ಆ್ಯಪ್ನಗರ

ಭಾರತದ ಶಕ್ತಿ ಒಪ್ಪಲು ಬಯಸದ 'ಮಹಾಮಿಲಾವಟಿಗಳು': ಪ್ರಧಾನಿ ಮೋದಿ

ನಾಲ್ಕು ಬಗೆಯ ಸರಕಾರಗಳನ್ನು ಈ ದೇಶ ಕಂಡಿದೆ. 'ನಾಮ್‌ಪಂಥಿ (ವಂಶವಾದಿ ಆಡಳಿತ), ವಾಮ್‌ಪಂಥಿ (ಎಡ), ದಮನ್‌ಪಂಥಿ (ಹಣ ಮತ್ತು ತೋಳ್ಬಲ ಬಳಸುವ ಆಡಳಿತಗಾರರು) ಮತ್ತು ಅಭಿವೃದ್ಧಿಯ ಬಗ್ಗೆ ಮಾತ್ರ ಮಾತನಾಡುವ ಈಗಿನ ವಿಕಾಸ್‌ಪಂಥಿ ಸರಕಾರ ಎಂದು ಪ್ರಧಾನಿ ಮೋದಿ ಬಣ್ಣಿಸಿದರು. ಚುನಾವಣೆ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ತನ್ನ ನಾಯಕರ ಮತ್ತು ಕುಟುಂಬದ ನಿಕಟವರ್ತಿಗಳ ಹಿತ ಕಾಪಾಡಲು ಮಾತ್ರ ಆಸಕ್ತಿ ಹೊಂದಿದೆ ಎಂದು ಆರೋಪಿಸಿದರು.

Vijaya Karnataka Web 5 May 2019, 2:07 pm
ಬದೋಹಿ: ಪ್ರತಿಪಕ್ಷಗಳ ಮೈತ್ರಿಕೂಟದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಅಂತಾರಾಷ್ಟ್ರೀಯ ಸಮುದಾಯದಲ್ಲಿ ಭಾರತದ ಪ್ರಾಬಲ್ಯವನ್ನು ಒಪ್ಪಲು ಈ 'ಮಹಾಮಿಲಾವಟಿ' ಪಕ್ಷಗಳು ಬಯಸುತ್ತಿಲ್ಲ ಎಂದು ಟೀಕಿಸಿದರು.
Vijaya Karnataka Web PM Modi


ನಾಲ್ಕು ಬಗೆಯ ಸರಕಾರಗಳನ್ನು ಈ ದೇಶ ಕಂಡಿದೆ. 'ನಾಮ್‌ಪಂಥಿ (ವಂಶವಾದಿ ಆಡಳಿತ), ವಾಮ್‌ಪಂಥಿ (ಎಡ), ದಮನ್‌ಪಂಥಿ (ಹಣ ಮತ್ತು ತೋಳ್ಬಲ ಬಳಸುವ ಆಡಳಿತಗಾರರು) ಮತ್ತು ಅಭಿವೃದ್ಧಿಯ ಬಗ್ಗೆ ಮಾತ್ರ ಮಾತನಾಡುವ ಈಗಿನ ವಿಕಾಸ್‌ಪಂಥಿ ಸರಕಾರ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

ಚುನಾವಣೆ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ತನ್ನ ನಾಯಕರ ಮತ್ತು ಕುಟುಂಬದ ನಿಕಟವರ್ತಿಗಳ ಹಿತ ಕಾಪಾಡಲು ಮಾತ್ರ ಆಸಕ್ತಿ ಹೊಂದಿದೆ ಎಂದು ಆರೋಪಿಸಿದರು.

'ಅಂತಾರಾಷ್ಟ್ರೀಯ ಸಮುದಾಯದಲ್ಲಿ ಭಾರತದ ಸ್ಥಾನಮಾನ, ಘನತೆ, ಪ್ರಾಬಲ್ಯ ಹೆಚ್ಚಿರುವುದನ್ನು ಗುರುತಿಸಲು ಈ ಮಹಾಮಿಲಾವಟಿ ಪಕ್ಷಗಳು ಏಕೆ ಬಯಸುತ್ತಿಲ್ಲ?' ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.

ಪ್ರತಿಪಕ್ಷಗಳು ಲೋಕಸಭಾ ಚುನಾವಣೆ ಜತೆಗೆ ಸರ್ಜಿಕಲ್ ದಾಳಿಯನ್ನು ತಳುಕು ಹಾಕುತ್ತಿವೆ ಎಂದು ಆರೋಪಿಸಿದ ಅವರು, ಪ್ರತಿಯೊಂದನ್ನೂ ಚುನಾವಣೆ ದೃಷ್ಟಿಯಿಂದಲೇ ನೋಡಲಾಗದು ಎಂದರು.

ಹಿಂದೆ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿತ್ತು ಎಂದು ಟೀಕಿಸಿದ ಪ್ರಧಾನಿ, ತಾವು ಮುಖ್ಯಮಂತ್ರಿಯಾಗಿದ್ದ ದೀರ್ಘಾವಧಿ ಹಾಗೂ ಪ್ರಧಾನಿಯಾಗಿ ಐದು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ ಎಂದು ನುಡಿದರು.

ದೇಶವನ್ನು ಹಿಂದೆ ನಾಮ್‌ಪಂಥಿ, ವಾಮ್‌ಪಂಥಿ, ದಮನ್‌ಪಂಥಿಗಳು ಆಳಿದ್ದರು. ಆದರೆ ಈಗ 130 ಕೋಟಿ ಜನರ ಹಿತ ಕಾಪಾಡುವ ವಿಕಾಸ್‌ಪಂಥಿ ಆಡಳಿತವಿದೆ ಎಂದು ಮೋದಿ ನುಡಿದರು.

ಮುಸ್ಲಿಂ ಜನಸಂಖ್ಯೆಯೇ ಅಧಿಕವಾಗಿರುವ ಬದೋಹಿಯಲ್ಲಿ 6ನೇ ಹಂತದಲ್ಲಿ ಮೇ 12ರಂದು ಚುನಾವಣೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌