ಆ್ಯಪ್ನಗರ

ಅಹಮದಾಬಾದ್‌ನಲ್ಲಿ ಮತ ಚಲಾಯಿಸಲಿದ್ದಾರೆ ಮೋದಿ, ಶಾ, ಆಡ್ವಾಣಿ

ಗುಜರಾತಿನ 26 ಲೋಕಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಮತದಾನ ನಡೆಯುತ್ತಿದೆ.

Times Now 22 Apr 2019, 8:07 pm
ಅಹಮದಾಬಾದ್: ಮಂಗಳವಾರ ( ನಾಳೆ) ದೇಶದಲ್ಲಿ ಮೂರನೆಯ ಹಂತದ ಚುನಾವಣೆ ನಡೆಯುತ್ತಿದ್ದು, ಪ್ರಧಾನಿ ಮೋದಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಬಿಜೆಪಿ ವರಿಷ್ಠ ಲಾಲ್‌ಕೃಷ್ಣ ಆಡ್ವಾಣಿ ಗುಜರಾತಿನ ಅಹಮದಾಬಾದಿನಲ್ಲಿ ಮತದಾನ ಮಾಡಲಿದ್ದಾರೆ.
Vijaya Karnataka Web ಮೋದಿ


ಗಾಂಧಿ ನಗರ ಲೋಕ ಸಭಾ ಕ್ಷೇತ್ರದಡಿಯಲ್ಲಿ ಬರುವ ರಾಣಿಪ್‌ನಲ್ಲಿರುವ ನಿಶಾವ್ ವಿದ್ಯಾಲಯದಲ್ಲಿ ಮೋದಿ ಮತ ಚಲಾಯಿಸಲಿದ್ದಾರೆ. ಗಾಂಧಿ ನಗರದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಣಕ್ಕಿಳಿದಿದ್ದಾರೆ. ಲಾಲ್‌ಕೃಷ್ಣ ಆಡ್ವಾಣಿ ಇಲ್ಲಿಯ ಹಾಲಿ ಸಂಸದರಾಗಿದ್ದಾರೆ. ಮಾಹಿತಿಗಳ ಪ್ರಕಾರ ಶಾ ನಾರಣಾಪುರದಲ್ಲಿನ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಲಿದ್ದಾರೆ. ಆಡ್ವಾಣಿ ಖಾನ್ಪುರದ ಶಾಲೆಯೊಂದರಲ್ಲಿ ಮತದಾನ ಮಾಡಲಿದ್ದರೆ. ಜೇಟ್ಲಿ ರಾಜಮಾರ್ಗದಲ್ಲಿರುವ ಕಾಲೇಜೊಂದರಲ್ಲಿ ಮತ ಹಾಕಲಿದ್ದಾರೆ.

ಪ್ರಧಾನಿ ಮೋದಿ ಇಂದು ರಾತ್ರಿಯೇ ಅಹಮದಾಬಾದ್ ತಲುಪಲಿದ್ದಾರೆ ಎಂದು ಮಾಹಿತಿ ದೊರೆತಿದೆ.

ರಾಜ್ಯದಲ್ಲಿ 4,51,52,373 ಮತದಾರರಿದ್ದು 371 ಮಂದಿ ಕಣದಲ್ಲಿದ್ದಾರೆ. ಕಳೆದ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲ 26 ಕ್ಷೇತ್ರಗಳನ್ನು ಗೆದ್ದಿತ್ತು. ಗುಜರಾತಿನಲ್ಲಿ ಒಂದೇ ಹಂತದಲ್ಲಿ ಎಲ್ಲ 26 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.

ಮೂರನೇ ಹಂತದಲ್ಲಿ ದೇಶದ ಒಟ್ಟು 14 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 115 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಅಸ್ಸಾಂ (4), ಬಿಹಾರ (5), ಛತ್ತೀಸ್‌ಗಢ (7), ಗುಜರಾತ್‌ (7), ಗೋವಾ (2), ಜಮ್ಮು ಮತ್ತು ಕಾಶ್ಮೀರ (1), ಕರ್ನಾಟಕ (14), ಕೇರಳ (20), ಮಹಾರಾಷ್ಟ್ರ (14), ಒಡಿಶಾ (6), ಯುಪಿ (10), ಪಶ್ಚಿಮ ಬಂಗಾಳ (5), ದಾದ್ರಾ ಮತ್ತು ನಗರ್‌ಹವೇಲಿ (1), ದಮನ್‌ ಮತ್ತು ದಿಯು (1).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌