ಆ್ಯಪ್ನಗರ

ತಂದೆಗೆ ಫಿಟ್ನೆಸ್‌ ಪಾಠ ಹೇಳಿಕೊಡಲು ಬಂದ ಟ್ರೇನರ್‌ ಜೊತೆ ಆಮೀರ್‌ ಖಾನ್‌ ಪುತ್ರಿಯ ಪ್ರೀತಿ-ಪ್ರೇಮ?

ಬಾಲಿವುಡ್‌ ನಟ ಆಮೀರ್‌ ಖಾನ್‌ ಅವರ ಪುತ್ರಿ ಇರಾ ಖಾನ್‌ ಚಿತ್ರರಂಗ ಪ್ರವೇಶಿಸುವುದಕ್ಕಿಂತ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸೆಲೆಬ್ರಿಟಿ ಟ್ರೇನರ್‌ ಜೊತೆಗೆ ಅವರು ಪ್ರೀತಿಯಲ್ಲಿ ಮುಳುಗಿದ್ದಾರೆ ಎಂಬುದಕ್ಕೆ ಈಗ ಕೆಲವು ಫೋಟೋಗಳು ಸಾಕ್ಷಿ ಒದಗಿಸುತ್ತಿವೆ.

Vijaya Karnataka Web 25 Nov 2020, 11:10 am
ಹಲವು ಕಾರಣಗಳಿಗಾಗಿ ಸುದ್ದಿ ಆಗುತ್ತಿದ್ದಾರೆ ಇರಾ ಖಾನ್‌. ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸಕ್ರಿಯ ಆಗಿರುವ ಅವರು ಇತ್ತೀಚೆಗೆ ತಮ್ಮ ಖಾಸಗಿ ಬದುಕಿನ ವಿಚಾರಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಆದರೆ ಅವರು ಗುಟ್ಟಾಗಿ ಇರಿಸಿರುವ ಡೇಟಿಂಗ್ ವಿಚಾರ ಕೂಡ ಬಹಿರಂಗ ಆಗಿದೆ. ಆಮೀರ್‌ ಖಾನ್‌ ಪುತ್ರಿಯ ಲವ್‌ ಸ್ಟೋರಿ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ.
Vijaya Karnataka Web ಇರಾ ಖಾನ್‌ ನೂಪುರ್‌ ಶಿಖಾರೆ


ಈ ಹಿಂದೆ ಮಿಶಾಲ್‌ ಕೃಪಲಾನಿ ಜೊತೆ ಇರಾ ಖಾನ್‌ ಪ್ರೀತಿಯಲ್ಲಿ ಮುಳುಗಿದ್ದರು. ಇಬ್ಬರ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದವು. ಆದರೆ ಆ ಪ್ರೀತಿಗೆ ಅಂತ್ಯ ಹಾಡಲಾಯಿತು. ಮಿಶಾಲ್‌ ಜೊತೆಗೆ ಬ್ರೇಕಪ್‌ ಮಾಡಿಕೊಂಡ ಬಳಿಕ ಇರಾ ಈಗ ಹೊಸ ಪ್ರೀತಿ ಕಂಡುಕೊಂಡಿದ್ದಾರೆ. ಸೆಲೆಬ್ರಿಟಿ ಟ್ರೇಲರ್‌ ನೂಪುರ್‌ ಶಿಖಾರೆ ಮತ್ತು ಇರಾ ಖಾನ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬಂದಿದೆ.

ಫಿಟ್ನೆಸ್‌ ಬಗ್ಗೆ ಆಮೀರ್ ಖಾನ್‌ ಹೆಚ್ಚು ಕಾಳಜಿ ವಹಿಸುತ್ತಾರೆ. ಅವರಿಗೆ ಟ್ರೇನಿಂಗ್‌ ನೀಡಲು ನೂಪುರ್‌ ಬರುತ್ತಿದ್ದರು. ಅಲ್ಲದೆ, ಇರಾ ಅವರಿಗೂ ನೂಪುರ್‌ ಫಿಟ್ನೆಸ್‌ ಪಾಠ ಮಾಡಿದ್ದಾರೆ. ಈ ಲಾಕ್‌ಡೌನ್‌ ಸಮಯದಲ್ಲಿ ಇಬ್ಬರ ನಡುವೆ ಆಪ್ತತೆ ಹೆಚ್ಚಾಗಿದೆ. ಅದು ಈಗ ಪ್ರೀತಿಗೆ ತಿರುಗಿದೆ ಎಂಬ ಮಾತು ಬಾಲಿವುಡ್‌ ವಲಯದಿಂದ ಕೇಳಿಬಂದಿದೆ. ತಮ್ಮ ಖಿನ್ನತೆ ಬಗ್ಗೆ ಮನಬಿಚ್ಚಿ ಮಾತನಾಡಿರುವ ಇರಾ, ಲವ್‌ ಬಗ್ಗೆ ಸದ್ಯಕ್ಕೆ ಮೌನ ತಾಳಿದ್ದಾರೆ.

also read: ನಟ ಆಮೀರ್ ಖಾನ್‌ ಮಗಳಿಗೆ ಡಿಪ್ರೆಶನ್‌: ಸಲಹೆ ಕೊಟ್ಟವರಿಗೆ ಖಾರವಾಗಿ ಮಾತನಾಡಿದ ಇರಾ ಖಾನ್!

ನೂಪುರ್‌ ಮತ್ತು ಇರಾ ಖಾನ್‌ ಜೊತೆಗೆ ಇರುವ ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ ಇವರಿಬ್ಬರೂ ಜೊತೆಯಾಗಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಅಲ್ಲದೆ, ಒಟ್ಟಿಗೆ ವರ್ಕೌಟ್‌ ಮಾಡುತ್ತಿರುವ ಅನೇಕ ವಿಡಿಯೋಗಳನ್ನು ನೂಪುರ್‌ ಹಂಚಿಕೊಂಡಿದ್ದಾರೆ. ಇಬ್ಬರ ನಡುವೆ ಇರುವ ಆಪ್ತತೆ ನೋಡಿದರೆ ಗಂಭೀರವಾಗಿಯೇ ಪರಸ್ಪರ ಪ್ರೀತಿಸುತ್ತಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ ನೆಟ್ಟಿಗರು.

also read: ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಬಾಯಿಬಿಟ್ಟ ಆಮೀರ್ ಖಾನ್ ಮಗಳು ಇರಾ ಖಾನ್!

View this post on Instagram A post shared by Popeye ⚓ (@nupur_shikhare)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌