ಆ್ಯಪ್ನಗರ

ಮೋದಿಗೆ ಪ್ರಾದೇಶಿಕ ಪಕ್ಷಗಳ ಬೆಂಬಲವಿಲ್ಲ: ರಾಹುಲ್‌

ದಿಲ್ಲಿಯಲ್ಲಿರುವ ಎಐಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಚುನಾವಣೆಯಲ್ಲಿ ಜನರ ತೀರ್ಪಿನ ಬಗ್ಗೆಯೂ ಈಗಲೇ ಯಾವುದೇ ಭವಿಷ್ಯ ನುಡಿಯಲಾರೆ. ಆದರೆ ದೇಶದ ಅಭಿವೃದ್ಧಿ ಮಾಡಲು ಜನರು ನೀಡಿದ ಅವಕಾಶವನ್ನು ಪ್ರಧಾನಿ ಮೋದಿ ಕಳೆದುಕೊಂಡಿದ್ದಾರೆ,'' ಎಂದರು.

Vijaya Karnataka 18 May 2019, 5:00 am
ಹೊಸದಿಲ್ಲಿ: ''ನರೇಂದ್ರ ಮೋದಿ ಅವರು ತಪ್ಪಿಸಿಕೊಳ್ಳುತ್ತಿದ್ದ ಒಂದೊಂದೇ ಬಾಗಿಲನ್ನು ವ್ಯವಸ್ಥಿತವಾಗಿ ಮುಚ್ಚುವುದು ಕಾಂಗ್ರೆಸ್‌ನ ಕಾರ್ಯತಂತ್ರವಾಗಿದ್ದು ಈಗಾಗಲೇ ಶೇ. 90ರಷ್ಟು ಬಾಗಿಲುಗಳನ್ನು ನಾವು ಬಂದ್‌ ಮಾಡಿದ್ದೇವೆ. ಪ್ರತಿಪಕ್ಷಳನ್ನು ನಿಂದಿಸುವ ಮೂಲಕ ಮೋದಿ ಉಳಿದ 10% ಬಾಗಿಲುಗಳನ್ನು ಅವರೇ ಮುಚ್ಚಿಕೊಂಡಿದ್ದಾರೆ,'' ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.
Vijaya Karnataka Web parties including sp bsp tdp wont support bjp rahul
ಮೋದಿಗೆ ಪ್ರಾದೇಶಿಕ ಪಕ್ಷಗಳ ಬೆಂಬಲವಿಲ್ಲ: ರಾಹುಲ್‌


ದಿಲ್ಲಿಯಲ್ಲಿರುವ ಎಐಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಚುನಾವಣೆಯಲ್ಲಿ ಜನರ ತೀರ್ಪಿನ ಬಗ್ಗೆಯೂ ಈಗಲೇ ಯಾವುದೇ ಭವಿಷ್ಯ ನುಡಿಯಲಾರೆ. ಆದರೆ ದೇಶದ ಅಭಿವೃದ್ಧಿ ಮಾಡಲು ಜನರು ನೀಡಿದ ಅವಕಾಶವನ್ನು ಪ್ರಧಾನಿ ಮೋದಿ ಕಳೆದುಕೊಂಡಿದ್ದಾರೆ,'' ಎಂದರು.

ಬಿಜೆಪಿಗೆ ಬಹುಜನ ಸಮಾಜ ಪಕ್ಷ, ಸಮಾಜವಾದಿ ಪಕ್ಷ, ತೆಲುಗುದೇಶಂ ಸೇರಿದಂತೆ ಯಾವುದೇ ಪ್ರಾದೇಶಿಕ ಪಕ್ಷಗಳ ಬೆಂಬಲ ದೊರೆಯುವುದಿಲ್ಲ. ಸರಕರ ರಚನೆಗೆ ಪ್ರತಿಪಕ್ಷಗಳೆಲ್ಲಾ ಒಂದುಗೂಡಲಿವೆ ಎಂದು ಅವರು ಹೇಳಿದರು. ಆದರೆ, ಮೇ 23ರಂದು ನಡೆಯಲಿರುವ ಪ್ರತಿಪಕ್ಷಗಳ ಬೃಹತ್‌ ಸಭೆ ಹಾಗೂ ಚುನಾವಣೋತ್ತರ ಕಾರ್ಯತಂತ್ರದ ಬಗ್ಗೆ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.

ಪ್ರತಿಪಕ್ಷಗಳನ್ನು ಒಗ್ಗೂಡಿಸುವಲ್ಲಿ ಸೋನಿಯಾ ಗಾಂಧಿ ಅವರು ವಹಿಸಲಿರುವ ಪಾತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,''ಕಾಂಗ್ರೆಸ್‌ ಪಕ್ಷ ಮೋದಿಯಂತಲ್ಲ. ನಾವು ಹಿರಿಯ ಅನುಭವವನ್ನು ಪರಿಗಣಿಸುತ್ತೇವೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಂತಹ ನಾಯಕರ ನೇತೃತ್ವದಲ್ಲಿ ಮುಂದುವರಿಯುತ್ತೇವೆ,'' ಎಂದರು.

ಮೋದಿ ಸುದ್ದಿಗೋಷ್ಠಿ ಬಗ್ಗೆ ವ್ಯಂಗ್ಯ
ಐದು ವರ್ಷಗಳಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಬಗ್ಗೆ ಹಾಗೂ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿದೇ ಜಾರಿಕೊಂಡ ಬಗ್ಗೆ ರಾಹುಲ್‌ ಗಾಂಧಿ ಲೇವಡಿ ಮಾಡಿದ್ದಾರೆ. ''ಲೋಕಸಭೆ ಚುನಾವಣೆ ಮುಗಿದು, ಇನ್ನೇನು ಫಲಿತಾಂಶಕ್ಕೆ 4-5 ದಿನಗಳು ಇರುವಾಗ ಪ್ರಧಾನಿಯೊಬ್ಬರು ಮೊದಲು ಸುದ್ದಿಗೋಷ್ಠಿ ನಡೆಸುವುದು ದೇಶದಲ್ಲಿ ಇದೇ ಮೊದಲು. ಅದರಲ್ಲೂ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿದೆ ಮೋದಿ ಜಾರಿಕೊಂಡಿದ್ದಾರೆ. ಅಂತೂ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಯುದ್ಧಕ್ಕೆ ಕಾಲಿಟ್ಟಿದ್ದೀರಿ. ಮುಂದಿನ ಸಲವಾದರೂ ಒಂದೆರಡು ಪ್ರಶ್ನೆಗಳಿಗೆ ಉತ್ತರಿಸಲು ಶಾ ನಿಮಗೆ ಅವಕಾಶ ಮಾಡಿಕೊಡಬಹುದು,'' ಎಂದು ರಾಹುಲ್‌ ಕಾಲೆಳೆದಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌