ಆ್ಯಪ್ನಗರ

50 ಕೋಟಿ ರೂ. ಕೊಟ್ಟರೆ ಮೋದಿ ಕೊಲ್ಲುವೆ ಎಂದ ಮಾಜಿ ಯೋಧ ಬಹದ್ದೂರ್‌

ಯಾರಾದರೂ ತಮಗೆ 50 ಕೋಟಿ ರೂ ಕೊಟ್ಟರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಸಿದ್ಧ ಎಂದ ಮಾಜಿ ಯೋಧ ತೇಜ್‌ ಬಹದ್ದೂರ್‌ ಯಾದವ್‌ ಹೇಳಿದ್ದಾರೆ...

Vijaya Karnataka 6 May 2019, 9:52 pm
ಹೊಸದಿಲ್ಲಿ: ಯಾರಾದರೂ ತಮಗೆ 50 ಕೋಟಿ ರೂ. ಕೊಟ್ಟರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಸಿದ್ಧ ಎಂದ ಮಾಜಿ ಯೋಧ ತೇಜ್‌ ಬಹದ್ದೂರ್‌ ಯಾದವ್‌ ಹೇಳಿದ್ದಾರೆ.
Vijaya Karnataka Web ತೇಜ್‌ ಬಹದ್ದೂರ್‌ ಯಾದವ್‌
ತೇಜ್‌ ಬಹದ್ದೂರ್‌ ಯಾದವ್


ಈ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ. ಇದರ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ವಕ್ತಾರ ಜಿ.ವಿ.ಎಲ್‌ ನರಸಿಂಹ ರಾವ್‌, 'ಹತ್ಯೆ ಬೆದರಿಕೆಯನ್ನು ತನಿಖಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಬೇಕು. ವಿಡಿಯೊದಲ್ಲಿ ಸ್ನೇಹಿತರಿಗೆ ತೇಜ್‌ ಹೇಳುತ್ತಿರುವ ಮಾತುಗಳು ಭಯ ಹುಟ್ಟಿಸುತ್ತವೆ. ಆತನಿಗೆ ಎಸ್‌ಪಿಯಿಂದ ಟಿಕೆಟ್‌ ನೀಡಲಾಗಿದ್ದ ವಿಚಾರ ನಮಗೆ ಅಚ್ಚರಿ ಮತ್ತು ಆತಂಕ ಮೂಡಿಸಿತ್ತು ' ಎಂದಿದ್ದಾರೆ.

ವಿಡಿಯೊ ಎರಡು ವರ್ಷ ಹಳೆಯದು ಎನ್ನಲಾಗಿದೆ. ಈ ನಡುವೆ, ವಾರಾಣಸಿ ಕ್ಷೇತ್ರದ ಚುನಾವಣಾಧಿಕಾರಿ ತಮ್ಮ ನಾಮಪತ್ರ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ತೇಜ್‌ ಬಹದ್ದೂರ್‌ ಸೋಮವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಎರಡು ನಾಮಪತ್ರ ಸಲ್ಲಿಸಿದ್ದ ಬಹದ್ದೂರ್‌, ಸೇನೆಯಿಂದ ವಜಾಗೊಂಡ ಕುರಿತು ಗೊಂದಲ ಮಾಹಿತಿ ನೀಡಿದ್ದರಿಂದ ನಾಮಪತ್ರ ತಿರಸ್ಕರಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ