ಆ್ಯಪ್ನಗರ

ಚುನಾವಣೆ ಬಳಿಕ ಖರ್ಗೆ ಜೈಲಿಗೆ: ಮಾಲೀಕಯ್ಯ

ಸಂಸದ ಮಲ್ಲಿಕಾರ್ಜುನ ಖರ್ಗೆ 50 ಸಾವಿರ ಕೋಟಿ ಅಕ್ರಮ ಆಸ್ತಿ ಗಳಿಸಿದ್ದು, ಚುನಾವಣೆ ನಂತರ ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಮಾಲೀಕಯ್ಯ ಗುತ್ತೇದಾರ್‌ ಆರೋಪಿಸಿದರು.

Vijaya Karnataka 21 Apr 2019, 5:00 am
ಕಲಬುರಗಿ: ಸಂಸದ ಮಲ್ಲಿಕಾರ್ಜುನ ಖರ್ಗೆ 50 ಸಾವಿರ ಕೋಟಿ ಅಕ್ರಮ ಆಸ್ತಿ ಗಳಿಸಿದ್ದು, ಚುನಾವಣೆ ನಂತರ ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಮಾಲೀಕಯ್ಯ ಗುತ್ತೇದಾರ್‌ ಆರೋಪಿಸಿದರು. ಕಲಬುರಗಿಯ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಈಡಿಗ ಸಮುದಾಯದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ''ಒಂದು ವೇಳೆ ಚುನಾವಣೆಯಲ್ಲಿ ಸೋತರೆ ಜೈಲಿಗೆ ಹೋಗಬೇಕಾಗುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಚುನಾವಣೆಯಲ್ಲಿ ಹಣ ಹಂಚಿ ಆಯ್ಕೆಯಾಗುವ ಅಡ್ಡ ದಾರಿ ಹಿಡಿಯುತ್ತಾರೆ,'' ಎಂದರು. ಸರಕಾರಕ್ಕೆ ಪಾವತಿಸಬೇಕಾದ ತೆರಿಗೆ ಹಣವನ್ನು ಕೊಳ್ಳೆ ಹೊಡೆದು ದೊಡ್ಡ ದೊಡ್ಡ ಬಿಲ್ಡಿಂಗ್‌ಗಳು, ಆಸ್ತಿ ಮಾಡಿದ್ದಾರೆ. ಮೊದಲು ಇವರದು ಇಷ್ಟೊಂದು ಆಸ್ತಿ ಇರಲಿಲ್ಲ. ಈಗ ಹೆಚ್ಚಾಗಿದೆ. ಪಾಪದ ಹಣದಲ್ಲಿ ಎಲೆಕ್ಷನ್‌ಗೆ ಖರ್ಚು ಮಾಡುತ್ತಿದ್ದಾರೆ. ಇವರ ಕಡೆಯವರು ಹಣ ಕೊಟ್ಟರೆ ತೆಗೆದುಕೊಳ್ಳಬೇಕು. ಆದರೆ ವೋಟ್‌ ಮಾತ್ರ ಬಿಜೆಪಿಗೆ ಹಾಕಬೇಕು ಎಂದು ಈಡಿಗ ಸಮುದಾಯದ ಜನರಿಗೆ ಕರೆ ನೀಡಿದರು.
Vijaya Karnataka Web Malikayya Guttedar


ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ. ತನಿಖೆ ನಡೆಸಲಿ. ಅದಕ್ಕೆ ನಾನು ಸಿದ್ಧ. ತನಿಖೆಯಲ್ಲಿ ನನ್ನ ಆಸ್ತಿ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ. ನಾನು ತಪ್ಪು ಮಾಡಿದ್ದರೆ ಜೈಲಿಗಲ್ಲ, ಗಲ್ಲಿಗೆ ಬೇಕಾದರೆ ಏರಿಸಲಿ.
- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಭ್ಯರ್ಥಿ

ಸಂಸದ ಮಲ್ಲಿಕಾರ್ಜುನ ಖರ್ಗೆ ಅಕ್ರಮವಾಗಿ 50 ಸಾವಿರ ಕೋಟಿ ರೂ.ಗಳಿಸಿರುವುದನ್ನು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್‌ ಸಾಬೀತುಪಡಿಸಿದರೆ ನಮ್ಮ ಕುಟುಂಬ ರಾಜಕೀಯ ನಿವೃತ್ತಿ ಪಡೆಯಲಿದೆ. ಒಂದು ವೇಳೆ ಸಾಬೀತು ಮಾಡದಿದ್ದರೆ ಗುತ್ತೇದಾರ್‌ ಪಡೆಯಲಿ.
- ಪ್ರಿಯಾಂಕ್‌ ಖರ್ಗೆ, ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌