ಆ್ಯಪ್ನಗರ

ಪ್ರತಿಪಕ್ಷಗಳಲ್ಲಿ ಹೊಂದಾಣಿಕೆ ವಿಫಲ: ಸಿಪಿಐ ಬೇಸರ

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಮುಂದಾಳತ್ವದ ಗುಣವೇ ಇಲ್ಲ. ಮೈತ್ರಿ ವಿಷಯದ ಹೊಣೆಗಾರಿಕೆಯನ್ನು ಅವರು ತಮ್ಮ ಪಕ್ಷದ ರಾಜ್ಯ ನಾಯಕರ ಮರ್ಜಿಗೆ ವಹಿಸಿದ್ದರಿಂದ ಬಿಜೆಪಿ ವಿರೋಧಿ ಹೊಂದಾಣಿಕೆ ಪ್ರಯತ್ನ ಹಳ್ಳಹಿಡಿಯಿತು ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಎಸ್‌.ಸುಧಾಕರ್‌ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka 25 Mar 2019, 5:00 am
ಹೊಸದಿಲ್ಲಿ: ''ಪ್ರತಿಪಕ್ಷ ನಾಯಕರೆಲ್ಲರೂ ಬಿಜೆಪಿಯನ್ನು ವಿರೋಧಿಸುತ್ತಾರೆ ನಿಜ, ಆದರೆ ಹೊಂದಾಣಿಕೆ ಮಾಡಿಕೊಳ್ಳುವ ಮಾತು ಬಂದಾಗ ಅವರೆಲ್ಲರೂ ಹಿಂದೆ ಸರಿಯುತ್ತಾರೆ. ಇದರಿಂದ ಪ್ರತಿಪಕ್ಷಗಳ ಕೂಟವೇ ಅತಂತ್ರಕ್ಕೆ ಸಿಲುಕಿತು,'' ಎಂದು ಸಿಪಿಐ ಬೇಸರ ವ್ಯಕ್ತಪಡಿಸಿದೆ.
Vijaya Karnataka Web opposition leaders anti bjp but unwilling to adjust sacrifice seats to defeat it sudhakar reddy
ಪ್ರತಿಪಕ್ಷಗಳಲ್ಲಿ ಹೊಂದಾಣಿಕೆ ವಿಫಲ: ಸಿಪಿಐ ಬೇಸರ


ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಮುಂದಾಳತ್ವದ ಗುಣವೇ ಇಲ್ಲ. ಮೈತ್ರಿ ವಿಷಯದ ಹೊಣೆಗಾರಿಕೆಯನ್ನು ಅವರು ತಮ್ಮ ಪಕ್ಷದ ರಾಜ್ಯ ನಾಯಕರ ಮರ್ಜಿಗೆ ವಹಿಸಿದ್ದರಿಂದ ಬಿಜೆಪಿ ವಿರೋಧಿ ಹೊಂದಾಣಿಕೆ ಪ್ರಯತ್ನ ಹಳ್ಳಹಿಡಿಯಿತು ಎಂದು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಿಪಿಐ ಪ್ರಧಾನ ಕಾರ್ಯದರ್ಶಿ ಎಸ್‌.ಸುಧಾಕರ್‌ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಯಕತ್ವದ ವೈಫಲ್ಯದಿಂದಲೇ ಬಿಜೆಪಿ ವಿರೋಧಿ ಕೂಟದ ಕನಸು ಭಗ್ನಗೊಂಡಿರುವುದು ಸ್ಪಷ್ಟ. ಹೊಂದಾಣಿಕೆ ಪ್ರಯತ್ನ ರಾಷ್ಟ್ರಮಟ್ಟದ ನಾಯಕರಿಂದ ನಡೆಯಬೇಕಿತ್ತು. ಆದರೆ, ಅದನ್ನು ಯಾರೊಬ್ಬರೂ ಸರಿಯಾದ ಕ್ರಮದಲ್ಲಿ ನಿಭಾಯಿಸಲಿಲ್ಲ. ಸ್ಥಳೀಯ ನಾಯಕರು ತಮ್ಮ ಸಂಕುಚಿತ ಅಜೆಂಡಾಗಳನ್ನು ನೆಚ್ಚಿದ್ದರಿಂದ ಉದ್ದೇಶ ವಿಫಲಗೊಂಡಿತು ಎಂದು ಅವರು ವಿಶ್ಲೇಷಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌