ಆ್ಯಪ್ನಗರ

ಅಮೇಠಿಯಲ್ಲಿ ಪ್ರಿಯಾಂಕಾ, ಸ್ಮೃತಿ ಮಾತಿನ ಸಮರ

ನಾನು ಎಷ್ಟು ಬಾರಿ ಅಮೇಠಿಗೆ ಬರುತ್ತೇನೆ ಎನ್ನುವುದನ್ನು ಪ್ರಿಯಾಂಕಾ ಲೆಕ್ಕಹಾಕುತ್ತಿದ್ದಾರೆ.

Vijaya Karnataka 29 Apr 2019, 5:00 am
ಅಮೇಠಿ: ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರ ಭಾನುವಾರ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ನಡುವೆ ಮಾತಿನ ಕದನಕ್ಕೆ ಸಾಕ್ಷಿಯಾಯಿತು.
Vijaya Karnataka Web smriti-irani-priyanka-gandhi


ಸ್ಮೃತಿ ಇರಾನಿ ಅವರು ಮತದಾರರಿಗೆ ಹಣ, ಸೀರೆ ಹಾಗೂ ಶೂ ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪರ್ಧಿಸಿರುವ ಅಮೇಠಿಯಲ್ಲಿ ಭಾನುವಾರ ರಾರ‍ಯಲಿ ನಡೆಸಿದ ಅವರು, ''ಸ್ಮೃತಿ ಇರಾನಿ ತಮ್ಮ ಕ್ಷೇತ್ರದಲ್ಲಿ ಮಾಧ್ಯಮಗಳ ಮುಂದೆಯೇ ಮತದಾರರಿಗೆ ಆಮಿಷ ಒಡ್ಡುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಜನರು ಸ್ವಾಭಿಮಾನದಿಂದ ಬದುಕುತ್ತ ಬಂದವರು. ಅವರಿಗೆ ಅಪಮಾನವಾಗುವ ಕೆಲಸ ಮಾಡುತ್ತಿದ್ದಾರೆ,'' ಎಂದರು.

ರಾಜ್ಯ ಮತ್ತು ಕೇಂದ್ರ ಎರಡೂ ಕಡೆ ಅಧಿಕಾರದಲ್ಲಿ ಇದ್ದರೂ ಇಲ್ಲಿನ ಜನರಿಗೆ ಯಾವುದೇ ಮೂಲ ಸೌಕರ್ಯ ಸಿಗುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಿಜೆಪಿಗೆ ಕ್ಷೇತ್ರದ ಜನರ ನೆನಪಾಗಿದ್ದು, ವಾಮ ಮಾರ್ಗದಿಂದ ಗೆಲ್ಲಲು ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

ಅಮೇಠಿಯಲ್ಲಿ ರಾರ‍ಯಲಿ ನಡೆಸಿದ ಸ್ಮೃತಿ ಇರಾನಿ ಪ್ರಿಯಾಂಕಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

''ಒಂದು ಸಂತೋಷದ ವಿಷಯವೆಂದರೆ, ನಾನು ಎಷ್ಟು ಬಾರಿ ಅಮೇಠಿಗೆ ಬರುತ್ತೇನೆ ಎನ್ನುವುದನ್ನು ಪ್ರಿಯಾಂಕಾ ಲೆಕ್ಕಹಾಕುತ್ತಿದ್ದಾರೆ. ಅಮೇಠಿಯ ಸಂಸದರು (ರಾಹುಲ್‌ ಗಾಂಧಿ) 15 ವರ್ಷದಿಂದ ಕಾಣೆಯಾಗಿದ್ದು, ಅವರು ಎಲ್ಲಿದ್ದರು ಎಂದು ಹೇಳುವುದು ಸಹ ಅಸಾಧ್ಯವಾಗಿದೆ,'' ಎಂದು ಲೇವಡಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ