ಆ್ಯಪ್ನಗರ

ಆಡ್ವಾಣಿ, ಜೋಷಿ ಭೇಟಿ ಮಾಡಿ ಆಶೀರ್ವಾದ ಕೋರಿದ ಪ್ರಧಾನಿ ಮೋದಿ, ಅಮಿತ್ ಶಾ

ಆಡ್ವಾಣಿಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆ. ಬಿಜೆಪಿ ಇಂದು ಈ ಮಟ್ಟದ ಜನಾದೇಶ ಪಡೆಯಬೇಕಾದರೆ ದಶಕಗಳ ಕಾಲ ಪಕ್ಷವನ್ನು ಕಟ್ಟಿ ಬೆಳೆಸಿದ ಹಾಗೂ ಕಾಲ ಕಾಲಕ್ಕೆ ಸೈದ್ಧಾಂತಿಕ ಮಾರ್ಗದರ್ಶನ ನೀಡುವ ಹಿರಿಯರ ಕಠಿಣ ಪರಿಶ್ರಮವೇ ಕಾರಣ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Vijaya Karnataka Web 24 May 2019, 5:02 pm
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಹಿರಿಯ ನಾಯಕ ಹಾಗೂ ಮಾರ್ಗದರ್ಶಕ ಸಮಿತಿ ವರಿಷ್ಠ ಎಲ್‌.ಕೆ ಆಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

'ಆಡ್ವಾಣಿಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆ. ಬಿಜೆಪಿ ಇಂದು ಈ ಮಟ್ಟದ ಜನಾದೇಶ ಪಡೆಯಬೇಕಾದರೆ ದಶಕಗಳ ಕಾಲ ಪಕ್ಷವನ್ನು ಕಟ್ಟಿ ಬೆಳೆಸಿದ ಹಾಗೂ ಕಾಲ ಕಾಲಕ್ಕೆ ಸೈದ್ಧಾಂತಿಕ ಮಾರ್ಗದರ್ಶನ ನೀಡುವ ಹಿರಿಯರ ಕಠಿಣ ಪರಿಶ್ರಮವೇ ಕಾರಣ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.


ಆಡ್ವಾಣಿ ಅವರ ಜತೆಗಿನ ಭೇಟಿ ಫೋಟೋವನ್ನೂ ಮೋದಿ ಪ್ರಕಟಿಸಿದ್ದಾರೆ. ಬಳಿಕ ಮೋದಿ ಮತ್ತು ಶಾ ಮತ್ತೊಬ್ಬ ಹಿರಿಯ ನಾಯಕ ಜೋಷಿ ಅವರನ್ನು ಭೇಟಿ ಮಾಡಿದರು.

'ಡಾ. ಮುರಳಿ ಮನೋಹರ್ ಜೋಷಿ ಅವರು ಶ್ರೇಷ್ಠ ವಿದ್ವಾಂಸರು. ಭಾರತೀಯ ಶಿಕ್ಷಣದ ಸುಧಾರಣೆಯಲ್ಲಿ ಅವರ ಕೊಡುಗೆ ಅಪಾರ. ಬಿಜೆಪಿಯ ಬೆಳವಣಿಗೆಗೆ ಅವರ ಕೊಡುಗೆ ಗಣನೀಯ. ನಾನೂ ಸೇರಿದಂತೆ ಲಕ್ಷಾಂತರ ಕಾರ್ಯಕರ್ತರಿಗೆ ಅವರು ಪ್ರೇರಣೆಯಾಗಿದ್ದಾರೆ' ಎಂದು ಮೋದಿ ಟ್ವೀಟ್ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ