, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸಲಿದೆ. ಕಾಂಗ್ರೆಸ್‌ ಜತೆ ದೋಸ್ತಿ ಮಾಡಿಕೊಂಡಿರುವ ಜೆಎಂಎಂ, ಜಾರ್ಖಂಡ್‌ ವಿಧಾನಸಭೆಯಲ್ಲಿ 19 ಸ್ಥಾನಗಳನ್ನು ಹೊಂದಿದೆ.
Vijaya Karnataka Web jmm


19ನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ವಿರೋಚಿತ ಸಮರ ಸಾರಿದ, ಆದಿವಾಸಿ ಮುಖಂಡ ಬಿರ್ಸಾ ಮುಂಡಾ ಜಾರ್ಖಂಡ್‌ ಪಾಲಿಗೆ ಇವತ್ತಿಗೂ ದೊಡ್ಡ ನಾಯಕ. ಈತನೇ ಜೆಎಂಎಂ ಸ್ಥಾಪನೆಗೆ ಸ್ಫೂರ್ತಿ. ಈ ಪಕ್ಷದ ಸ್ಥಾಪಕ ವಿನೋದ್‌ ಬಿಹಾರಿ ಮಹತೊ.

2000ದಲ್ಲಿ ಜಾರ್ಖಂಡ್‌ ರಾಜ್ಯ ಸ್ಥಾಪನೆÜಗೊಂಡಿತು. ಇದಕ್ಕೂ ಮುಂಚೆ ಈ ಭೂಪ್ರದೇಶ ಬಿಹಾರದ ಭಾಗವಾಗಿತ್ತು. ಪ್ರತ್ಯೇಕ ರಾಜ್ಯಕ್ಕಾಗಿ ಜಾರ್ಖಂಡ್‌ ಅವಿರತ ಹೋರಾಟ ನಡೆಸಿತ್ತು. 1962ರ ತನಕ ಜೆಎಂಎಂ, ಬಿಹಾರ ವಿಧಾನಸಭೆಯಲ್ಲಿ 22 ರಿಂದ 32 ಮಂದಿ ಶಾಸಕರನ್ನು ಹೊಂದಿತ್ತು. ಆನಂತರ ನಾಯಕತ್ವ ಗೊಂದಲಗಳಿಂದ ಹಲವು

ಚೂರುಗಳಾಯಿತು. ಅರ್ಧ ಡಜನ್‌ಗೂ ಹೆಚ್ಚು ನಾಯಕರು ನೈಜ ಜೆಎಂಎಂ ನಮ್ಮದೇ ಎಂದು ಹೇಳಿಕೊಳ್ಳುತ್ತಿದ್ದರು.

ಆದರೆ ಈ ಬಣಗಳ ಪೈಕಿ ಹೆಚ್ಚು ಜನಪ್ರಿಯವಾಗಿದ್ದು ಶಿಬು ಸೊರೆನ್‌. 1973ರಲ್ಲಿ ಈ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಅವರು, ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಪಕ್ಷದ ತೆಕ್ಕೆಗೆ ತೆಗೆದುಕೊಂಡರು. 1991ರಲ್ಲಿ ಜೆಎಂಎಂ, ಆರು ಲೋಕಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. 2005ರಲ್ಲಿ ಶಿಬು ಸೊರೆನ್‌ 10 ದಿನ ಜಾರ್ಖಂಡ್‌ ಸಿ ಎಂ ಆಗಿದ್ದರು. ಮತ್ತೆ 2008ರಲ್ಲಿ ಐದು ತಿಂಗಳು ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದ್ದರು. 2009ರಲ್ಲಿ ಮತ್ತೆ ಅವರನ್ನು ಈ ಉನ್ನತ ಪದವಿ ಹುಡುಕಿಕೊಂಡು ಬಂದಿತು. ಈ ಬಾರಿ ಅವರು ಆರು ತಿಂಗಳ ಕಾಲ ರಾಜ್ಯಭಾರ ಮಾಡಿದರು. ಜೆಎಂಎಂ ಪಕ್ಷದ ಹೇಮಂತ್‌ ಸೊರೆನ್‌, 2013ರಲ್ಲಿ ಆರು ತಿಂಗಳು ಸಿಎಂ ಆಗಿದ್ದರು. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು.

ಕಪ್ಪ ಪ್ರಕರಣ

1993ರಲ್ಲಿ ಪಿ.ವಿ. ನರಸಿಂಹರಾವ್‌ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದಾಗ ನಾಲ್ವರು ಜೆಎಂಎಂ ಸಂಸದರು ಕಾಂಗ್ರೆಸ್‌ ಪರ ಮತ ಚಲಾಯಿಸಿದ್ದರು. ಇದಕ್ಕಾಗಿ ಕಾಂಗ್ರೆಸ್‌ನಿಂದ ಕೋಟ್ಯಂತರ ರೂ. 'ಕಪ್ಪ' ಪಡೆದಿದ್ದರು. ಸುಮಾರು ಹತ್ತು ವರ್ಷಗಳ ಕಾಲ ವಿವಿಧ ಕೋರ್ಟ್‌ಗಳಲ್ಲಿ ವಿಚಾರಣೆ ನಡೆದು ಅಂತಿಮವಾಗಿ ನಾಲ್ಕೂ ಮಂದಿ ಖುಲಾಸೆಗೊಂಡರು. ಈ ಕಾಲಘಟ್ಟದಲ್ಲಿ ಜೆಎಂಎಂ ರಾಷ್ಟ್ರವ್ಯಾಪಿ ಸುದ್ದಿಯಲ್ಲಿತ್ತು.

- ಕೆ ವೆಂಕಟೇಶ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ