ಆ್ಯಪ್ನಗರ

ಮೋದಿ ಪ್ರಚಾರದ ಹಣಕಾಸು ಮೂಲ ಪ್ರಶ್ನಿಸಿದ ರಾಹುಲ್‌

ಕೇವಲ 30 ಸೆಕೆಂಡ್‌ಗಳ ಟಿವಿ ಜಾಹೀರಾತಿಗೆ ಲಕ್ಷಾಂತರ ರೂ. ವ್ಯಯಿಸಬೇಕಾಗುತ್ತದೆ. ಹೀಗಿರುವಾಗ ಎಡೆಬಿಡದೆ ಪ್ರಚಾರ ನಡೆಸುತ್ತಿರುವ ಪ್ರಧಾನಿಗೆ ಬಂಡವಾಳ ಎಲ್ಲಿಂದ ಹರಿದು ಬರುತ್ತಿದೆ? ಯಾರು ಅವರನ್ನು ಬೆಂಬಲಿಸುತ್ತಿರುವವರು? ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಶ್ನೆ ಎತ್ತಿದ್ದಾರೆ.

Vijaya Karnataka 16 Apr 2019, 5:00 am
ಆಗ್ರಾ: ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ಧಾರಾಳವಾಗಿ ದುಡ್ಡು ಖರ್ಚು ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಣಕಾಸು ನೆರವು ನೀಡುತ್ತಿರುವವರು ಯಾರು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಶ್ನೆ ಎತ್ತಿದ್ದಾರೆ.
Vijaya Karnataka Web priyanka


ಪಕ್ಷದ ಅಭ್ಯರ್ಥಿ ರಾಜ್‌ ಬಬ್ಬರ್‌ ಪರ ಪ್ರಚಾರ ರಾರ‍ಯಲಿ ನಡೆಸಿದ ಅವರು, ಕೇವಲ 30 ಸೆಕೆಂಡ್‌ಗಳ ಟಿವಿ ಜಾಹೀರಾತಿಗೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗುತ್ತದೆ. ಹೀಗಿರುವಾಗ ಎಡೆಬಿಡದೆ ಪ್ರಚಾರ ನಡೆಸುತ್ತಿರುವ ಪ್ರಧಾನಿಗೆ ಬಂಡವಾಳ ಎಲ್ಲಿಂದ ಹರಿದು ಬರುತ್ತಿದೆ? ಯಾರು ಅವರನ್ನು ಬೆಂಬಲಿಸುತ್ತಿರುವವರು? ಎಂದು ಪ್ರಶ್ನಿಸಿದರು.

ಸಾರ್ವಜನಿಕರ ದುಡ್ಡು ಕೊಳ್ಳೆ ಹೊಡೆದ ನರೇಂದ್ರ ಮೋದಿ, ಅದನ್ನು ನೀರವ್‌ ಮೋದಿ, ಮೆಹುಲ್‌ ಚೋಕ್ಸಿ, ಲಲಿತ್‌ ಮೋದಿ ಮತ್ತು ವಿಜಯ್‌ ಮಲ್ಯರಂಥ ಚೋರ ವ್ಯಾಪಾರಿಗಳಿಗೆ ನೀಡಿದರು ಎಂದು ದೂರಿದರು. ''ಯುವಜನರಿಗೆ ನೀಡಿದ್ದ ಉದ್ಯೋಗ ಭರವಸೆ ಈಡೇರಿಸದ ಮೋದಿ, ರೈತರ ಸಂಕಷ್ಟಕ್ಕೂ ಸ್ಪಂದಿಸದೇ ವಂಚನೆ ಎಸಗಿದರು. ನಾವು ಅಧಿಕಾರಕ್ಕೆ ಬಂದರೆ ಅಂತಹ ಹುಸಿ ಭರವಸೆಗಳನ್ನು ನೀಡುವುದಿಲ್ಲ. ಬಡವರ ಏಳ್ಗೆಗೆ ನೀಡಿರುವ 72 ಸಾವಿರ ರೂ. ಆದಾಯ ಖಾತರಿ ಆಶ್ವಾಸನೆಯನ್ನು ಖಂಡಿತ ಪೂರೈಸುತ್ತೇವೆ,'' ಎಂದು ಸಾರಿದರು.

ಸತ್ಯದ ದಾರಿ ತೊರೆದ ಬಿಜೆಪಿ: ಪ್ರಿಯಾಂಕಾ
ಸತ್ಯದ ದಾರಿಯಿಂದ ವಿಮುಖಗೊಂಡಿರುವ ಬಿಜೆಪಿ, ಪ್ರಜಾಪ್ರಭುತ್ವ , ಜನ ಹಾಗೂ ಜನಪರ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದೆ ಎಂದು ಆಗ್ರಾ ರಾರ‍ಯಲಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದರು. ''ರಾಷ್ಟ್ರೀಯತೆಯ ಮಂತ್ರ ಪಠಿಸುವ ಬಿಜೆಪಿ, ತನ್ನ ಅಧಿಕಾರಾವಧಿಯಲ್ಲಿ ಈ ದೇಶದ ಯುವ ಜನರಿಗೆ ಏನು ಮಾಡಿತು ಎನ್ನುವುದನ್ನು ಹೇಳುತ್ತಿಲ್ಲ. ರೈತರಿಗೆ ಮತ್ತು ಇತರೆ ದುರ್ಬಲ ವರ್ಗಗಳ ಅಭಿವೃದ್ಧಿಗೆ ಮಾಡಿದ್ದೇನು ಎಂದು ಬಾಯಿಬಿಡುತ್ತಿಲ್ಲ. ಮಹಿಳೆಯರ ಬಗೆಗಿನ ಅಜೆಂಡಾ ಏನೆಂದು ಅವರು ಹೇಳಬೇಕು,'' ಎಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌