ಆ್ಯಪ್ನಗರ

ಪಕ್ಷಗಳ ಖಜಾನೆ ಯಾರ ಪಾಲೆಷ್ಟು?

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ದೊಡ್ಡ ಮೊತ್ತದ ಹಣದ ಪ್ರವಾಹವೇ ಹರಿದು ಬರುತ್ತದೆ. ಪಕ್ಷಗಳ ವಾರ್ಷಿಕ ಸಂಗ್ರಹವನ್ನು ಆಯಾ ವರ್ಷದ ಕೊನೆಯಲ್ಲಿ ಸಲ್ಲಿಸಲಾಗುತ್ತದೆ. ಹಾಗೆ 2017-18ರ ಸಾಲಿನಲ್ಲಿ ಆರು ದೊಡ್ಡ ರಾಜಕೀಯ ಪಕ್ಷಗಳ ಖಜಾನೆಯಲ್ಲಿ ಸಂಗ್ರಹವಾದ ಹಣದ ವಿವರ ಇಲ್ಲಿದೆ. ದೊಡ್ಡ ಹಣದ ಮೂಲಗಳನ್ನು ಸ್ಪಷ್ಟವಾಗಿ ದಾಖಲಿಸಬೇಕು ಎಂಬುದು ಚುನಾವಣಾ ಆಯೋಗದ ಸೂಚನೆ. 2017-18ರಲ್ಲಿ ಆರು ರಾಜಕೀಯ ಪಕ್ಷಗಳ ಒಟ್ಟಾರೆ ಆದಾಯ 1293.05 ಕೋಟಿ ರೂ.ಗಳಷ್ಟಿದೆ. ಇದರಲ್ಲಿ 700 ಕೋಟಿ ರೂ.ಗಳಷ್ಟು ಆದಾಯ ಅಜ್ಞಾತ ಮೂಲಗಳಿಂದ ಬಂದಿದೆ. ಇದರಲ್ಲಿ ಬಿಜೆಪಿಯೇ ಅತ್ಯಧಿಕ ಹಣವನ್ನು ಪಡೆದಿದೆ.

Vijaya Karnataka Web 31 Mar 2019, 10:01 am
ಎಲ್ಲ ಪಕ್ಷಗಳ ಸುಮಾರು 604 ಕೋಟಿ ರೂಪಾಯಿ ಅಥವಾ ಒಟ್ಟಾರೆ ಆದಾಯದ 47%ನಷ್ಟು ಭಾಗ ತಿಳಿದ ಮೂಲಗಳಿಂದಲೇ ಬಂದಿದೆ. 467 ಕೋಟಿ ರೂ.ಗಳಷ್ಟು ಜ್ಞಾತ ದಾನಿಗಳಿಂದ ಬಂದಿದೆ. ಇದು ಒಟ್ಟಾರೆ ಆದಾಯದ 36%ನಷ್ಟು. ಉಳಿದ 137 ಕೋಟಿ ರೂ.ಗಳಷ್ಟು ಹೆಸರರಿಯದ ದಾನಿಗಳಿಂದ ಬಂದಿದೆ. ಅದರಲ್ಲಿ ಆಸ್ತಿ ಮಾರಾಟ ಹಾಗೂ ಸದಸ್ಯತ್ವ ಶುಲ್ಕವೂ ಸೇರಿದೆ.
Vijaya Karnataka Web political parties


ಆದಾಯದ ಮೂಲ

ಸುಮಾರು 689 ಕೋಟಿ ರೂ.ಗಳು ಅಥವಾ ಒಟ್ಟಾರೆ ಆದಾಯದ 53% ಭಾಗ ತಿಳಿಯದ ಮೂಲಗಳಿಂದ ಬಂದಿದೆ. ಅದರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ, ಪಾರ್ಟಿ ಕೂಪನ್‌ಗಳ ಮೂಲಕ, ಸಣ್ಣ ದಾನಿಗಳಿಂದ, ಸಭೆಗಳಲ್ಲಿ ಸಂಗ್ರಹವಾದ ಹಣ ಇತ್ಯಾದಿಗಳಿವೆ.

2004-05 ರಿಂದೀಚೆಗೆ, ರಾಷ್ಟ್ರೀಯ ಪಕ್ಷಗಳು ಅಜ್ಞಾತ ಮೂಲಗಳಿಂದ ಸಂಗ್ರಹಿಸಿದ ಹಣದ ಮೊತ್ತ ಸುಮಾರು 9,000 ಕೋಟಿ ರೂ.

ಪಕ್ಷಗಳ ಅತ್ಯಧಿಕ ವೆಚ್ಚದ ವಿಭಾಗ

ಚುನಾವಣಾ ಪ್ರಚಾರಕ್ಕೆ 567.4

ಆಡಳಿತ 86.4

ಇತರ ರಾಷ್ಟ್ರೀಯ ಪಕ್ಷಗಳ ವೆಚ್ಚ ಅವುಗಳ ಆಡಳಿತ ಹಾಗೂ ಸಿಬ್ಬಂದಿ ವೆಚ್ಚಕ್ಕೆ ಹೋಗಿದೆ.

ಬಿಜೆಪಿ

ಒಟ್ಟಾರೆ ಆದಾಯ

1,027.4

ಬಿಜೆಪಿ ಇತರ ಎಲ್ಲ ರಾಜಕೀಯ ಪಕ್ಷಗಳನ್ನು ಸೇರಿಸಿದರೆ ಆಗುವ ಮೂರು ಪಟ್ಟು ಹಣವನ್ನು ಬಿಜೆಪಿ ಪಡೆದಿದೆ.

474 (ಮೊತ್ತ ಕೋಟಿ ರೂ.ಗಳಲ್ಲಿ)

ಒಬ್ಬರ ದಾನದ ಮೊತ್ತ 20,000 ರೂ.ಗಳಿಗಿಂತ ಮೇಲ್ಪಟ್ಟು ಇದ್ದರೆ ಪಕ್ಷಗಳು ದಾನಿಯ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು.

ಜ್ಞಾತ ಮೂಲಗಳು - 474 ಕೋಟಿ
ಅಜ್ಞಾತ ಮೂಲಗಳು - 553.4 ಕೋಟಿ

ಬಿಜೆಪಿಯ ಸುಮಾರು 96%ದಷ್ಟು ಆದಾಯ ಸ್ವ ಇಚ್ಛೆಯ ದೇಣಿಗೆಯಿಂದ ಬಂದಿದ್ದು, ಅದರಲ್ಲಿ ಅರ್ಧದಷ್ಟು ಅಜ್ಞಾತ ದಾನಿಗಳದ್ದಾಗಿದೆ.

ಕಾಂಗ್ರೆಸ್‌ 199.2

ಜ್ಞಾತ ಮೂಲಗಳು - 79.3

ಅಜ್ಞಾತ ಮೂಲಗಳು - 119.9

ಸಿಪಿಎಂ - 104.9

ನಿಧಿ ಮಾಹಿತಿ ಲಭ್ಯವಿಲ್ಲ

ಬಿಎಸ್‌ಪಿ - 51.7

ಜ್ಞಾತ ಮೂಲಗಳು - 41

ಅಜ್ಞಾತ ಮೂಲಗಳು - 10.7

ಎನ್‌ಸಿಪಿ- 8.2

ಜ್ಞಾತ ಮೂಲಗಳು -2.8

ಅಜ್ಞಾತ ಮೂಲಗಳು - 5.4

ಟಿಎಂಸಿ - 5.2

ಜ್ಞಾತ ಮೂಲಗಳು - 5.1

ಅಜ್ಞಾತ ಮೂಲಗಳು- 0.1

ಸಿಪಿಐ 1.6

ಜ್ಞಾತ ಮೂಲಗಳು - 1.5

ಅಜ್ಞಾತ ಮೂಲಗಳು - 0.01

ದೊಡ್ಡ ಜ್ಞಾತ ದಾನಿಗಳು

ಒಟ್ಟಾರೆ ದೇಣಿಗೆಯ 32%ನಷ್ಟು 16 ದೊಡ್ಡ ಕಂಪನಿಗಳ ಚುನಾವಣಾ ಟ್ರಸ್ಟ್‌ಗಳಿಂದ ಬಂದಿವೆ. ಕಂಪನಿಗಳು ತಾವು ಚುನಾವಣೆ ವೆಚ್ಚಕ್ಕೆ ಎಷ್ಟು ಹಣ ಒದಗಿಸಿದ್ದೇವೆ ಎಂಬ ಬಗ್ಗೆ ದಾಖಲೆಗಳನ್ನು ಆಯೋಗಕ್ಕೆ ನೀಡುತ್ತವೆ. ಆದರೆ ತಾವು ಯಾವ ಪಕ್ಷಕ್ಕೆ ನೀಡಿದ್ದೇವೆ ಎಂಬ ಕುರಿತು ಮಾಹಿತಿ ನೀಡಬೇಕಿಲ್ಲ.

ಚುನಾವಣಾ ಟ್ರಸ್ಟ್‌ಗಳು/194 ಕೋಟಿ ರೂ./ (ಒಟ್ಟಾರೆ ದೇಣಿಗೆ)

(ಮೊತ್ತ ಕೋಟಿಗಳಲ್ಲಿ)

52 ಡಿಎಲ್‌ಎಫ್‌ ಗ್ರೂಪ್‌

33 ಭಾರ್ತಿ ಗ್ರೂಪ್‌

22 ಶ್ರಾಫ್‌ ಗ್ರೂಪ್‌

22.5 ಆದಿತ್ಯ ಬಿರ್ಲಾ ಗ್ರೂಪ್‌

20 ಟೊರೆಂಟ್‌ ಗ್ರೂಪ್‌

10 ಕ್ಯಾಡಿಲಾ ಗ್ರೂಪ್‌

2 ಈದ್‌ ಪಾರ್ಟಿ

33.9 ಇತರರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ