ಆ್ಯಪ್ನಗರ

ಸೋಷಿಯಲ್‌ ಮೀಡಿಯಾದಲ್ಲಿ ಲೀಕ್‌ ಆದ ಅಮಿರ್‌ಖಾನ್‌ ಹೊಸ ಲುಕ್‌

ಅಮೀರ್ ಖಾನ್ ಸಿನಿಮಾಗಳೆಂದರೆ ಪಕ್ಕಾ ಪ್ಲ್ಯಾನಿಂಗ್ ಪ್ರಕಾರ ಚಿತ್ರೀಕರಣ ನಡೆಯುತ್ತದೆ ಎಂಬ ಮಾತಿದೆ. ಆದರೆ ಇದೀಗ ಲಾಲ್ ಸಿಂಗ್ ಚಡ್ಡಾ ಚಿತ್ರದ ಫೋಟೋ ಒಂದು ಲೀಕ್ ಆಗಿದ್ದು ಅಮೀರ್ ಲುಕ್ ಗಮನಸೆಳೆದಿದೆ.

Vijaya Karnataka 2 Mar 2020, 8:41 pm
ಸೇನಾ ಸಮವಸ್ತ್ರದಲ್ಲಿರುವ ಅಮೀರ್ ಖಾನ್ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್‌ ಆಗಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಪಡೆದಿದೆ. ಎರಡು ವರ್ಷಗಳ ಕಾಲ ಬೆಳ್ಳೆತೆರೆಯಿಂದ ದೂರವಿದ್ದ ಅಮೀರ್ ಖಾನ್ರ ಮುಂದಿನ ಚಿತ್ರ 'ಲಾಲ್‌ ಸಿಂಗ್‌ ಚಡ್ಡಾ'ಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
Vijaya Karnataka Web ಅಮೀರ್ ಖಾನ್


ಈ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ಗಳು ಈಗಾಗಲೇ ಮೂವೀ ಬಫ್‌ಗಳಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿವೆ. ಈ ಚಿತ್ರದ ಸೆಟ್‌ನಲ್ಲಿ ಅಭಿಮಾನಿಯೊಬ್ಬರು ಅಮೀರ್ ಖಾನ್ರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನು ಅಮೀರ್ ಖಾನ್ ಫ್ಯಾನ್‌ ಕ್ಲಬ್‌ ತನ್ನ ಇನ್‌ಸ್ಟಾ ಅಕೌಂಟ್‌ನಲ್ಲಿ ಶೇರ್‌ ಮಾಡಿದೆ.

ಆರ್ಮಿ ಯೂನಿಫಾರ್ಮ್ ಮೇಲೆ ಲಾಲ್‌ ಸಿಂಗ್‌ ಚಡ್ಡಾ ಹೆಸರಿದ್ದು, ಕ್ಲೀನ್‌ ಶೇವ್‌, ಶಾರ್ಟ್‌ ಹೇರ್‌, ಗ್ಲಾಸಸ್‌ ಧರಿಸಿರುವ ಅಮೀರ್ ಖಾನ್ರ ಡ್ಯಾಶಿಂಗ್‌ ಹಾಗೂ ಯಂಗ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಇದೇ ಚಿತ್ರದ ಸರ್ದಾರ್‌ ಲುಕ್‌ಗೆ ಕೂಡ ಅಭಿಮಾನಿಗಳು ಸಂತಸ ವ್ಯಕ್ತಪಡಿದ್ದರು.

ಚಂದ್ರನ ಮೇಲೆ ಅಡಿಯಿಡಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್
ಅದ್ವೈತ್‌ ಚಂದನ್‌ ನಿರ್ದೇಶನದ ಲಾಲ್‌ ಸಿಂಗ್‌ ಚಡ್ಡಾ ಸಿನಿಮಾದಲ್ಲಿ ಕರೀನಾ ಕಪೂರ್‌, ತಮಿಳು ನಟ ವಿಜಯ್‌ ಸೇತುಪತಿ, ಮೋನಾ ಸಿಂಗ್‌ ಮುಂತಾದವರ ತಾರಾಬಳಗವಿದೆ. ಈ ವರ್ಷದ ಕ್ರಿಸ್‌ಮಸ್‌ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌