ಆ್ಯಪ್ನಗರ

ಅಧ್ಯಕ್ಷೀಯ ಮಾದರಿ ಪ್ರಧಾನಿಗೆ ಮತ್ತಷ್ಟು ಬಲ ನೀಡಿದ ಜನಾದೇಶ 2019

ಪ್ರಧಾನಿ ಮೋದಿ ಸಹೋದ್ಯೋಗಿಗಳ ಜತೆ ಸಮಾಲೋಚನೆ ನಡೆಸುತ್ತಿದ್ದರು, ಆದರೆ ಅಂತಿಮವಾಗಿ ತಮ್ಮದೇ ಆದ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಹಿರಿಯ ಸಚಿವರು ಹಾಗೂ ಹಿಂದೆ ಎಷ್ಟೇ ಮಹತ್ವದ ಕೊಡುಗೆಗಳನ್ನು ನೀಡಿದ್ದರೂ ಎಲ್ಲರಿಗೂ ಅವಕಾಶ ನೀಡುತ್ತಿದ್ದರು; ಆದರೆ ಅದು ಗುರಿ ಸಾಧಿಸುವಷ್ಟರ ಮಟ್ಟಿಗೆ ಮಾತ್ರ ಸೀಮಿತವಾಗಿತ್ತು. ಭಿನ್ನಾಭಿಪ್ರಾಯಗಳನ್ನು ಕಡೆಗಣಿಸಲಾಗುತ್ತಿತ್ತು, ಆದರೆ ಅದನ್ನು ಗಂಭೀರ ಅಪರಾಧ ಎಂಬಂತೆ ಪರಿಗಣಿಸುತ್ತಿರಲಿಲ್ಲ.

Vijaya Karnataka Web 24 May 2019, 12:31 pm
ಹೊಸದಿಲ್ಲಿ: ಮೊದಲ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ದೃಢವಾದ ನಿಲುವಿನೊಂದಿಗೆ ಸರಕಾರವನ್ನು ಮುನ್ನಡೆಸಿದರು. ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರು. ಇಂದಿರಾಗಾಂಧಿ ಬಳಿಕ ಸರಕಾರದ ಮೇಲೆ ಈ ರೀತಿ ಪೂರ್ಣ ನಿಯಂತ್ರಣ ಹೊಂದಿದ ಮೊದಲ ಪ್ರಧಾನಿ ಮೋದಿ ಅವರಾಗಿದ್ದಾರೆ.
Vijaya Karnataka Web PM Modi new-1

ಅಮೆರಿಕದ ಅಧ್ಯಕ್ಷರು ಅಥವಾ ಬ್ರಿಟಿಷ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್‌ ತಮ್ಮ ಸರಕಾರದ ಮೇಲೆ ಹೊಂದಿರುವ ನಿಯಂತ್ರಣದಂತೆ ಪ್ರಧಾನಿ ನರೇಂದ್ರ ಮೋದಿ ಅವರೂ ಬಿಗಿ ಆಡಳಿತ ನಿಯಂತ್ರಣ ಸಾಧಿಸಿದ್ದರು.

ಪ್ರಧಾನಿ ಮೋದಿ ಸಹೋದ್ಯೋಗಿಗಳ ಜತೆ ಸಮಾಲೋಚನೆ ನಡೆಸುತ್ತಿದ್ದರು, ಆದರೆ ಅಂತಿಮವಾಗಿ ತಮ್ಮದೇ ಆದ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಹಿರಿಯ ಸಚಿವರು ಹಾಗೂ ಹಿಂದೆ ಎಷ್ಟೇ ಮಹತ್ವದ ಕೊಡುಗೆಗಳನ್ನು ನೀಡಿದ್ದರೂ ಎಲ್ಲರಿಗೂ ಅವಕಾಶ ನೀಡುತ್ತಿದ್ದರು; ಆದರೆ ಅದು ಗುರಿ ಸಾಧಿಸುವಷ್ಟರ ಮಟ್ಟಿಗೆ ಮಾತ್ರ ಸೀಮಿತವಾಗಿತ್ತು. ಭಿನ್ನಾಭಿಪ್ರಾಯಗಳನ್ನು ಕಡೆಗಣಿಸಲಾಗುತ್ತಿತ್ತು, ಆದರೆ ಅದನ್ನು ಗಂಭೀರ ಅಪರಾಧ ಎಂಬಂತೆ ಪರಿಗಣಿಸುತ್ತಿರಲಿಲ್ಲ.

ಆರೆಸ್ಸೆಸ್‌ ಸಲಹೆಗಳನ್ನು ಗೌರವಯುತವಾಗಿ ಆಲಿಸಲಾಗುತ್ತಿತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಸರಕಾರಿ ಕಾರ್ಯನಿರ್ವಾಹಕರ ಮೂಲಕ ಸಂಘದ ನಾಯಕತ್ವದ ಜತೆಗೆ ಬಾಂಧವ್ಯವನ್ನು ಮತ್ತಷ್ಟು ಗಟ್ಟಿ ಹಾಗೂ ವಿಸ್ತಾರಗೊಳಿಸಲಾಗುತ್ತಿತ್ತು. ಆದರೆ ಪರಿವಾರದ ಇತರ ಸಂಘಟನೆಗಳ ಬೇಡಿಕೆಗಳಿಗೆ ಪ್ರತಿಬಾರಿಯೂ ಬೆಲೆ ನೀಡುತ್ತಿರಲಿಲ್ಲ.

17ನೇ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಮತ್ತೆ ಪ್ರಬಲ ಜನಾದೇಶ ದೊರೆತಿದ್ದು, ಅವರ 'ಅಧ್ಯಕ್ಷೀಯ ಮಾದರಿ' ಕಾರ್ಯನಿರ್ವಹಣೆಗೆ ಬೆಂಬಲ ದೊರೆತಂತಾಗಿದೆ. ಜನಾದೇಶದ ಗಾತ್ರ, ಸ್ವರೂಪ ಎರಡೂ ಅವರ ವ್ಯಕ್ತಿತ್ವ ಹಾಗೂ ನಾಯಕತ್ವಕ್ಕೆ ಸೂಕ್ತವಾಗುವಂತೆಯೇ ದೊರೆತಿದೆ.

ಸ್ವತಃ ಬಿಜೆಪಿಯೇ ಕಳೆದ ಬಾರಿಗಿಂತಲೂ ಅಧಿಕ ಸ್ಥಾನಗಳನ್ನು ಗೆದ್ದು (303) ಏಕಾಂಗಿಯಾಗಿ ಬೃಹತ್ ಬಹುಮತ ಗಳಿಸಿರುವುದರಿಂದ ಎನ್‌ಡಿಎ ಮಿತ್ರಪಕ್ಷಗಳನ್ನೂ ಓಲೈಸಬೇಕಾದ ಅನಿವಾರ್ಯತೆ ಮೋದಿ ಅವರಿಗಿಲ್ಲವಾಗಿದೆ. ಇಂತಹ ಬಲಿಷ್ಠ ನಾಯಕತ್ವಕ್ಕೆ ಬಲಿಷ್ಠ ಜನಾದೇಶವೇ ದೊರೆತಿರುವುದರಿಂದ ಮಹತ್ವದ ಖಾತೆಗಳ ಹಂಚಿಕೆಯಲ್ಲಾಗಲಿ, ಎಷ್ಟರ ಮಟ್ಟಿಗೆ ಸ್ವಾಯತ್ತತೆ ನೀಡಬೇಕೆಂಬ ವಿಚಾರದಲ್ಲಾಗಲಿ ಗೊಂದಲ ಉಳಿದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ