ಆ್ಯಪ್ನಗರ

ಪ್ರತಿಪಕ್ಷಗಳ ಮುಖಂಡರ ಸಭೆ ಇಂದು

ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸಿದರೆ ಯಾವುದೇ ಗೊಂದಲ ಉಳಿಯುವುದಿಲ್ಲ. ಒಂದು ವೇಳೆ ಅತಂತ್ರ ಲೋಕಸಭೆ ನಿರ್ಮಾಣಗೊಂಡರೆ ಮಾತ್ರ ಪ್ರತಿಪಕ್ಷಗಳ ಒಗ್ಗೂಡಿಕೆಯ ಕಸರತ್ತು ಆರಂಭಗೊಳ್ಳಲಿದೆ.

Vijaya Karnataka 21 May 2019, 5:00 am
ಹೊಸದಿಲ್ಲಿ: ಸಮೀಕ್ಷೆಗಳ ಭವಿಷ್ಯದ ಹೊರತಾಗಿಯೂ ನಿರಾಶೆಗೊಳ್ಳದ ಪ್ರತಿಪಕ್ಷಗಳ ಮುಖಂಡರು ದಿಲ್ಲಿಯಲ್ಲಿ ಮಂಗಳವಾರ ಸಭೆ ಸೇರಿ, ಮುಂದಿನ ಸರಕಾರ ರಚನೆಯ ಸಾಧ್ಯತೆ ಕುರಿತು ಚರ್ಚಿಸಲಿದ್ದಾರೆ.
Vijaya Karnataka Web notwithstanding exit polls oppn leaders set to meet tomorrow also to move ec over vvpats
ಪ್ರತಿಪಕ್ಷಗಳ ಮುಖಂಡರ ಸಭೆ ಇಂದು

ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸಿದರೆ ಯಾವುದೇ ಗೊಂದಲ ಉಳಿಯುವುದಿಲ್ಲ. ಒಂದು ವೇಳೆ ಅತಂತ್ರ ಲೋಕಸಭೆ ನಿರ್ಮಾಣಗೊಂಡರೆ ಮಾತ್ರ ಪ್ರತಿಪಕ್ಷಗಳ ಒಗ್ಗೂಡಿಕೆಯ ಕಸರತ್ತು ಆರಂಭಗೊಳ್ಳಲಿದೆ. ಅಂತಹ ಸಂದರ್ಭ ತುರ್ತಾಗಿ ಮಾಡಬೇಕಾದ ಕೆಲಸ ಏನು ಎನ್ನುವ ಕುರಿತು ಮಂಗಳವಾರದ ಸಭೆಯಲ್ಲಿ ಪ್ರತಿಪಕ್ಷಗಳ ಮುಖಂಡರು ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿವಿಪ್ಯಾಟ್‌ ಚೀಟಿಗಳ ತಪಾಸಣೆ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಜಾರಿಗೆ ಕುರಿತೂ ಸಭೆ ಚರ್ಚೆ ನಡೆಸಲಿದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್‌, ಎನ್‌ಸಿಪಿಯ ಶರದ್‌ ಪವಾರ್‌, ಟಿಡಿಪಿಯ ಚಂದ್ರಬಾಬು ನಾಯ್ಡು, ಬಿಎಸ್ಪಿಯ ಸತೀಶ್‌ ಚಂದ್ರ ಮಿಶ್ರಾ, ಸಿಪಿಐ(ಎಂ)ನ ಸೀತಾರಾಮ್‌ ಯೆಚೂರಿ, ಸಿಪಿಐನ ಡಿ.ರಾಜಾ, ಟಿಎಂಸಿಯ ಡೆರೆಕ್‌ ಓಬ್ರಿಯನ್‌ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ