ಆ್ಯಪ್ನಗರ

ಪ್ರಧಾನಿ ಹೃದಯವಂತಿಕೆ ಪ್ರಶ್ನಿಸಿದ ಪ್ರಿಯಾಂಕಾ

ರೈತರು ಸಾಲ ಬಾಧೆಯಿಂದ ನರಳುತ್ತಿರುವಾಗ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ದೊಡ್ಡ ಉದ್ಯಮಿಗಳ 5.5 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿ ಬೆಚ್ಚಿ ಬೀಳಿಸಿದೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಗಂಭೀರ ಆರೋಪ ಮಾಡಿದರು.

Vijaya Karnataka 11 May 2019, 5:00 am
ಲಖನೌ: ದೇಶದ ರೈತಾಪಿ ಸಮುದಾಯ ಸಂಕಷ್ಟದಲ್ಲಿ ನರಳುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ನೇಹ ಬಳಗಕ್ಕೆ ಐದು ವರ್ಷಗಳ ಆಡಳಿತಾವಧಿಯಲ್ಲಿ 10,000 ಕೋಟಿ ರೂ. ಲಾಭ ಮಾಡಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಗಂಭೀರ ಆರೋಪ ಮಾಡಿದರು.
Vijaya Karnataka Web priyanka


ಉತ್ತರ ಪ್ರದೇಶದ ವಿವಿಧೆಡೆ ಪ್ರಚಾರ ರಾರ‍ಯಲಿಗಳಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ''ಪ್ರಧಾನಿ ಮೋದಿಯವರು ತಮ್ಮ 56 ಇಂಚಿನ ಎದೆಯ ಬಗ್ಗೆ ಜಂಬ ಕೊಚ್ಚಿಕೊಂಡರೆ ಸಾಲದು, ಹೃದಯವಂತಿಕೆ ಬಗ್ಗೆಯೂ ಹೇಳಬೇಕು,'' ಎಂದು ಛೇಡಿಸಿದರು.

ರೈತರು ಸಾಲ ಬಾಧೆಯಿಂದ ನರಳುತ್ತಿರುವಾಗ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ದೊಡ್ಡ ಉದ್ಯಮಿಗಳ 5.5 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿ ಬೆಚ್ಚಿ ಬೀಳಿಸಿದೆ. ಪ್ರಧಾನಿಯರ ಸ್ನೇಹಿತರು ಐದು ವರ್ಷಗಳಲ್ಲಿ 10,000 ಕೋಟಿ ರೂ. ಲಾಭ ಗಳಿಕೆ ತೋರಿಸಿದ್ದಾರೆ. ಇದು ಶ್ರೀಮಂತ್ರ ಸರಕಾರ. ಪ್ರಧಾನಿ ತಮ್ಮ ಸ್ನೇಹ ಬಳಗದ ಕೆಲವು ಉದ್ಯಮಿಗಳ ಬಗ್ಗೆ ತೋರುವ ಔದಾರ್ಯವನ್ನು ಜನ ಸಾಮಾನ್ಯರ ಬಗ್ಗೆ ತೋರುವುದಿಲ್ಲ ಎಂದು ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌