ಆ್ಯಪ್ನಗರ

2022ರ ವಿಧಾನಸಭೆ ಚುನಾವಣೆಗೆ ಸಜ್ಜಾಗಲು ಪ್ರಿಯಾಂಕಾ ಕರೆ

ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಎರಡನೇ ಸುತ್ತಿನ ಪ್ರಚಾರ ಕೈಗೊಂಡಿರುವ ಪ್ರಿಯಾಂಕಾ ಅವರು ಗುರುವಾರ ತಮ್ಮ ತಾಯಿ ಸೋನಿಯಾ ಗಾಂಧಿ ಸ್ಪರ್ಧಿಸುತ್ತಿರುವ ರಾಯ್‌ಬರೇಲಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.

Vijaya Karnataka 29 Mar 2019, 5:00 am
ಲಖನೌ: ಉತ್ತರ ಪ್ರದೇಶದ 2022ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಬೇಕು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
Vijaya Karnataka Web priyanka


ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಎರಡನೇ ಸುತ್ತಿನ ಪ್ರಚಾರ ಕೈಗೊಂಡಿರುವ ಪ್ರಿಯಾಂಕಾ ಅವರು ಗುರುವಾರ ತಮ್ಮ ತಾಯಿ ಸೋನಿಯಾ ಗಾಂಧಿ ಸ್ಪರ್ಧಿಸುತ್ತಿರುವ ರಾಯ್‌ಬರೇಲಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು. ಬುಧವಾರವಷ್ಟೇ ಸಹೋದರ ರಾಹುಲ್‌ ಗಾಂಧಿ ಅವರ ಅಮೇಠಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದ ಪ್ರಿಯಾಂಕಾ ರಾಯ್‌ಬರೇಲಿಯಲ್ಲಿ ಪ್ರಚಾರ ಸಭೆ, ಸಂವಾದ ಕಾರ‍್ಯಕ್ರಮಗಳನ್ನು ನಡೆಸಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಕಾರ‍್ಯಕರ್ತರಿಗೆ ಕರೆ ನೀಡಿದರು. ಲೋಕಸಭೆ ಚುನಾವಣೆಯಷ್ಟೇ ಅಲ್ಲ, 2022ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಈಗಿನಿಂದಲೇ ತಯಾರಿ ನಡೆಸಿ ಎಂದು ಕಾರ‍್ಯಕರ್ತರನ್ನು ಹುರಿದುಂಬಿಸಿದರು.

ಪ್ರತಿಭಟನೆಯ ಬಿಸಿ:
ರಾಯ್‌ಬರೇಲಿಯಲ್ಲಿ ಕಾಂಗ್ರೆಸ್‌ ಕಚೇರಿ 'ತಿಲಕ್‌ ಭವನ'ದ ಮುಂದೆ ಪ್ರಿಯಾಂಕಾ ಭೇಟಿ ವಿರೋಧಿಸಿ 'ಪೋಸ್ಟರ್‌'ಗಳ ಮೂಲಕ ಪ್ರತಿಭಟನೆ ನಡೆಯಿತು. ''ಪ್ರಿಯಾಂಕಾ ಅವರಿಗೆ ಚುನಾವಣೆ ಸಮಯದಲ್ಲಷ್ಟೇ ದೇವಸ್ಥಾನ ನೆನಪಾಗುತ್ತದೆ', 'ನಾವು ಮತ ನೀಡಿದೆವು. ಗೆದ್ದ ನೀವು ರಾಯ್‌ಬರೇಲಿ ಜನತೆಯ ಉದ್ಧಾರಕ್ಕೆ ಶ್ರಮಿಸಬೇಕಿತ್ತು. ಆದರೆ ನೀವು (ಸೋನಿಯಾ) ಮತ್ತು ಪ್ರಿಯಾಂಕಾ ನಮಗೆ ಮೋಸ ಮಾಡಿದಿರಿ' ಎಂಬ ಒಕ್ಕಣೆಯ ಪೋಸ್ಟರ್‌ಗಳು ಪ್ರಿಯಾಂಕಾ ಅವರಿಗೆ ಮುಜುಗರ ತರಿಸಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌