ಆ್ಯಪ್ನಗರ

ದೇಶದ ರಕ್ಷಣೆಗೆ ಮೋದಿ ಅನಿವಾರ್ಯ ಎಂದ ಶಾ

ಎಸ್ಪಿ ಮತ್ತು ಬಿಎಸ್ಪಿ ಜಾತಿ-ಧರ್ಮದ ಹೆಸರಲ್ಲಿ ಜನರನ್ನು ವಿಭಜನೆ ಮಾಡುತ್ತಿವೆ. ಅವು ಮತ ಗಳಿಕೆಗಾಗಿ ಕೆಲವು ಸಮುದಾಯಗಳನ್ನು ಓಲೈಸುತ್ತಿವೆ.

Vijaya Karnataka 10 May 2019, 5:00 am
ಬಲರಾಮ್‌ಪುರ: ನರೇಂದ್ರ ಮೋದಿ ಅವರು ಮರಳಿ ಪ್ರಧಾನಿಯಾಗಿ ಆಯ್ಕೆಯಾದರೆ ಮಾತ್ರ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಖಾತ್ರಿ ಸಾಧ್ಯ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಗುರುವಾರ ಹೇಳಿದ್ದಾರೆ. ಚುನಾವಣಾ ರಾರ‍ಯಲಿಯಲ್ಲಿ ಮಾತನಾಡಿದ ಅವರು, ಎಸ್ಪಿ ಮತ್ತು ಬಿಎಸ್ಪಿ ಜಾತಿ-ಧರ್ಮದ ಹೆಸರಲ್ಲಿ ಜನರನ್ನು ವಿಭಜನೆ ಮಾಡುತ್ತಿವೆ. ಅವು ಮತ ಗಳಿಕೆಗಾಗಿ ಕೆಲವು ಸಮುದಾಯಗಳನ್ನು ಓಲೈಸುತ್ತಿವೆ. ಆದರೆ ಬಿಜೆಪಿ 'ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌' ಮಂತ್ರದಲ್ಲಿ ನಂಬಿಕೆ ಇರಿಸಿದೆ ಎಂದರು. ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಮೋದಿ ಬದ್ಧತೆಯ ಗುಣಗಾನ ಮಾಡಿದ ಶಾ, ''56 ಇಂಚಿನ ಎದೆಯ ಸರದಾರ ಮೋದಿ. ಭಯೋತ್ಪಾದಕರಿಗೆ ಪಾಠ ಕಲಿಸಿ, ರಾಷ್ಟ್ರದ ರಕ್ಷಣೆ ಮಾಡುವ ತಾಕತ್ತು ಅವರಿಗೆ ಮಾತ್ರ ಇದೆ. ಈ ದೃಷ್ಟಿಯಿಂದ ಅವರು ಅಧಿಕಾರಕ್ಕೆ ಮರಳುವ ಅಗತ್ಯವಿದೆ,'' ಎಂದು ಪ್ರತಿಪಾದಿಸಿದರು. ಬಿಜೆಪಿ ಈ ಬಾರಿ ಅಧಿಕಾರಕ್ಕೆ ಮರಳಿದರೆ ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕತೆಯ ಸ್ಥಾನಮಾನ ಕಲ್ಪಿಸಿರುವ 370ನೇ ವಿಧಿಯನ್ನು ತೆಗೆದು ಹಾಕುವುದು ಖಚಿತ ಎಂದು ಶಾ ಪುನರುಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ