ಆ್ಯಪ್ನಗರ

ಕಾಂಗ್ರೆಸ್‌ನ ಮಿಲಿಂದ್‌ ದೇವೊರಾಗೆ ಮುಖೇಶ್‌ ಅಂಬಾನಿ ಬೆಂಬಲ

2004ರಿಂದ 14ರವರೆಗೆ ದಕ್ಷಿಣ ಮುಂಬಯಿ ಸಂಸದರಾಗಿದ್ದ ಮಿಲಿಂದ್‌ ದೇವೊರಾ, 2014ರಲ್ಲಿ ಸೋತಿದ್ದರು.

Vijaya Karnataka 19 Apr 2019, 5:00 am
ಮುಂಬಯಿ: ಉದ್ಯಮಿ ಮುಖೇಶ್‌ ಅಂಬಾನಿ ಅವರು ಮುಂಬಯಿ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಲಿಂದ್‌ ದೇವೊರಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ''ಮಿಲಿಂದ್‌ ದಕ್ಷಿಣ ಮುಂಬಯಿಯವರು. ಹತ್ತು ವರ್ಷಗಳಿಂದ ಕ್ಷೇತ್ರ ಪ್ರತಿನಿಧಿಸುತ್ತಿರುವ ಅವರಿಗೆ ಕ್ಷೇತ್ರದ ಸಮಗ್ರ ಪರಿಚಯವಿದೆ. ಕ್ಷೇತ್ರದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ-ಆರ್ಥಿಕ ಸ್ಥಿತಿಗತಿ ಕುರಿತು ಆಳವಾದ ತಿಳಿವಳಿಕೆ ಹೊಂದಿದ್ದಾರೆ,'' ಎಂದು ಮುಖೇಶ್‌ ಶ್ಲಾಘಿಸಿದ್ದಾರೆ. ತಮಗೆ ಬೆಂಬಲ ನೀಡಿರುವ ಗಣ್ಯರ ಹೇಳಿಕೆ ಒಳಗೊಂಡಿರುವ 137 ಸೆಕೆಂಡ್‌ಗಳ ವಿಡಿಯೊವೊಂದನ್ನು ಮಿಲಿಂದ್‌ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಮುಖೇಶ್‌ ಅಂಬಾನಿ ಹಾಗೂ ಬ್ಯಾಂಕರ್‌ ಉದಯ್‌ ಕೊಟಕ್‌ ಮೆಚ್ಚುಗೆಗಳು ದಾಖಲಾಗಿವೆ. 2004ರಿಂದ 14ರವರೆಗೆ ದಕ್ಷಿಣ ಮುಂಬಯಿ ಸಂಸದರಾಗಿದ್ದ ಮಿಲಿಂದ್‌ ದೇವೊರಾ, 2014ರಲ್ಲಿ ಸೋತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ