ಆ್ಯಪ್ನಗರ

ಬಹಿರಂಗ ಪತ್ರದ ಮೂಲಕ ಬೆಂಬಲ ಕೋರಿದ ಪ್ರಿಯಾಂಕಾ

ಸೋಮವಾರದಿಂದ ಮೂರು ದಿನ ಪ್ರಯಾಗ್‌ರಾಜ್‌ನಿಂದ ವಾರಾಣಸಿವರೆಗೆ ಗಂಗಾ ನದಿಯಲ್ಲಿ 140 ಕಿ.ಮೀ ಪ್ರಯಾಣ ಕೈಗೊಂಡು, ನದಿ ತಟದಲ್ಲಿರುವ ಗ್ರಾಮಗಳ ಜನರನ್ನು ಪ್ರಿಯಾಂಕಾ ಭೇಟಿ ಮಾಡಲಿದ್ದಾರೆ.

Vijaya Karnataka 18 Mar 2019, 5:00 am
ಲಖನೌ: ಉತ್ತರ ಪ್ರದೇಶ ರಾಜಕಾರಣದ ಸುಧಾರಣೆಗಾಗಿ ತಮಗೆ ಸಾಥ್‌ ನೀಡುವಂತೆ ಕೋರಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಜನತೆಗೆ ಬಹಿರಂಗ ಪತ್ರ ಬರೆದಿದ್ದಾರೆ.
Vijaya Karnataka Web priyanka


''ರಾಜ್ಯದಲ್ಲಿ ಮಹಿಳೆಯರು, ರೈತರು ಮತ್ತು ಕಾರ್ಮಿಕರು ಸಮಸ್ಯೆಗಳ ರಾಶಿಯಲ್ಲಿ ಸಿಲುಕಿದ್ದಾರೆ. ರಾಜಕಾರಣಿಗಳ ಜತೆ ತಮ್ಮ ನೋವು ಹಂಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ, ಅವರಿಗೆ ಕಿವಿಗೊಡುವ ವ್ಯವಧಾನ ಆಡಳಿತ ಪಕ್ಷದವರಿಗಿಲ್ಲ,'' ಎಂದು ಹಿಂದಿ ಭಾಷೆಯಲ್ಲಿ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

''ನಿಮ್ಮ ನೋವುಗಳನ್ನು ಅನ್ಯರು ಕೇಳುತ್ತಾರೋ ಬಿಡುತ್ತಾರೋ ಬೇರೆ ಮಾತು, ಆದರೆ ನಾನು ನಿಮ್ಮೊಂದಿಗೆ ಇರುತ್ತೇನೆ. ನಿಮ್ಮ ಸಂಕಷ್ಟಗಳಿಗೆ ಕಿವಿಗೊಡುತ್ತೇನೆ. ಪರಿಹಾರದ ದಾರಿಗಳನ್ನು ಹುಡುಕುತ್ತೇನೆ,'' ಎಂದು ಭರವಸೆ ನೀಡಿದ್ದಾರೆ.

''ಜನರ ಜತೆ ಬೆರೆತು, ನೋವು-ನಲಿವಿಗೆ ಕಿವಿಗೊಡದ ಹೊರತು ಯಾವುದೇ ಸುಧಾರಣೆ ಸಾಧ್ಯವಾಗದು. ಈ ಸತ್ಯದ ಅರಿವು ಇಟ್ಟುಕೊಂಡೇ ನಿಮ್ಮೊಂದಿಗೆ ಬೆರೆಯುತ್ತೇನೆ. ಎಲ್ಲರು ಸೇರಿಯೇ ಸುಧಾರಣೆಯ ಮಾರ್ಗ ಹುಡುಕೋಣ,'' ಎಂದು ಅವರು ಮನವಿ ಮಾಡಿದ್ದಾರೆ.

ಚುನಾವಣೆ ಸಿದ್ಧತೆ ಕುರಿತು ಪಕ್ಷದ ಮುಖಂಡರ ಜತೆ ಚರ್ಚೆ ನಡೆಸಿದ ಬಳಿಕ ಪ್ರಿಯಾಂಕಾ, ಈ ಬಹಿರಂಗ ಪತ್ರ ಬಿಡುಗಡೆ ಮಾಡಿದ್ದಾರೆ. ಭಾನುವಾರ ಅವರು ಲಖನೌನಲ್ಲಿ ಕಾರ್ಯಕರ್ತರ ಜತೆ ಸಂವಾದ ನಡೆಸಿದ್ದಾರೆ. ಸೋಮವಾರದಿಂದ ಮೂರು ದಿನ ಪ್ರಯಾಗ್‌ರಾಜ್‌ನಿಂದ ವಾರಾಣಸಿವರೆಗೆ ಗಂಗಾ ನದಿಯಲ್ಲಿ 140 ಕಿ.ಮೀ ಪ್ರಯಾಣ ಕೈಗೊಂಡು, ನದಿ ತಟದಲ್ಲಿರುವ ಗ್ರಾಮಗಳ ಜನರನ್ನು ಭೇಟಿ ಮಾಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌