ಆ್ಯಪ್ನಗರ

ಕೊರೊನಾ ಹೊಡೆತಕ್ಕೆ ಸಿಲುಕಿದ ಆಮೀರ್ ಖಾನ್ ಸಿನಿಮಾ! 'ಲಾಲ್ ಸಿಂಗ್ ಛಡ್ಡಾ' ರಿಲೀಸ್ ಯಾವಾಗ?

ಬಾಲಿವುಡ್‌ ನಟ ಆಮೀರ್ ಖಾನ್ ಅವರ ಮುಂದಿನ ಸಿನಿಮಾ 'ಲಾಲ್ ಸಿಂಗ್ ಛಡ್ಡಾ' ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ. ಈ ವರ್ಷದ ಅಂತ್ಯಕ್ಕೆ ಆ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಈಗ ಎಲ್ಲವೂ ಅದಲು ಬದಲಾಗಿದೆ!

Vijaya Karnataka Web 10 Aug 2020, 4:55 pm
ನಟ ಆಮೀರ್ ಖಾನ್ ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು 'ಥಗ್ಸ್ ಆಫ್‌ ಹಿಂದೂಸ್ತಾನ್‌' ಸಿನಿಮಾದ ಮೂಲಕ. ಭಾರಿ ಬಜೆಟ್‌ನ ಆ ಸಿನಿಮಾ ಅಷ್ಟೇನೂ ಯಶಸ್ಸು ಕಾಣಲಿಲ್ಲ. ಆದಾದ ಮೇಲೆ ಅವರು 'ಲಾಲ್ ಸಿಂಗ್ ಛಡ್ಡಾ' ಸಿನಿಮಾ ಮಾಡೋಕೆ ಮುಂದಾದರು. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಕ್ರಿಸ್‌ಮಸ್ ಹಬ್ಬದ ವೇಳೆಗೆ ಆ ಸಿನಿಮಾ ತೆರೆಗೆ ಬರಬೇಕಿತ್ತು. ಎರಡು ವರ್ಷಗಳಿಂದ ಅವರನ್ನು ತೆರೆಮೇಲೆ ಮಿಸ್ ಮಾಡಿಕೊಂಡಿದ್ದ ಅಭಿಮಾನಿಗಳು, ಆಗ ಅವರನ್ನು ತೆರೆಮೇಲೆ ನೋಡಬಹುದಿತ್ತು. ಆದರೀಗ ಕೊರೊನಾ ಮಾಡಿದ ಅವಾಂತರಗಳಿಂದ ಎಲ್ಲ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿದೆ!
Vijaya Karnataka Web aamir khan kareena kapoor khan starrer laal singh chaddha movie release date postponed
ಕೊರೊನಾ ಹೊಡೆತಕ್ಕೆ ಸಿಲುಕಿದ ಆಮೀರ್ ಖಾನ್ ಸಿನಿಮಾ! 'ಲಾಲ್ ಸಿಂಗ್ ಛಡ್ಡಾ' ರಿಲೀಸ್ ಯಾವಾಗ?


ಒಂದು ವರ್ಷ ಮುಂದಕ್ಕೆ ಹೋಯ್ತು 'ಲಾಲ್ ಸಿಂಗ್'!
ಆಮೀರ್ ಖಾನ್‌ ಅಭಿನಯದ 'ಲಾಲ್ ಸಿಂಗ್ ಛಡ್ಡಾ' ಬಿಡುಗಡೆ ದಿನಾಂಕ ಪೋಸ್ಟ್‌ಪೋನ್ ಆಗಿದೆ. ಅದು ಒಂದೆರಡು ತಿಂಗಳಲ್ಲ, ಬರೋಬ್ಬರಿ ಒಂದು ವರ್ಷ! ಹೌದು, ಈ ಚಿತ್ರಕ್ಕೆ ಈಗಾಗಲೇ ಶೇ.60ರಿಂದ 70 ಭಾಗ ಚಿತ್ರೀಕರಣ ಮುಕ್ತಾಯಗೊಂಡಿತ್ತು. ಕೊರೊನಾ ಕಿರಿಕಿರಿ ಇಲ್ಲದೇ ಇದ್ದರೆ, ಇಷ್ಟೊತ್ತಿಗೆ ಎಲ್ಲ ಕೆಲಸಗಳು ಮುಗಿದು, ಈ ಡಿಸೆಂಬರ್‌ ವೇಳೆಗೆ ಬಿಡುಗಡೆ ಸಿದ್ಧವಾಗುತ್ತಿತ್ತು. ಆದರೆ, ಕೊರೊನಾದಿಂದಾಗಿ ಅಂದುಕೊಂಡ ಯೋಜನೆಗಳೆಲ್ಲ ತಲೆಕೆಳಗೆ ಆಗಿವೆ.

ಮೂರು ವರ್ಷ ಆಮೀರ್ ಮಿಸ್ಸಿಂಗ್!
ಈಗ ತಿಳಿದುಬಂದಿರುವ ಮಾಹಿತಿ ಪ್ರಕಾರ, 2021ರ ಕ್ರಿಸ್‌ಮಸ್‌ ಹಬ್ಬಕ್ಕೆ ಈ ಸಿನಿಮಾವನ್ನು ರಿಲೀಸ್ ಮಾಡಬೇಕು ಎಂಬುದು ನಿರ್ಮಾಪಕರ ಯೋಜನೆಯಾಗಿದೆ. ಅಲ್ಲಿಗೆ ಬರೋಬ್ಬರಿ ಮೂರು ವರ್ಷ ಆಮೀರ್ ಖಾನ್ ತೆರೆಯಿಂದ ಮಿಸ್ ಆಗಲಿದ್ದಾರೆ. ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವುದರಿಂದ ಮುಂದೇನು ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಹಾಗಾಗಿಯೇ ಉಳಿದ ಶೇ.30 ಭಾಗ ಚಿತ್ರೀಕರಣ ಮುಗಿಸಲು ದೀರ್ಘಾವಧಿಯ ಸಮಯ ತೆಗೆದುಕೊಂಡಿದೆ 'ಲಾಲ್ ಸಿಂಗ್..' ತಂಡ.

ಜೀವನೋಪಾಯಕ್ಕಾಗಿ ಆಮೀರ್ ಖಾನ್ ಸಿನಿಮಾದ ನಟ ತರಕಾರಿ ಮಾರುತ್ತಿರೋದು ಸುಳ್ಳು!

ಕನ್ನಡಿಗ ಅತುಲ್ ಚಿತ್ರಕಥೆ
'ಲಾಲ್ ಸಿಂಗ್‌ ಛಡ್ಡಾ' ಹಾಲಿವುಡ್‌ನ 'ಫಾರೆಸ್ಟ್ ಗಂಪ್' ಚಿತ್ರದ ಸ್ಫೂರ್ತಿಯಿಂದ ನಿರ್ಮಾಣವಾಗುತ್ತಿರುವ ಸಿನಿಮಾ. ಇದನ್ನು ಭಾರತದ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿ, ಚಿತ್ರಕಥೆ ಬರೆದಿರುವುದು ಬೆಳಗಾವಿ ಮೂಲದ ಬಾಲಿವುಡ್‌ ನಟ ಅತುಲ್ ಕುಲಕರ್ಣಿ. ಇದಕ್ಕಾಗಿ ಅವರು ವರ್ಷಗಟ್ಟಲೇ ಸಮಯವನ್ನು ವಿನಿಯೋಗಿಸಿದ್ದಾರಂತೆ. ಇದರ ನಿರ್ದೇಶನದ ಹೊಣೆ ಅದ್ವೈತ್ ಚಂದನ್‌ ಅವರದ್ದು. ನಾಯಕಿಯಾಗಿ ಕರೀನಾ ಕಪೂರ್ ಖಾನ್ ನಟಿಸುತ್ತಿದ್ದು, ಮುಖ್ಯ ಪಾತ್ರವೊಂದಕ್ಕೆ ವಿಜಯ್ ಸೇತುಪತಿ ಬಣ್ಣ ಹಚ್ಚಿದ್ದಾರೆ.

ಕಳೆಯಿತು ಕೊರೊನಾ ಕಂಟಕ; ಅಂತೂ ನಿಟ್ಟುಸಿರು ಬಿಟ್ಟ ಬಾಲಿವುಡ್‌ ನಟ ಆಮೀರ್ ಖಾನ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌