ಹೊಸದಿಲ್ಲಿ: ಲೋಕಸಭೆ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರದ ಮಾಜಿ ಸಚಿವ ಮಿಲಿಂದ್ ದೇವೊರಾ ಅವರನ್ನು ಮುಂಬಯಿ ಪ್ರಾದೇಶಿಕ ಕಾಂಗ್ರೆಸ್ ಸಮಿತಿ ಮುಖ್ಯಸ್ಥರನ್ನಾಗಿ ಸೋಮವಾರ ನೇಮಿಸಿದೆ. ನಿರ್ಗಮಿತ ಮುಖ್ಯಸ್ಥ ಸಂಜಯ್ ನಿರುಪಮ್ ಅವರಿಗೆ ಮುಂಬಯಿ ವಾಯವ್ಯ ಲೋಕಸಭೆ ಕ್ಷೇತ್ರದಿಂದ ಟಿಕೆಟ್ ನೀಡಿದ ಬೆನ್ನಲ್ಲೇ ಪಕ್ಷದಲ್ಲಿ ಭುಗಿಲೆದ್ದ ಆಂತರಿಕ ಕಲಹ ಶಮನಗೊಳಿಸುವ ನಿಟ್ಟಿನಲ್ಲಿ ಅವರ ಸ್ಥಾನಕ್ಕೆ ದೇವೊರಾ ಅವರನ್ನು ಹೈಕಮಾಂಡ್ ನೇಮಿಸಿದೆ. ಕೇಂದ್ರದ ಮಾಜಿ ಸಚಿವ ಮುರುಳಿ ದೇವೊರಾ ಅವರ ಪುತ್ರನಾಗಿರುವ ಮಿಲಿಂದ್ ದೇವೊರಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ರಾಹುಲ್ ಆಪ್ತ ಮಿಲಿಂದ್ ದೇವೊರಾ ಮುಂಬಯಿ ಕಾಂಗ್ರೆಸ್ ಮುಖ್ಯಸ್ಥ
ನಿರ್ಗಮಿತ ಮುಖ್ಯಸ್ಥ ಸಂಜಯ್ ನಿರುಪಮ್ ಅವರಿಗೆ ಮುಂಬಯಿ ವಾಯವ್ಯ ಲೋಕಸಭೆ ಕ್ಷೇತ್ರದಿಂದ ಟಿಕೆಟ್ ನೀಡಿದ ಬೆನ್ನಲ್ಲೇ ಪಕ್ಷದಲ್ಲಿ ಭುಗಿಲೆದ್ದ ಆಂತರಿಕ ಕಲಹ ಶಮನಗೊಳಿಸುವ ನಿಟ್ಟಿನಲ್ಲಿ ಅವರ ಸ್ಥಾನಕ್ಕೆ ದೇವೊರಾ ಅವರನ್ನು ಹೈಕಮಾಂಡ್ ನೇಮಿಸಿದೆ.
Vijaya Karnataka 26 Mar 2019, 5:00 am