ಆ್ಯಪ್ನಗರ

ಮತದಾನದ ಸೆಲ್ಫಿ ಜತೆ ಪರಾಗ್ವೆ ಧ್ವಜ ಬಳಸಿ ಟ್ವಿಟರ್‌ನಲ್ಲಿ ಟ್ರೋಲ್ ಆದ ವಾದ್ರಾ

'ನಮ್ಮ ಹಕ್ಕು ನಮ್ಮ ಬಲ!! ಪ್ರತಿಯೊಬ್ಬರೂ ಹೊರಬಂದು ಮತದಾನ ಮಾಡಿ. ನಮ್ಮ ಪ್ರೀತಿಪಾತ್ರರ ಭವಿಷ್ಯವನ್ನು ಭದ್ರಗೊಳಿಸಲು, ದೇಶದ ಜಾತ್ಯತೀತ, ಸುಭದ್ರ ಭವಿಷ್ಯ ರೂಪಿಸಲು ನಮಗೆ ಎಲ್ಲರ ಬೆಂಬಲ ಅಗತ್ಯ' ಎಂದು ವಾದ್ರಾ ಬರೆದುಕೊಂಡಿದ್ದಾರೆ. ಫೋಟೋ ಜತೆಗೆ ಹಾಕಿರುವ ಕ್ಯಾಪ್ಷನ್‌ ಕೊನೆಗೆ ಭಾರತದ ರಾಷ್ಟ್ರಧ್ವಜದ ಬದಲು ಪರಾಗ್ವೆ ದೇಶ ಧ್ವಜದ ಇಮೋಜಿಯನ್ನು ಹಾಕಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಹಾಸ್ಯಕ್ಕೆ ಗುರಿಯಾಯಿತು.

Vijaya Karnataka Web 13 May 2019, 10:01 am
ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾವ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯ ಪತಿ ರಾಬರ್ಟ್‌ ವಾದ್ರಾ ಭಾನುವಾರ ಮತದಾನ ಮಾಡಿದ ಬಳಿಕ ಪರಾಗ್ವೆ ಧ್ವಜದ ಇಮೋಜಿ ಜತೆಗೆ ಸೆಲ್ಫಿ ಪ್ರಕಟಿಸುವ ಮೂಲಕ ವ್ಯಾಪಕ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.
Vijaya Karnataka Web Vadra Trolled


ಮತದಾನದ ಬಳಿಕ ವಾದ್ರಾ ಫೋಟೋವನ್ನು ತಮ್ಮ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಪರಾಗ್ವೆ ದೇಶದ ಧ್ವಜದ ಇಮೋಜಿ ಸಹಿತ ಪ್ರಕಟಿಸಿದ್ದರು.

'ನಮ್ಮ ಹಕ್ಕು ನಮ್ಮ ಬಲ!! ಪ್ರತಿಯೊಬ್ಬರೂ ಹೊರಬಂದು ಮತದಾನ ಮಾಡಿ. ನಮ್ಮ ಪ್ರೀತಿಪಾತ್ರರ ಭವಿಷ್ಯವನ್ನು ಭದ್ರಗೊಳಿಸಲು, ದೇಶದ ಜಾತ್ಯತೀತ, ಸುಭದ್ರ ಭವಿಷ್ಯ ರೂಪಿಸಲು ನಮಗೆ ಎಲ್ಲರ ಬೆಂಬಲ ಅಗತ್ಯ' ಎಂದು ವಾದ್ರಾ ಬರೆದುಕೊಂಡಿದ್ದಾರೆ.

ಫೋಟೋ ಜತೆಗೆ ಹಾಕಿರುವ ಕ್ಯಾಪ್ಷನ್‌ ಕೊನೆಗೆ ಭಾರತದ ರಾಷ್ಟ್ರಧ್ವಜದ ಬದಲು ಪರಾಗ್ವೆ ದೇಶ ಧ್ವಜದ ಇಮೋಜಿಯನ್ನು ಹಾಕಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಹಾಸ್ಯಕ್ಕೆ ಗುರಿಯಾಯಿತು.

ಭಾರತದ ರಾಷ್ಟ್ರಧ್ವಜದ ಪರಿಚಯವೂ ಇಲ್ಲದ ಈತ ದೇಶದ ಭವಿಷ್ಯದ ಬಗ್ಗೆ ಚಿಂತಿಸುತ್ತಾನಂತೆ ಎಂದು ಒಬ್ಬರು ಅಪಹಾಸ್ಯ ಮಾಡಿದರೆ, ವಾದ್ರಾ ಪರಾಗ್ವೆ ಪೌರನೆಂದು ಘೋಷಿಸಿಕೊಂಡಿದ್ದಾರೆ ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ.

ಕೆಲವು ಸ್ಯಾಂಪಲ್‌ಗಳು ಇಲ್ಲಿವೆ ನೋಡಿ:


ನಂತರ ಪ್ರಮಾದದ ಅರಿವಾದ ವಾದ್ರಾ ಹಳೆಯ ಟ್ವೀಟ್‌ ಅಳಿಸಿಹಾಕಿ ಭಾರತದ ಧ್ವಜದ ಜತೆಗೆ ಮತ್ತೊಂದು ಟ್ವೀಟ್ ಪೋಸ್ಟ್‌ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ