ಆ್ಯಪ್ನಗರ

ಮೋದಿ ಬಳಿ ತಮ್ಮ ಗಂಡಂದಿರನ್ನು ಕಳುಹಿಸಲು ಬಿಜೆಪಿ ಮಹಿಳಾಮಣಿಗಳಿಗೆ ಭಯ

''ಬಿಜೆಪಿಯ ಕಾರ್ಯಕರ್ತೆಯರಿಗೆ ತಮ್ಮ ಪತಿಯಂದಿರನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಹೆದರಿಕೆ ಶುರುವಾಗಿದೆ. ಹೀಗಾಗಿಯೇ ಅವರು ತಮ್ಮ ಗಂಡಂದಿರನ್ನು ಪ್ರಧಾನಿ ಹತ್ತಿರಕ್ಕೆ ಕಳುಹಿಸಲು ಹಿಂದೆಮುಂದೆ ನೋಡುತ್ತಿದ್ದಾರೆ,'' ಎಂದು ಟೀಕಿಸಿದ್ದಾರೆ. ''ಮೋದಿ ಅವರು ರಾಜಕೀಯ ಲಾಭಕ್ಕಾಗಿ ಮುಗ್ಧ ಪತ್ನಿಯನ್ನು ತೊರೆದಿದ್ದಾರೆ. ಇಂತಹ ಪ್ರಧಾನಿಯಿಂದ ಮಹಿಳೆಯರಿಗೆ ಗೌರವ ಸಿಗುತ್ತದೆ ಎಂಬುದು ಕನಸಿನ ಮಾತು. ಎಲ್ಲ ಮಹಿಳೆಯರೂ ಬಿಜೆಪಿ ಮತಹಾಕದೇ ಮೋದಿ ಅವರ ಪತ್ನಿಗೆ ಗೌರವ ಸಲ್ಲಿಸಬೇಕು,'' ಎಂದು ಹೇಳಿದ್ದಾರೆ.

Vijaya Karnataka 14 May 2019, 7:34 am
ಹೊಸದಿಲ್ಲಿ: ''ಬಿಜೆಪಿಯಲ್ಲಿರುವ ಮದುವೆಯಾದ ಮಹಿಳಾ ಕಾರ‍್ಯಕರ್ತರು ತಮ್ಮ ಗಂಡಂದಿರನ್ನು ನರೇಂದ್ರ ಮೋದಿಯವರ ಬಳಿ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಮೋದಿ ಅವರಂತೆ ತಮ್ಮ ಪತಿಯಂದಿರೂ ತಮ್ಮನ್ನು ಬಿಟ್ಟು ಹೋದರೆ ಹೇಗೆ ಎಂಬ ಭಯ ಅವರಿಗೆ ಕಾಡುತ್ತಿದೆ,'' ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ವ್ಯಂಗ್ಯವಾಡಿದ್ದಾರೆ.
Vijaya Karnataka Web mayawati unfit for public life says jaitley on her personal remarks against modi
ಮೋದಿ ಬಳಿ ತಮ್ಮ ಗಂಡಂದಿರನ್ನು ಕಳುಹಿಸಲು ಬಿಜೆಪಿ ಮಹಿಳಾಮಣಿಗಳಿಗೆ ಭಯ


ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಯಾವತಿ ಅವರು, ''ಬಿಜೆಪಿಯ ಕಾರ್ಯಕರ್ತೆಯರಿಗೆ ತಮ್ಮ ಪತಿಯಂದಿರನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಹೆದರಿಕೆ ಶುರುವಾಗಿದೆ. ಹೀಗಾಗಿಯೇ ಅವರು ತಮ್ಮ ಗಂಡಂದಿರನ್ನು ಪ್ರಧಾನಿ ಹತ್ತಿರಕ್ಕೆ ಕಳುಹಿಸಲು ಹಿಂದೆಮುಂದೆ ನೋಡುತ್ತಿದ್ದಾರೆ,'' ಎಂದು ಟೀಕಿಸಿದ್ದಾರೆ. ''ಮೋದಿ ಅವರು ರಾಜಕೀಯ ಲಾಭಕ್ಕಾಗಿ ಮುಗ್ಧ ಪತ್ನಿಯನ್ನು ತೊರೆದಿದ್ದಾರೆ. ಇಂತಹ ಪ್ರಧಾನಿಯಿಂದ ಮಹಿಳೆಯರಿಗೆ ಗೌರವ ಸಿಗುತ್ತದೆ ಎಂಬುದು ಕನಸಿನ ಮಾತು. ಎಲ್ಲ ಮಹಿಳೆಯರೂ ಬಿಜೆಪಿ ಮತಹಾಕದೇ ಮೋದಿ ಅವರ ಪತ್ನಿಗೆ ಗೌರವ ಸಲ್ಲಿಸಬೇಕು,'' ಎಂದು ಹೇಳಿದ್ದಾರೆ.

ರಾಜಸ್ಥಾನದ ಆಲ್ವಾರ್‌ನಲ್ಲಿ ಇತ್ತೀಚೆಗೆ ನಡೆದ ಭೀಕರ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನೂ ಪ್ರಧಾನಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಚುನಾವಣೆ ಲಾಭಕ್ಕೆ ದಿನಕ್ಕೊಮ್ಮೆ ತಮ್ಮ ಜಾತಿ ಬದಲಾಯಿಸಿಕೊಳ್ಳುತ್ತಿದ್ದಾರೆ ಎಂದೂ ಮಾಯಾವತಿ ಕಿಡಿಕಾರಿದ್ದಾರೆ.

ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಕುರಿತು ಮೋದಿ ಅವರು, ''ರಾಜಸ್ಥಾನ ಸರಕಾರ ತರಾತುರಿಯಲ್ಲಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ. ಅದೊಂದು ಸಂವೇದನಾ ಶೂನ್ಯ ಸರಕಾರವಾಗಿದೆ. ಹೀಗಿದ್ದರೂ ಮಾಯಾವತಿ ಅವರು ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ನೀಡಿದ ಬೆಂಬಲ ಹಿಂಪಡೆಯಲಿಲ್ಲ. ಈಗ ಅತ್ಯಾಚಾರ ಸಂತ್ರಸ್ತೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ,'' ಎಂದು ಟೀಕಾ ಪ್ರಹಾರ ನಡೆಸಿದ್ದರು. ಇದರ ಬೆನ್ನಲ್ಲೇ ಮಾಯಾವತಿ ಅವರು ಮೋದಿಯವರನ್ನು ಜರಿದಿದ್ದಾರೆ.

ಮಾಯಾವತಿ ಅವರು ಸಭ್ಯತೆಯನ್ನೂ ಮೀರಿ ಪ್ರಧಾನಿ ವಿರುದ್ಧ ಅತ್ಯಂತ ಕೆಳಮಟ್ಟದಲ್ಲಿ ಮಾತನಾಡಿದ್ದಾರೆ. ಪ್ರಧಾನಿ ವಿರುದ್ಧ ವೈಯಕ್ತಿಕ ನೆಲೆಯಲ್ಲಿ ಟೀಕೆ ನಡೆಸುವ ಮಾಯಾವತಿ ಅವರು ಸಾರ್ವಜನಿಕ ಜೀವನದಲ್ಲಿರುವ ಅಯೋಗ್ಯರು- ಅರುಣ್‌ ಜೇಟ್ಲಿ, ಕೇಂದ್ರ ಹಣಕಾಸು ಸಚಿವೆ

ಬಿಜೆಪಿಯಲ್ಲಿರುವ ಎಲ್ಲ ಮಹಿಳೆಯರೆಲ್ಲರೂ ಸಂತೋಷದಿಂದ ಇದ್ದು, ನಾವೆಲ್ಲರೂ ಉತ್ತಮ ವೃತ್ತಿಪರ ಸಂಬಂಧ ಇರಿಸಿಕೊಂಡಿದ್ದೇವೆ. ಪ್ರಧಾನಿ ಹಾಗೂ ಬಿಜೆಪಿಯಲ್ಲಿರುವ ಮಹಿಳೆಯರನ್ನು ಅವರು ಅವಮಾನಿಸಿದ್ದಾರೆ. ತಮ್ಮ ಹೇಳಿಕೆಗೆ ಕ್ಷಮೆ ಕೋರಬೇಕು
- ನಿರ್ಮಲಾ ಸೀತಾರಾಮನ್‌, ರಕ್ಷಣಾ ಸಚಿವೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌