ಆ್ಯಪ್ನಗರ

ಚುನಾವಣಾ ವೀಕ್ಷಕನಿಂದ ಗಾಳಿಯಲ್ಲಿ ಗುಂಡು!

ಅಧಿಕಾರಿಯನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದ್ದು, ಚುನಾವಣಾ ಅಯೋಗದ ದೂರಿನ ಮೇರೆಗೆ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

Vijaya Karnataka 1 Apr 2019, 5:00 am
ಚೆನ್ನೈ: ತಮಿಳುನಾಡಿನಲ್ಲಿ ಚುನಾವಣಾ ವೀಕ್ಷಕರಾಗಿ ನೇಮಕಗೊಂಡಿರುವ ಹರಿಯಾಣ ಮೂಲದ ಐಪಿಎಸ್‌ ಅಧಿಕಾರಿ ಕುಡಿದ ಅಮಲಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಆತಂಕ ಸೃಷ್ಟಿಸಿದ ಘಟನೆ ಭಾನುವಾರ ನಡೆದಿದೆ. ಘಟನೆ ಬೆನ್ನಲ್ಲೇ ಅಧಿಕಾರಿಯನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದ್ದು, ಚುನಾವಣಾ ಅಯೋಗದ ದೂರಿನ ಮೇರೆಗೆ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.
Vijaya Karnataka Web tn election observer from haryana fires in air relieved from duty
ಚುನಾವಣಾ ವೀಕ್ಷಕನಿಂದ ಗಾಳಿಯಲ್ಲಿ ಗುಂಡು!


ಚೆನ್ನೈನಿಂದ 267 ಕಿ.ಮೀ ದೂರದಲ್ಲಿರುವ ಅರಿಯಾಲೂರು ಜಿಲ್ಲೆಯಲ್ಲಿ ಚುನಾವಣಾ ವೀಕ್ಷಕರನ್ನಾಗಿ ಡಿಐಜಿ ಹೇಮಂತ್‌ ಕಲ್ಸಾನ್‌ ಅವರನ್ನು ನೇಮಿಸಲಾಗಿತ್ತು. ನಗರದ ಸರ್ಕಿಟ್‌ ಹೌಸ್‌ನಲ್ಲಿ ಅಧಿಕಾರಿ ಹಾಗೂ ಇತರ ಚುನಾವಣಾ ಸಿಬ್ಬಂದಿ ತಂಗಿದ್ದರು. ಭಾನುವಾರ ಬೆಳಗ್ಗೆ ಕೊಠಡಿಯಿಂದ ಹೊರಬಂದ ಹೇಮಂತ್‌ ಅವರು ಅಲ್ಲೇ ನಿಂತಿದ್ದ ಪೊಲೀಸ್‌ ಪೇದೆಯೊಬ್ಬರಿಂದ ಗನ್‌ ಕೇಳಿದ್ದಾರೆ. ಚುನಾವಣಾ ವೀಕ್ಷಕರ ಆದೇಶ ಪಾಲನೆ ಮೇರೆಗೆ ಪೇದೆಯು ತಮ್ಮ ಸೆಮಿ-ಆ್ಯಟೊಮ್ಯಾಟಿಕ್‌ ಗನ್‌ ಅನ್ನು ಅವರಿಗೆ ಹಸ್ತಾಂತರಿಸಿದ್ದಾರೆ. ಗನ್‌ ಕೈಗೆ ಸಿಕ್ಕ ಕೂಡಲೇ ಹೇಮತ್‌ ಗಾಳಿಯಲ್ಲಿ 9 ಸುತ್ತು ಗುಂಡು ಹಾರಿಸಿದ್ದಾರೆ. ನಂತರ ಗನ್‌ ಅನ್ನು ಪೇದೆಗೆ ಹಸ್ತಾಂತರಿಸಿ, ಏನೂ ನಡೆದಿಲ್ಲವೆಂಬಂತೆ ಮತ್ತೆ ಕೋಣೆಗೆ ಹೋಗಿ ಮಲಗಿದ್ದಾರೆ. ಕುಡಿದ ಮತ್ತಿನಲ್ಲಿ ಹೀಗೆ ಮಾಡಿರಬಹುದೆಂದು ಶಂಕಿಸಲಾಗಿದೆ. ಆದರೆ ಬಂದೂಕಿನ ಸದ್ದು ಕೇಳಿ ಸ್ಥಳೀಯರು ತೀವ್ರ ಆತಂಕಗೊಂಡಿದ್ದರು. ಘಟನೆ ಬೆನ್ನಲ್ಲೇ, ಜಿಲ್ಲಾಧಿಕಾರಿ ಶಿಫಾರಸಿನ ಮೇರೆಗೆ ಹೇಮಂತ್‌ ಅವರನ್ನು ಚುನಾವಣಾ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌