ಆ್ಯಪ್ನಗರ

ಅತಂತ್ರ ಲೋಕಸಭೆಯಾದರೆ ಕೆಸಿಆರ್‌ ಪ್ಲಾನ್ ಏನು?

ಟಿಆರೆಸ್ ವರಿಷ್ಠ ಹಾಗೂ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಹಾಗೂ ಅವರ ಪುತ್ರ ಕೆ.ಟಿ ರಾಮ ರಾವ್, ಒಕ್ಕೂಟ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರದಲ್ಲಿ ಬಿಜೆಪಿಯೇತರ , ಕಾಂಗ್ರೆಸ್ಸೇತರ ಸರಕಾರ ರಚನೆಯ ಲೆಕ್ಕಾಚಾರ ಹಾಕುತ್ತಿದ್ದಾರೆ. ಇತ್ತೀಚಿನ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಗುಲಾಬಿ ಅಲೆಯಲ್ಲಿ ಕೊಚ್ಚಿ ಹೋಗಿವೆ ಎಂದು ಟಿಆರೆಸ್ ಟೀಕಿಸಿತ್ತು.

Vijaya Karnataka Web 17 Mar 2019, 2:56 pm
ಹೈದರಾಬಾದ್: 2019ರ ಲೋಕಸಭೆ ಚುನಾವಣೆಯ ಕದನದ ರೂಪುರೇಷೆ ಸ್ಪಷ್ಟವಾಗಿದೆ. ಬಿಜೆಪಿ ವರ್ಸಸ್ ಇತರರು ಎಂಬುದೇ ಈ ಚುನಾವಣೆಯ ಪ್ರಧಾನ ವಿಷಯವಾಗಿದೆ. ಆದರೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ನಂತಹ ಕೆಲವು ಪ್ರಾದೇಶಿಕ ಪಕ್ಷಗಳು ಎಚ್ಚರಿಕೆಯ ಹೆಜ್ಜೆಯಿಡುತ್ತಿದ್ದು, ಒಂದೊಮ್ಮೆ ಅತಂತ್ರ ಪರಿಸ್ಥಿತಿ ಎದುರಾದಲ್ಲಿ ಕಿಂಗ್ ಮೇಕರ್ ಆಗುವ ಯೋಚನೆ ಹೊಂದಿವೆ.
Vijaya Karnataka Web KCR

ಟಿಆರೆಸ್ ವರಿಷ್ಠ ಹಾಗೂ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಹಾಗೂ ಅವರ ಪುತ್ರ ಕೆ.ಟಿ ರಾಮ ರಾವ್, ಒಕ್ಕೂಟ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರದಲ್ಲಿ ಬಿಜೆಪಿಯೇತರ , ಕಾಂಗ್ರೆಸ್ಸೇತರ ಸರಕಾರ ರಚನೆಯ ಲೆಕ್ಕಾಚಾರ ಹಾಕುತ್ತಿದ್ದಾರೆ. ಇತ್ತೀಚಿನ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಗುಲಾಬಿ ಅಲೆಯಲ್ಲಿ ಕೊಚ್ಚಿ ಹೋಗಿವೆ ಎಂದು ಟಿಆರೆಸ್ ಟೀಕಿಸಿತ್ತು.

ಹಲವು ಪ್ರಾದೇಶಿಕ ಪಕ್ಷಗಳು ಬಹಿರಂಗವಾಗಿಯೇ ಬಿಜೆಪಿ ಅಥವಾ ಕಾಂಗ್ರೆಸ್ ಮೈತ್ರಿಕೂಟದ ಜತೆ ಗುರುತಿಸಿಕೊಂಡಿವೆ. ಆದರೆ ಟಿಆರ್‌ಎಸ್ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್‌, ಎಸ್‌ಪಿ, ಬಿಎಸ್ಪಿ, ತೃಣಮೂಲ ಕಾಂಗ್ರೆಸ್‌, ಎಡಪಕ್ಷಗಳು ಹಾಗೂ ಡಿಎಂಕೆ ಜತೆ ಆಗಾಗ್ಗೆ ವೇದಿಕೆ ಹಂಚಿಕೊಳ್ಳುತ್ತಿದೆ.

2019ರ ಚುನಾವಣೆ ಬಳಿಕ ಕೇಂದ್ರದಲ್ಲಿ ಪ್ರಮುಖ ಪಾತ್ರ ವಹಿಸಲು ಪ್ರಾದೇಶಿಕ ಪಕ್ಷಗಳು ಸಿದ್ಧರಾಗಬೇಕು ಎಂಬುದು ಟಿಆರೆಸ್ ಇಂಗಿತವಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಮೈತ್ರಿಕೂಟಕ್ಕಿಂತಲೂ ಬಿಜೆಪಿಗೇ ಹೆಚ್ಚಿನ ಅವಕಾಶ ಇರುವ ಸಾಧ್ಯತೆಯಿದೆ. ಹಾಗಿದ್ದರೂ ಒಂದೊಮ್ಮೆ ಅತಂತ್ರವಾದರೆ ಟಿಆರೆಸ್ ಪ್ರಮುಖ ಪಾತ್ರ ವಹಿಸುತ್ತದೆ' ಎಂದು ವರಿಷ್ಠ ನಾಯಕರೊಬ್ಬರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ