ಆ್ಯಪ್ನಗರ

ಸುಶಾಂತ್‌ ಸಿಂಗ್‌ ರಜಪೂತ್‌ ರಸ್ತೆ! ವಿಶೇಷವಾಗಿ ಪ್ರೀತಿ ವ್ಯಕ್ತಪಡಿಸಿದ ತವರೂರಿನ ಅಭಿಮಾನಿಗಳು

ಸುಶಾಂತ್‌ ಅಗಲಿಕೆಯಿಂದ ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ಸಾಧ್ಯವಾದ ಎಲ್ಲ ರೀತಿಯಿಂದಲೂ ತಮ್ಮ ನೆಚ್ಚಿನ ನಟನ ನೆನಪನ್ನು ಶಾಶ್ವತವಾಗಿಸಲು ಫ್ಯಾನ್ಸ್‌ ಪ್ರಯತ್ನಿಸುತ್ತಿದ್ದು, ಬಿಹಾರದಲ್ಲಿನ ರಸ್ತೆಗೆ ಸುಶಾಂತ್‌ ಹೆಸರನ್ನೇ ಇಡಲಾಗಿದೆ!

Vijaya Karnataka Web 11 Jul 2020, 11:56 am
ಬಾಲಿವುಡ್‌ನಲ್ಲಿ ಈಗತಾನೆ ಭದ್ರ ನೆಲೆ ಕಂಡುಕೊಳ್ಳುತ್ತಿದ್ದ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ದೊಡ್ಡ ಮಟ್ಟಕ್ಕೆ ಬೆಳೆಯಬೇಕಾಗಿದ್ದ ಪ್ರತಿಭಾವಂತ ಯುವಕ ಹೀಗೆ ಬದುಕಿಗೆ ಹೆದರಿಕೊಂಡು ಸಾವಿನ ಹಾದಿ ಹಿಡಿದಿದ್ದು ನಿಜಕ್ಕೂ ನೋವಿನ ಸಂಗತಿ. ತಮ್ಮ ನೆಚ್ಚಿನ ನಟನ ಅಗಲಿಕೆಯಿಂದ ನೊಂದಿರುವ ಅಭಿಮಾನಿಗಳು ಹಲವು ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.
Vijaya Karnataka Web a road in purnea district of bihar named after sushant singh rajput
ಸುಶಾಂತ್‌ ಸಿಂಗ್‌ ರಜಪೂತ್‌ ರಸ್ತೆ! ವಿಶೇಷವಾಗಿ ಪ್ರೀತಿ ವ್ಯಕ್ತಪಡಿಸಿದ ತವರೂರಿನ ಅಭಿಮಾನಿಗಳು


ಸುಶಾಂತ್‌ ಸಿಂಗ್‌ ರಜಪೂತ್‌ ಮೂಲತಃ ಬಿಹಾರದವರು. ಅಲ್ಲಿನ ಪೂರ್ಣಿಯಾ ಜೆಲ್ಲೆಯಲ್ಲಿ ಅವರು ಬಾಲ್ಯ ಕಳೆದಿದ್ದರು. ಅದೇ ಊರಿನ ಒಂದು ರಸ್ತೆಗೆ ಈಗ 'ಸುಶಾಂತ್‌ ಸಿಂಗ್‌ ರಜಪೂತ್‌ ರಸ್ತೆ' ಎಂದು ಹೆಸರು ಇಡಲಾಗಿದೆ. ಈ ಮೂಲಕ ಸುಶಾಂತ್‌ ಅವರ ಹೆಸರನ್ನು ಅಮರವಾಗಿಸುವ ಕಾರ್ಯ ನಡೆದಿದೆ. 'ಇದು ಸುಶಾಂತ್‌ಗೆ ನಾವು ಸಲ್ಲಿಸುವ ಗೌರವ' ಎಂದು ಅಲ್ಲಿನ ಮೇಯರ್‌ ಹೇಳಿದ್ದಾರೆ.

ಜು. 14ರಂದು ತಮ್ಮ ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ಕೊನೆಯುಸಿರೆಳೆದ ಸುಶಾಂತ್‌ ಅವರ ಮರಣೋತ್ತರ ಪರೀಕ್ಷೆ ವರದಿ ಕೆಲವು ದಿನಗಳ ಹಿಂದೆ ಬಂದಿದ್ದು, ಅದರ ಪ್ರಕಾರವಾಗಿ ಇದು ಆತ್ಮಹತ್ಯೆ ಎಂಬುದು ಗೊತ್ತಾಗಿದೆ. ಹಾಗಿದ್ದರೂ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಒತ್ತಾಯ ಹೇಳಿಬರುತ್ತಿದೆ. ನಟ ಶೇಖರ್‌ ಸುಮನ್‌ ಸೇರಿದಂತೆ ಅನೇಕರು ಈ ಕುರಿತು ಧ್ವನಿ ಎತ್ತುತ್ತಿದ್ದಾರೆ. ಸುಶಾಂತ್‌ ಸಾವಿಗೆ ಕಾರಣ ಆದವರಿಗೆ ಸೂಕ್ತ ಶಿಕ್ಷೆ ಆಗಬೇಕು ಎಂದು ಅಭಿಮಾನಿಗಳು ಕೂಡ ಪಟ್ಟು ಹಿಡಿದಿದ್ದಾರೆ.

also read: ಸುಶಾಂತ್‌ ಸಿಂಗ್‌ ಮಾಜಿ ಗೆಳತಿ ಅಂಕಿತಾ ಅವರ ಪ್ರಿಯತಮನ ಮೇಲೆ ನೆಟ್ಟಿಗರು ಗರಂ!

ಸುಶಾಂತ್‌ ನಟಿಸಿದ ಕೊನೇ ಸಿನಿಮಾ 'ದಿಲ್‌ ಬೇಚಾರ' ಜು.24ರಂದು ಬಿಡುಗಡೆ ಆಗಲಿದೆ. ಈ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಆದರೆ ಸದ್ಯ ಲಾಕ್‌ಡೌನ್‌ ಇರುವುದರಿಂದ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿಲ್ಲ. ಹಾಗಾಗಿ ಚಿತ್ರಮಂದಿಗಳಲ್ಲಿ ತೆರೆಕಾಣುವ ಬದಲು ನೇರವಾಗಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿಯೇ 'ದಿಲ್‌ ಬೇಚಾರ' ವೀಕ್ಷಣೆಗೆ ಲಭ್ಯ ಆಗಲಿದೆ.

also read: ಸುಶಾಂತ್ ಸಿಂಗ್ ರಜಪೂತ್‌ ಕೇಸ್‌ನಲ್ಲಿ ನಿಟ್ಟುಸಿರು ಬಿಟ್ಟ ಸಲ್ಮಾನ್ ಖಾನ್, ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌