ಆ್ಯಪ್ನಗರ

ಪ್ರಿಯಾಂಕ ಗಾಂಧಿ ಪ್ರಬಲವಾಗಿ ಬೆಳೆಯುತ್ತಾರೆ: ಶಶಿ ತರೂರ್‌ ವಿಶ್ವಾಸ

PTI 24 Mar 2019, 11:45 am
ತಿರುವನಂತಪುರ: ಉತ್ತರ ಪ್ರದೇಶ ಪ್ರಿಯಾಂಕ ಗಾಂಧಿ ವಾದ್ರ ಅವರ ಕರ್ಮ ಭೂಮಿ. ಅವರ ರಾಜಕೀಯ ಎಂಟ್ರಿಯಿಂದ ಕಾಂಗ್ರೆಸ್‌ಗೆ ಲಾಭವಾಗಿದೆ. ಪ್ರಿಯಾಂಕ ಅವರು ಪ್ರಬಲ ನಾಯಕಿಯಾಗಿ ಬೆಳೆಯಲಿದ್ದಾರೆ ಎಂದು ತಿರುವನಂತಪುರದಲ್ಲಿ ಪಕ್ಷದ ಮುಖಂಡ ಶಶಿ ತರೂರ್‌ ಹೇಳಿದ್ದಾರೆ.
Vijaya Karnataka Web Priyanka Gandhi


47 ವರ್ಷದ ಪ್ರಿಯಾಂಕ ಗಾಂಧಿ ಅವರನ್ನು ಉತ್ತರ ಪ್ರದೇಶದ ಪೂರ್ವ ಭಾಗದ ಎಐಸಿಸಿ ಪ್ರದಾನ ಕಾರ್ಯದರ್ಶಿಯಾಗಿ ಈ ವರ್ಷ ಜನವರಿ 23ರಂದು ನೇಮಕ ಮಾಡಲಾಯಿತು. ಪ್ರಿಯಾಂಕ ಗಾಂಧಿ ರಾಜಕೀಯ ಪ್ರವೇಶದಿಂದ 80 ಲೋಕಸಭೆ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ ರಾಜ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರಿಯಾಂಕ ಗಾಂಧಿ ಪ್ರಭಾವಿ ನಾಯಕಿ. ತುಂಬ ಚೆನ್ನಾಗಿ ಮಾತನಾಡುತ್ತಾರೆ. ಬಹಳ ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ. ಸರಳವಾದ ಹಿಂದಿಯಲ್ಲಿ ಮಾತನಾಡುತ್ತಾರೆ. ಸಾರ್ವಜನಿಕ ಸ್ಥಾಳಗಳಲ್ಲಿ ಪ್ರಿಯಾಂಕ ವಿಚಲಿತರಾಗುವುದಿಲ್ಲ. ಹೆಚ್ಚಿನ ಮಂದಿ ಪ್ರಿಯಾಂಕ ಅವರಲ್ಲಿ ಅವರ ಅಜ್ಜಿಯನ್ನು ಕಾಣುತ್ತಾರೆ ಎಂದು ಪ್ರಿಯಾಂಕ ಗಾಂಧಿ ಅವರ ರಾಜಕೀಯ ಪ್ರವೇಶದ ಬಗ್ಗೆ ಶಶಿ ತರೂರ್‌ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ