ಆ್ಯಪ್ನಗರ

ಹೊಸ ಪಕ್ಷ ರಚನೆ ಘೋಷಣೆ: ತೇಜ್‌ಪ್ರತಾಪ್‌ಗೆ ಜೀವ ಬೆದರಿಕೆ

​​ಆರ್‌ಜೆಡಿ ವಿದ್ಯಾರ್ಥಿ ವಿಭಾಗದ ಮುಖ್ಯಸ್ಥನೆಂದು ಹೇಳಿಕೊಂಡಿರುವ ವ್ಯಕ್ತಿ ತಮ್ಮ ಸಹಾಯಕ ಸೃಜನ್‌ ಸ್ವರಾಜ್‌ ಅವರಿಗೆ ಕರೆ ಮಾಡಿ, ತಮ್ಮಿಬ್ಬರನ್ನೂ ಮುಗಿಸುವ ಬೆದರಿಕೆ ಹಾಕಿದ್ದಾರೆ.

Vijaya Karnataka Web 6 Apr 2019, 5:01 pm
ಪಟನಾ: ರಾಷ್ಟ್ರೀಯ ಜನತಾದಳದಿಂದ ಹೊರಬಂದು 'ಲಾಲು-ರಾಬ್ರಿ ಮೋರ್ಚಾ' ಸ್ಥಾಪಿಸಿದ ನಂತರ ತಮಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಲಾಲು ಪ್ರಸಾದ್‌ ಯಾದವ್‌ ಅವರ ಹಿರಿಯ ಪುತ್ರ ತೇಜ್‌ಪ್ರತಾಪ್‌ ಯಾದವ್‌ ತಿಳಿಸಿದ್ದಾರೆ.
Vijaya Karnataka Web Tez Pratap


ಆರ್‌ಜೆಡಿ ವಿದ್ಯಾರ್ಥಿ ವಿಭಾಗದ ಮುಖ್ಯಸ್ಥನೆಂದು ಹೇಳಿಕೊಂಡಿರುವ ವ್ಯಕ್ತಿ ತಮ್ಮ ಸಹಾಯಕ ಸೃಜನ್‌ ಸ್ವರಾಜ್‌ ಅವರಿಗೆ ಕರೆ ಮಾಡಿ, ತಮ್ಮಿಬ್ಬರನ್ನೂ ಮುಗಿಸುವ ಬೆದರಿಕೆ ಹಾಕಿದ್ದಾರೆ ಎಂದು ಪಟನಾದ ಸೆಕ್ರೆಟರಿಯೇಟ್‌ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಪ್ರಥಮ ವರ್ತಮಾನ ವರದಿ (ಎಫ್‌ಐಆರ್‌) ದಾಖಲಾಗಿದೆ. ಜೆಡಿಯು-ಆರ್‌ಜೆಡಿ ಸಮ್ಮಿಶ್ರ ಸರಕಾರದಲ್ಲಿ ಆರೋಗ್ಯ ಸಚಿವರಾಗಿ ಕೆಲಸ ಮಾಡಿದ್ದ ತೇಜ್‌ಪ್ರತಾಪ್‌ ಅವರು ಸರನ್‌ ಲೋಕಸಭಾ ಕ್ಷೇತ್ರದಲ್ಲಿ ಆರ್‌ಜೆಡಿ ಅಭ್ಯರ್ಥಿಯಾಗಿರುವ ತಮ್ಮ ಮಾವ ಚಂದ್ರಿಕಾ ರಾಯ್‌ ವಿರುದ್ಧ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ