ಆ್ಯಪ್ನಗರ

ರಜನಿ ಪಾಲಿಟಿಕ್ಸ್‌: ತಮಿಳರನ್ನು ಸೆಳೆಯಲು ಬೆಂಗಳೂರು ಮೊರೆ

ರಜನಿ ತಮ್ಮ ರಾಜಕೀಯ ಪ್ರವೇಶಕ್ಕೆ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರ ಮೊರೆ ಹೋಗಿದ್ದಾರೆ.

ವಿಕ ಸುದ್ದಿಲೋಕ 30 May 2017, 12:18 pm
ಸೂಪರ್‌ ಸ್ಟಾರ್‌ ರಜನಿಕಾಂತ್‌ ರಾಜಕೀಯ ಪ್ರವೇಶ ದಿನೇ ದಿನೇ ಹೊಸ ತಿರುವು ಪಡೆದುಕೊಳುತ್ತಿದೆ. ಈಗ ಹೊಸ ಸುದ್ದಿ ಏನಪ್ಪಾ ಅಂದರೆ ರಜನಿ ತಮ್ಮ ರಾಜಕೀಯ ಪ್ರವೇಶಕ್ಕೆ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರ ಮೊರೆ ಹೋಗಿದ್ದಾರೆ.
Vijaya Karnataka Web a bengaluru agency is helping rajinikanth for his political debut
ರಜನಿ ಪಾಲಿಟಿಕ್ಸ್‌: ತಮಿಳರನ್ನು ಸೆಳೆಯಲು ಬೆಂಗಳೂರು ಮೊರೆ


ಹೌದು, ತಮಿಳುನಾಡಿನ ಮತದಾರರನ್ನು ಸೆಳೆಯಲು ರಜನಿಕಾಂತ್‌ ಬೆಂಗಳೂರಿನ ಖಾಸಗಿ ಸಂಸ್ಥೆಯ ಸಹಾಯ ಪಡೆಯಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ತಮಿಳುನಾಡಿನ ಪ್ರಚಲಿತ ವಿಷಯಗಳನ್ನು ಬಂಡವಾಳವಾಗಿಸಿಕೊಂಡು ಸಕ್ರಿಯ ರಾಜಕಾರಣಕ್ಕೆ ಇಳಿಯಲು ರಜನಿ ಸಕಲ ತಯಾರಿ ನಡೆಸುತ್ತಿದ್ದಾರೆ. ರಜನಿ ರಾಜಕೀಯ ನಡೆಗೆ ಬಲ ನೀಡಲು ಈ ಖಾಸಗಿ ಸಂಸ್ಥೆ ಸನ್ನದ್ಧವಾಗಿದೆಯಂತೆ.

ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿರುವ ರಜನಿ, ಯಾವುದೇ ಪಕ್ಷವನ್ನು ಸೇರದೆ ತಮ್ಮದೇ ಸ್ವಂತ ಪಕ್ಷ ಹುಟ್ಟುಹಾಕಲು ಯೋಚಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿದ್ದವು. ರಜನಿ ಹೊಸ ಪಕ್ಷವು 2019ರಲ್ಲಿ ನಡೆಯುವ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಕೊಳ್ಳಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಜುಲೈ ತಿಂಗಳ ಅಂತ್ಯದಲ್ಲಿ ರಜನಿ ತಮ್ಮ ಹೊಸ ಪಕ್ಷ ಘೋಷಿಸುವ ಸಾಧ್ಯತೆಯಿದೆ.

ಇತ್ತೀಚೆಗಷ್ಟೇ ಅಭಿಮಾನಿಗಳನ್ನು ಭೇಟಿಯಾದ ರಜನಿ, ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದ್ದರು. ಮತ್ತೊಂದು ಸಂಗತಿಯೆಂದರೆ ತಮ್ಮ ನಾಮಬಲ ಹಾಗೂ ಪ್ರಭಾವದಿಂದಲೇ ಅಧಿಕಾರದ ಗದ್ದುಗೆ ಏರುವ ಖಾತ್ರಿಯನ್ನೂ ರಜನಿಕಾಂತ್‌ ಹೊಂದಿಲ್ಲ. ಹಾಗಾಗಿ ತಮಿಳುನಾಡಿನ ಡಿಎಂಕೆ, ಅಣ್ಣಾಡಿಎಂಕೆ ಹಾಗೂ ಕಾಂಗ್ರೆಸ್ಸಿನಲ್ಲಿ ಕಡೆಗಣಿಸಲ್ಪಟ್ಟಿರುವ ಪ್ರಭಾವಿ ನಾಯಕರಿಗೆ ಗಾಳ ಹಾಕಲು ಆರಂಭಿಸಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌