ಆ್ಯಪ್ನಗರ

ಪ್ರಧಾನಿ ಮೋದಿಗೆ 'ಕಪಾಳಮೋಕ್ಷ' ಆಗಲಿ ಎಂದ ಬಂಗಾಳಿ ದೀದಿ ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ ಅವರು ರೋಡ್ ಶೋ ನಡೆಸುತ್ತಿದ್ದಾಗ ಮೂವರು ಯುವಕರು ಜೈ ಶ್ರೀರಾಮ್ ಘೋಷಣೆ ಕೂಗಿದ್ದು ಅವರನ್ನು ಕೂಡಲೇ ಬಂಧಿಸುವಂತೆ ದೀದಿ ಸರಕಾರ ಆದೇಶಿಸಿರುವ ಘಟನೆಯ ವೀಡಿಯೋ ಶನಿವಾರ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದೀದಿಗೆ ಸವಾಲೆಸೆದಿದ್ದರು. ಇದಕ್ಕೆ ತಿರುಗೇಟು ನೀಡಿದ ಮಮತಾ, 'ಮೋದಿ ಅವರು ಬಂಗಾಳಕ್ಕೆ ಬಂದು ನನ್ನನ್ನು ದೊಡ್ಡ ಸುಲಿಗೆಕೋರಳು ಎನ್ನುತ್ತಾರೆ. ಅವರ ಕಪಾಳಕ್ಕೆ ಹೊಡೆಯಲು ನಾನು ಬಯಸುತ್ತೇನೆ. ಪ್ರಜಾಪ್ರಭುತ್ವದ ಕಪಾಳಮೋಕ್ಷ ಅವರಿಗೆ ಅಗತ್ಯವಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka Web 7 May 2019, 5:29 pm
ಕೋಲ್ಕತ: ಪ್ರಧಾನಿ ನರೇಂದ್ರ ಮೋದಿ ಅವರಿಗೆ 'ಪ್ರಜಾಪ್ರಭುತ್ವದ ಕಪಾಳಮೋಕ್ಷ' ಅಗತ್ಯವಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅಲ್ಲದೆ ರಾವಣ ಹಾಗೂ ದುರ್ಯೋಧನನಿಗೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web Mamata Banerjee


ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರು, 'ಪಶ್ಚಿಮ ಬಂಗಾಳದಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿದವರನ್ನು ಬಂಧಿಸುವ ಮಮತಾ ಬ್ಯಾನರ್ಜಿ ಸರಕಾರ ತಾಕತ್ತಿದ್ದರೆ ನನ್ನನ್ನು ಬಂಧಿಸಲಿ, ನಾನೂ ಜೈ ಶ್ರೀರಾಮ್ ಅನ್ನುತ್ತೇನೆ' ಎಂದು ಸವಾಲು ಹಾಕಿದ್ದರು.

ಮಮತಾ ಬ್ಯಾನರ್ಜಿ ಅವರು ರೋಡ್ ಶೋ ನಡೆಸುತ್ತಿದ್ದಾಗ ಮೂವರು ಯುವಕರು ಜೈ ಶ್ರೀರಾಮ್ ಘೋಷಣೆ ಕೂಗಿದ್ದು ಅವರನ್ನು ಕೂಡಲೇ ಬಂಧಿಸುವಂತೆ ದೀದಿ ಸರಕಾರ ಆದೇಶಿಸಿರುವ ಘಟನೆಯ ವೀಡಿಯೋ ಶನಿವಾರ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದೀದಿಗೆ ಸವಾಲೆಸೆದಿದ್ದರು.

ಮಂಗಳವಾರ ಇದಕ್ಕೆ ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ, 'ಮೋದಿ ಅವರು ಬಂಗಾಳಕ್ಕೆ ಬಂದು ನನ್ನನ್ನು ದೊಡ್ಡ ಸುಲಿಗೆಕೋರಳು ಎಂದು ಹೇಳುತ್ತಾರೆ. ಅವರ ಕಪಾಳಕ್ಕೆ ಹೊಡೆಯಲು ನಾನು ಬಯಸುತ್ತೇನೆ. ಪ್ರಜಾಪ್ರಭುತ್ವದ ಕಪಾಳಮೋಕ್ಷ ಅವರಿಗೆ ಅಗತ್ಯವಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಲ್ಕತದಿಂದ 170 ಕಿ.ಮೀ ದೂರದ ತಮ್ಲುಕ್‌ನಲ್ಲಿ ಪ್ರಧಾನಿ ಮೋದಿ ಅವರು ದೀದಿಗೆ ಸವಾಲೊಡ್ಡಿದ್ದರು. ಇದಕ್ಕೆ ಪ್ರತಿಯಾಗಿ ಮಮತಾ ಬ್ಯಾನರ್ಜಿ, 'ನೀವು ಬಿಜೆಪಿ ಬಾಬು. ನೀವು ಜೈ ಶ್ರೀರಾಮ್ ಎಂದು ಹೇಳಬಹುದು. ಆದರೆ ರಾಮ ಮಂದಿರ ನಿರ್ಮಿಸಲು ನಿಮ್ಮಿಂದ ಆಗಿಲ್ಲವೇಕೆ? ಚುನಾವಣೆ ವೇಳೆ ರಾಮಚಂದ್ರ ನಿಮ್ಮ ಪಕ್ಷದ ಏಜೆಂಟ್ ಆಗಿ ಬಿಡುತ್ತಾನೆ. ನೀವು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತೀರಿ. ಮತ್ತೆ ಅದನ್ನು ಇತರರ ಮೇಲೂ ಹೇರಲು ಪ್ರಯತ್ನಿಸುತ್ತಿದ್ದೀರಿ' ಎಂದು ಟೀಕಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ